ಬೆಂಗಳೂರು: ನಗರದ ಇನ್‌ಫ್ಯಾಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ. ಫೆಬ್ರವರಿ 21ರ ತಡರಾತ್ರಿ ಈ ಘಟನೆ ನಡೆದಿದೆ.
ಸಂಚಾರ ನಿರ್ವಹಣಾ ಕೇಂದ್ರ ಹಾಗೂ ಸಂಚಾರ ವಿಭಾಗದ ಜಂಟಿ ಆಯುಕ್ತರ ಕಚೇರಿ ಇರುವ ಕಟ್ಟಡದ ನೆಲಮಹಡಿಯಲ್ಲಿರುವ ಜನರೇಟರ್ಗೆ ಅಳವಡಿಸಲಾಗಿದ್ದ 2 ಬ್ಯಾಟರಿಗಳನ್ನ ಕಳ್ಳರು ಕದ್ದೊಯ್ದಿದ್ದಾರೆ. ಕಳವಾದ ಬ್ಯಾಟರಿಗಳ ಮೌಲ್ಯ ಸುಮಾರು 20 ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ನಗರದ ವಿವಿಧ ಟ್ರಾಫಿಕ್ ಸಿಗ್ನಲ್ಗಳಿಗೆ ಅಳವಡಿಸಿದ್ದ ಬ್ಯಾಟರಿಗಳನ್ನ ಕಳವು ಮಾಡುತ್ತಿದ್ದ ಸಿಕಂದರ್ ಹಾಗೂ ನಜ್ಮಾ ಎಂಬ ದಂಪತಿಯನ್ನ ಬಂಧಿಸಿದ್ದ ಅಶೋಕ ನಗರ ಠಾಣಾ ಪೊಲೀಸರು, 20 ಲಕ್ಷ ರೂ. ಮೌಲ್ಯದ 169 ಬ್ಯಾಟರಿಗಳನ್ನ ವಶಪಡಿಸಿಕೊಂಡಿದ್ದರು.
ಇದನ್ನೂ ಓದಿ: ಶ್ರೀನಗರದಲ್ಲಿ ಗ್ರೆನೇಡ್ ದಾಳಿ: ಸಾವಿನ ಸಂಖ್ಯೆ ಎರಡಕ್ಕೆ ಏರಿಕೆ