ಬೆಂಗಳೂರು : ಇಂದಿನಿಂದ ನವರಾತ್ರಿ ಆರಂಭವಾಗಿದ್ದು, ನಗರದೆಲ್ಲೆಡೆ ಗೊಂಬೆಗಳ ಮಾರಾಟ ಜೋರಾಗಿ ನಡೆಯುತ್ತಿದೆ. ಮಾರುಕಟ್ಟೆಗೆ ವಿವಿಧ ವಿನ್ಯಾಸದ ಗೊಂಬೆಗಳು ಬಂದಿವೆ.
ವಿವಿಧ ಬಗೆಯ ದಸರಾ ಗೊಂಬೆಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿದ್ದು, ಜನರನ್ನು ಆಕರ್ಷಿಸುತ್ತಿವೆ. ಕೊರೊನಾ ನಡುವೆಯೂ ಗೊಂಬೆಗಳ ಮಾರಾಟ ಕೊಂಚ ಏರಿಕೆಯಾಗಿದೆ ಅಂತಾ ವ್ಯಾಪಾರಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಂಬಾರಿ, ಜಾತ್ರೆ, ಮೈಸೂರು ಮೆರವಣಿಗೆ, ದಶಾವತಾರ ಹೀಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆ ಸಾರುವ ಗೊಂಬೆಗಳನ್ನು ಮಾರುಕಟ್ಟೆಗಳಲ್ಲಿ ಕಾಣಬಹುದು. ಆದ್ರೆ, ಈಗಿನ ಟ್ರೆಂಡ್‌ಗೆ ತಕ್ಕಂತೆ ದಸರಾ ಹಬ್ಬದ ಗೊಂಬೆಗಳ ವಿಭಿನ್ನ ಕಲೆಕ್ಷನ್ಗಳು ಮಾರುಕಟ್ಟೆಯಲ್ಲಿ ಕಾಣಸಿಗುತ್ತವೆ.
ಅಂದ ಹಾಗೆ ಮೈಸೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಬೊಂಬೆ ಕೂರಿಸುವ ಪದ್ಧತಿಯಿದೆ. ಈ ಹಿನ್ನೆಲೆ ಮನೆಗಳಲ್ಲಿ ನವರಾತ್ರಿಯ ದಿನಗಳಂದು ಬೊಂಬೆ ಕೂರಿಸಿ ಸಿಂಗಾರ ಮಾಡುವ ಮೂಲಕ ಜನರು ಸಂತೋಷ ಪಡ್ತಾರೆ.
ಇದನ್ನೂ ಓದಿ: ಕಳೆಗಟ್ಟಿದ ಸಂಪ್ರದಾಯ ದಸರಾ,ಅರಮನೆ ಖಾಸಗಿ ದರ್ಬಾರ್ ಸೊಬಗು
ಇನ್ನು ಮಾರುಕಟ್ಟೆಗಳಿಗೆ 10 ರೂಪಾಯಿಂದ ಹಿಡಿದು ಒಂದೂವರೆ ಲಕ್ಷ ರೂಪಾಯಿಗಳವರೆಗೂ ಗೊಂಬೆಗಳೂ ಸಿಗುತ್ತಿವೆ. ಈ ಬಾರಿ ಚನ್ನಪಟ್ಟಣದಿಂದ ಮಾತ್ರವಲ್ಲದೇ, ತಮಿಳುನಾಡಿನಿಂದಲೂ ಬೊಂಬೆಗಳನ್ನು ತರಿಸಲಾಗುತ್ತಿದೆ.