ETV Bharat / state

ಸಂಕಷ್ಟಗಳ ನಡುವೆಯೇ ಮುಗಿಯಿತು ಕಾರ್ಮಿಕರ ದಿನ : ಮುಂದೆಯೂ ಇವೆ ನೂರಾರು ಸಂಕಷ್ಟ! - ಸಂಕಷ್ಟಗಳ ನಡುವೆಯೇ ಮುಗಿಯಿತು ಕಾರ್ಮಿಕರ ದಿನ

ಶ್ರಮಿಕ ವರ್ಗ ಈ ಸಮಾಜ ಗೌರವಿಸಲಿ ಬಿಡಲಿ ತನ್ನ ಕಾರ್ಯ ತಾನು ಮುಂದುವರೆಸಿಕೊಂಡು ಹೋಗತ್ತದೆ. ಆದರೆ, ಈ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಕಾರ್ಮಿಕ ವರ್ಗಕ್ಕೆ ಹಿಂದೆಂದೂ ಆಗದಷ್ಟು ಅನ್ಯಾಯವಾಗಿದೆ.

The World day of labor
ಸಂಕಷ್ಟಗಳ ನಡುವೆಯೇ ಮುಗಿಯಿತು ಕಾರ್ಮಿಕರ ದಿನ
author img

By

Published : May 1, 2020, 11:30 PM IST

ಬೆಂಗಳೂರು : ಪ್ರತಿ ವರ್ಷ ಅದ್ದೂರಿಯಾಗಿ ಆಚರಣೆಯಾಗುತ್ತಿದ್ದ ಕಾರ್ಮಿಕರ ದಿನ ಈ ವರ್ಷ ಯಾವುದೇ ಸಡಗರ, ಸಂಭ್ರಮಗಳಿಲ್ಲದೇ ಮುಗಿದು ಹೋಗಿದೆ. ಕೊರೊನಾ ಭೀತಿಯಲ್ಲಿ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ಕೈಗಾರಿಕೆಗಳ ಆವರಣಗಳಲ್ಲಿ ನಡೆಯುತ್ತಿದ್ದ ಸಭೆ - ಸಮಾರಂಭ, ಸಮಾವೇಶ, ಚರ್ಚೆ ಯಾವುದೂ ಕಂಡುಬಂದಿಲ್ಲ. ಕಾರ್ಮಿಕ ಮುಖಂಡರು, ಸಮಾಜವಾದಿ ಚಿಂತಕರು ಹಾಗೂ ರಾಜಕೀಯ ನಾಯಕರು ಸಾಮಾಜಿಕ ಜಾಲ ತಾಣಗಳಲ್ಲಿ ಕಾರ್ಮಿಕರ ದಿನಾಚರಣೆಯ ಶುಭಾಶಯ ಕೋರಿದ್ದು ಬಿಟ್ಟರೆ ಬೇರಾವುದೇ ರೀತಿಯಲ್ಲೂ ಮೇ.1ರ ದಿನ ಪ್ರಜ್ವಲಿಸಲಿಲ್ಲ.

ಸೆಪ್ಟೆಂಬರ್ ತಿಂಗಳಲ್ಲಿ ಲೇಬರ್‌ಡೇ ಆಚರಿಸುವ ಅಮೆರಿಕ ಹೊರತುಪಡಿಸಿ ಜಗತ್ತಿನ ಬಹುತೇಕ ರಾಷ್ಟ್ರಗಳು ಮೇ.1ರಂದೇ ಕಾರ್ಮಿಕರ ದಿನ ಆಚರಿಸುತ್ತವೆ. ಸಾಮಾನ್ಯವಾಗಿ ಕಾರ್ಮಿಕರ ದಿನ ಆಚರಿಸುವ ಎಲ್ಲ ದೇಶಗಳಲ್ಲೂ ಸರ್ಕಾರಿ ರಜೆ ಇರುತ್ತದೆ. ಇದಷ್ಟೇ ಕಾರ್ಮಿಕರ ಸಂಭ್ರಮಕ್ಕೆ ಕಾರಣವಾಗಿರುವುದಿಲ್ಲ, ಬದಲಿಗೆ ಈ ದಿನ ಕಾರ್ಮಿಕ ಸಂಘಟನೆಗಳಿಗೆ ಹಬ್ಬದಂತೆ ಇರುತ್ತದೆ. ಆದರೆ, ದೇಶವನ್ನೇ ಆಕ್ರಮಿಸಿರುವ ಕೊರೊನಾ ಈ ವರ್ಷ ಕಾರ್ಮಿಕ ದಿನಾಚರಣೆ ಮೇಲೂ ಕರಿ ನೆರಳು ಚಾಚಿದೆ. ಪರಿಣಾಮ ಇಂದು ನಡೆಯಬೇಕಿದ್ದ ಕಾರ್ಮಿಕರ ಮೆರವಣಿಗೆ, ಸಭೆ-ಸಮಾರಂಭ, ಚರ್ಚೆಗಳೆಲ್ಲವೂ ಹಿಂದಿನ ನೆನಪುಗಳಲ್ಲೇ ಮುಗಿದು ಹೋಗಿವೆ.

ಚಿತ್ರನಟ ರಮೇಶ್‌ ಅರವಿಂದ್ ಅವರು ತಮ್ಮ ಮನೆ ಮುಂದೆ ರಸ್ತೆ ಗುಡಿಸುತ್ತಿದ್ದ ಪೌರಕಾರ್ಮಿಕ ಮಹಿಳೆಯ ಮೇಲೆ ಗೌರವಾರ್ಥವಾಗಿ ಹೂಚೆಲ್ಲಿದ್ದು ಬಿಟ್ಟರೆ ರಾಜಧಾನಿ ಬೆಂಗಳೂರಿನಲ್ಲೆಲ್ಲೂ ಕಾರ್ಮಿಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು ಕಂಡು ಬರಲಿಲ್ಲ. ಇದಕ್ಕೆ ಕೊರೊನಾ ಭೀತಿಯಲ್ಲಿ ಲಾಕ್‌ಡೌನ್‌ ಜಾರಿ ಮಾಡಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿರುವುದೇ ಪ್ರಮುಖ ಕಾರಣ. ಇದರಿಂದಾಗಿ ಕಾರ್ಮಿಕರ ದಿನ ಆಚರಣೆ ಮೂಲಕ ಶ್ರಮಿಕ ವರ್ಗಕ್ಕೆ ಸಲ್ಲಿಸುತ್ತಿದ್ದ ಗೌರವವೂ ಈ ವರ್ಷ ಇಲ್ಲವಾಗಿದೆ. ಕಷ್ಟ ಸುಖ ಹಂಚಿಕೊಳ್ಳುವ, ಮುಂದಿನ ಮಾರ್ಗಸೂಚಿಗಳನ್ನು ರೂಪಿಸಿಕೊಳ್ಳುವ ಅವಕಾಶವನ್ನು ಎಲ್ಲ ಕಾರ್ಮಿಕ ಸಂಘಟನೆಗಳೂ ಕಳೆದುಕೊಂಡಿವೆ.

ಶ್ರಮಿಕ ವರ್ಗ ಈ ಸಮಾಜ ಗೌರವಿಸಲಿ ಬಿಡಲಿ ತನ್ನ ಕಾರ್ಯ ತಾನು ಮುಂದುವರೆಸಿಕೊಂಡು ಹೋಗತ್ತದೆ. ಆದರೆ, ಈ ವರ್ಷ ಕೊರೊನಾ ಮಹಾಮಾರಿಯಿಂದಾಗಿ ಕಾರ್ಮಿಕ ವರ್ಗಕ್ಕೆ ಹಿಂದೆಂದೂ ಆಗದಷ್ಟು ಅನ್ಯಾಯವಾಗಿದೆ. ದುಡಿದು ತಿನ್ನುವ ಕೈಗಳನ್ನು ಕಟ್ಟಿ ಹಾಕಿದೆ. ಕಾರ್ಮಿಕ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಲಾಕ್‌ಡೌನ್‌ ಜಾರಿ ಮಾಡಿದ ನಂತರವಂತೂ ಕಾರ್ಮಿಕರ ಸ್ಥಿತಿ ಅಕ್ಷರಶಃ ಭಿಕ್ಷುಕರಂತಾಗಿ ಹೋಗಿದೆ. ಲಾಕ್‌ಡೌನ್‌ ನಿಯಮಗಳ ಹೆಸರಲ್ಲಿ ನಗರ ಪ್ರದೇಶಗಳಿಂದ ಸ್ವಗ್ರಾಮಗಳಿಗೆ ಹೋಗಲೂ ಬಿಡದ ಅಧಿಕಾರಿ ವರ್ಗದ ಬಳಿ ನಿತ್ಯವೂ ಆಹಾರಕ್ಕಾಗಿ ಬೇಡಿ ನಿಂತಿದ್ದು, ಇವರ ಪಾಲಿಗೆ ಕರಾಳ ದಿನಗಳೇ ಹೌದು.

ಪರಿಸ್ಥಿತಿ ಅವಲೋಕಿಸಿದರೆ ಕಾರ್ಮಿಕರ ಕರಾಳ ದಿನಗಳು ಈಗಷ್ಟೇ ಆರಂಭವಾಗಿವೆ ಎನ್ನಬಹುದಾಗಿದೆ. ಕೊರೊನಾದಿಂದಾಗಿ ಜಗತ್ತಿನ ಆರ್ಥಿಕ ಚಟುವಟಿಕೆಗಳ ಮೇಲೆ ನೇರ ಹೊಡೆತ ಬಿದ್ದಿರುವುದರಿಂದ ಉತ್ಪಾದನಾ ಕ್ಷೇತ್ರಗಳ ಚಟುವಟಿಕೆಗಳು ಬಹುತೇಕ ನಿಂತುಹೋಗಿವೆ. ಈ ಚಟುವಟಿಕೆಗಳು ಮತ್ತೆ ಶೀಘ್ರವಾಗಿ ಆರಂಭಗೊಳ್ಳುವುದು ಮತ್ತು ಚೇತರಿಸಿಕೊಳ್ಳುವುದು ಕಷ್ಟಸಾಧ್ಯ ಎಂದೇ ತಜ್ಞರು ಅಂದಾಜಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಕಾರ್ಮಿಕರು ಉದ್ಯೋಗ ಕಳೆದುಕೊಳ್ಳುವ ಭೀತಿ ಮತ್ತು ಸೂಕ್ತ ವೇತನ ಮತ್ತು ಸವಲತ್ತುಗಳಿಂದ ವಂಚಿತರಾಗುವ ಆತಂಕಕ್ಕೆ ಒಳಗಾಗಿದ್ದಾರೆ.

ಯಾವುದೇ ದೇಶ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಸಾಧಿಸಲು ಕಾರ್ಮಿಕರ ಶ್ರಮ ಹಾಗು ತ್ಯಾಗಗಳು ಅತ್ಯಮೂಲ್ಯವಾಗಿರುತ್ತವೆ. ಇಂತಹ ಕಾರ್ಮಿಕರ ಮೇಲಿನ ಧಮನಕಾರಿ ನಡವಳಿಕೆಯನ್ನು ವಿರೋಧಿಸಿ ಪ್ಯಾರಿಸ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಮಾವೇಶದ ಫಲವಾಗಿ ಕಾರ್ಮಿಕರ ದಿನ ಜಾರಿಗೆ ಬಂದಿದ್ದು, ಭಾರತದಲ್ಲಿಯೂ 1923ರಿಂದ ಕಾರ್ಮಿಕರ ದಿನ ಆಚರಿಸಲಾಗುತ್ತಿದೆ. ಶ್ರಮ ಜೀವಿಗಳನ್ನು ನೆನೆಯುವ, ಗೌರವಿಸುವ ಈ ದಿನ ಕಾರ್ಮಿಕರ ಪಾಲಿಗೆ ಕರಾಳ ದಿನವಾಗಿದ್ದು ಮಾತ್ರ ಶೋಚನೀಯ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.