ETV Bharat / state

ಹೊಟ್ಟೆ ಕಿಚ್ಚು, ಅಸೂಯೆಗೆ ಮದ್ದಿಲ್ಲ.. ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ: ಡಿಸಿಎಂ ಡಿ ಕೆ ಶಿವಕುಮಾರ್​

ನಮ್ಮ ಗೆಲುವು ಸಹಿಸಲಾಗದೆ ವಿರೋಧ ಪಕ್ಷ ನಮ್ಮ ಮೇಲೆ ಒಂದಿಲ್ಲಾ ಒಂದು ಆರೋಪಗಳನ್ನು ಮಾಡುತ್ತಲೇ ಇದೆ ಎಂದು ಡಿ ಕೆ ಶಿವಕುಮಾರ್​ ಹೇಳಿದ್ದಾರೆ.

DCM D K Shivakumar
ಡಿಸಿಎಂ ಡಿ ಕೆ ಶಿವಕುಮಾರ್​
author img

By

Published : Aug 7, 2023, 3:48 PM IST

Updated : Aug 7, 2023, 5:59 PM IST

ಡಿಸಿಎಂ ಡಿ ಕೆ ಶಿವಕುಮಾರ್​

ಬೆಂಗಳೂರು: ಅಸೂಯೆಗೆ ಮದ್ದಿಲ್ಲ ಎಂದು ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ಪತ್ರ ಬರೆದಿರುವ ವಿಚಾರವಾಗಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್​ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಸದಾಶಿವನಗರದಲ್ಲಿ ಮಾತನಾಡಿದ ಅವರು, ಸಚಿವ ಚಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ ಪತ್ರದ ವಿಚಾರವಾಗಿ ಪ್ರತಿಕ್ರಿಯಿಸಿ, ತನಿಖೆ ಮಾಡಿಸೋಣ. ಪತ್ರ ಬರೆದಿರೋದು ನನಗೆ ಗೊತ್ತಿಲ್ಲ. ಅಸೂಯೆಗೆ ಮದ್ದು ಇಲ್ಲ ಎಂದು ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಪಾಪ ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ನಾವು ಮಂಡ್ಯದಲ್ಲಿ ಏಳಕ್ಕೆ ಆರು ಸೀಟು ಗೆದ್ದು ಬಿಟ್ಟಿದ್ದೀವಲ್ಲ ಅದು ಅವರಿಗೆ ಸಹಿಸಿಕೊಳ್ಳಲು ಆಗ್ತಿಲ್ಲ. ಹೊಟ್ಟೆಕಿಚ್ಚು ಮತ್ತು ಅಸೂಯೆಗೆ ಮದ್ದಿಲ್ಲ. ನಮ್ಮ ಮೇಲೆ ಅವರು ಬೇರೆ ಬೇರೆ ಆರೋಪಗಳನ್ನು ಮಾಡುತ್ತಿದ್ದಾರೆ. ಅದರ ಬಗ್ಗೆಯೂ ತನಿಖೆ ಮಾಡಿಸೋಣ ಎಂದರು.

ಮಲ್ಲೇಶ್ವರಂ, ಆರ್ ಆರ್ ನಗರದಲ್ಲಿ ಬಿಲ್ ಆಗ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನಮಗೂ ಜವಾಬ್ದಾರಿ ಇದೆ. ಮಾಜಿ ಸಚಿವ ಅಶ್ವತ್ಥನಾರಾಯಣ್​ ಅವರು ಈ ಬಗ್ಗೆ ತನಿಖೆ ಮಾಡಲೇಬೇಕು ಎಂದಿದ್ದಾರೆ. ಅವರ ನುಡಿಮುತ್ತುಗಳನ್ನ ನಾವು ಕೇಳಬೇಕಲ್ಲ. ಬೇರೆ ಕಡೆಯಲ್ಲಿ ಬಿಲ್ ಆಗೋದಕ್ಕೆ 3 ವರ್ಷ ಆಗಬೇಕು. ಯಾರು ಅಪ್ರೂವಲ್ ಕೊಟ್ಟರು ನೋಡಬೇಕು. ಈ ಬಗ್ಗೆ ತನಿಖೆಯಾಗಬೇಕು ಎಂದು ತಿಳಿಸಿದರು.

ಅಶ್ವತ್ಥನಾರಾಯಣ್​ ಬಿಲ್ ಕೊಡುತ್ತಿಲ್ಲ ಅಂತ ಆರೋಪ ಮಾಡಿದ್ರು. ವಿಧಾನಸಭೆಯಲ್ಲೂ ಈ ಬಗ್ಗೆ ಮಾತನಾಡಿದ್ದರು. ತನಿಖೆ ನಡೆಸಿ ಅಂತ ಆಗ್ರಹ ಮಾಡಿದ್ರು. ಬೆಂಗಳೂರಿನಲ್ಲಿ 20 ದಿನಕ್ಕೆ ಕಾಮಗಾರಿಗಳ ಬಿಲ್ ಮಾಡಿದ್ದಾರೆ. 15 ದಿನಕ್ಕೆ ಕಾಮಗಾರಿ ಬೆಂಗಳೂರಿನಲ್ಲಿ ಆಗುತ್ತಾ?. ನಮ್ಮ ಹಳ್ಳಿ ಕಡೆ‌ ಮೂರು ನಾಲ್ಕು ವರ್ಷಗಳು ಬೇಕಾಗುತ್ತದೆ. ಅದು ಹೇಗೆ ಒಂದು ತಿಂಗಳ ಒಳಗೆ ಕೆಲಸ ಮುಗಿಸಿದ್ದಾರೆ. ಹಾಗಾಗಿ ಅಧಿಕಾರಿಗಳಿಗೆ ಈ ಕಾಮಗಾರಿ ಬಗ್ಗೆ ಪರಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ. ಇಲ್ಲ ಅಂದ್ರೆ ನಮ್ಮ ಮೇಲೆ ಕೂಡ ದೂರು ಕೊಡ್ತಾರೆ ಎಂದು ಡಿಕೆಶಿ ವಾಗ್ದಾಳಿ ನಡೆಸಿದರು.

ಸ್ಪಂದನ ಸಾವಿಗೆ ಡಿಕೆಶಿ ಸಂತಾಪ: ನಟ ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಬ್ಯಾಂಕಾಕ್​ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಡಿಸಿಎಂ ಡಿ ಕೆ ಶಿವಕುಮಾರ್​ ಅವರು ಸಂತಾಪ ಸೂಚಿಸಿದರು. ಅವರ ತಂದೆ, ಕುಟುಂಬ ನನಗೆ ಗೊತ್ತು. ವಿಜಯ ರಾಘವೇಂದ್ರ ಅವರ ಕುಟುಂಬವೂ ಗೊತ್ತು. ಸ್ಪಂದನಾ ಅವರಿಗೆ ಚಿಕ್ಕ ವಯಸ್ಸಿನಲ್ಲಿ ಹೀಗೆ ಆಗಿದ್ದಕ್ಕೆ ದುಃಖ ಇದೆ. ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲಂಚದ ಆರೋಪಕ್ಕೆ ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ

Last Updated : Aug 7, 2023, 5:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.