ETV Bharat / state

ಮಂಡ್ಯದಲ್ಲಿ ಕಾರ್ಮಿಕನ ಅನುಮಾನಾಸ್ಪದ ಸಾವು : ಕೊಲೆ ಶಂಕೆ - ಅನುಮಾನಾಸ್ಪದ ಕಾರ್ಮಿಕ ಸಾವು ಮಂಡ್ಯ

ಮಂಡ್ಯ ಜಿಲ್ಲೆಯಲ್ಲಿ ಅನುಮಾನಾಸ್ಪದವಾಗಿ ಪ್ಲಾಸ್ಟಿಕ್ ಲೋಡಿಂಗ್​ ಕೆಲಸ ಮಾಡುತ್ತಿದ್ದ ಕಾರ್ಮಿಕ ಯುವಕ ಮೃತಪಟ್ಟಿದ್ದು, ಈತನ ಮೈ ಮೇಲಿನ ಗಾಯದ ಗುರುತಿನಿಂದ ಕೊಲೆ ಶಂಕೆ ವ್ಯಕ್ತವಾಗಿದೆ.

mandya
ಕಾರ್ಮಿಕ ಯುವಕ ಸಾವು
author img

By

Published : Dec 21, 2020, 10:16 AM IST

ಮಂಡ್ಯ: ಅನುಮಾನಾಸ್ಪದವಾಗಿ ಕಾರ್ಮಿಕ ಮೃತಪಟ್ಟಿರುವ ಘಟನೆ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿ ನಡೆದಿದೆ.

ಅನುಮಾನಾಸ್ಪದವಾಗಿ ಕಾರ್ಮಿಕ ಯುವಕ ಮೃತಪಟ್ಟಿದ್ದಾನೆ.

ಜಿಲ್ಲೆಯ ಸಾದತ್ ನಗರದ ರೂಹಿತ್ ಪಾಷಾ(21) ಮೃತ ಕಾರ್ಮಿಕ. ಈತ ಪ್ಲಾಸ್ಟಿಕ್ ಲೋಡ್ ಕೆಲಸ ಮಾಡುತ್ತಿದ್ದ. ಮೈ ಮೇಲಿನ ಗಾಯದ ಗುರುತಿನಿಂದ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಮಾಲೀಕ ಹಾಗೂ ಜೊತೆಗಾರರ ನಡುವೆ ಜಗಳದಿಂದ ಕೊಲೆಯಾಗಿರಬಹುದು ಎಂಬ ಅನುಮಾನಗಳು ವ್ಯಕ್ತವಾಗಿವೆ.

ಓದಿ: ಕೊಚ್ಚಿ ಶಾಪಿಂಗ್ ಮಾಲ್‌ನಲ್ಲಿ ನಟಿಗೆ ಕಿರುಕುಳ ಪ್ರಕರಣ: ಇಬ್ಬರು ಆರೋಪಿಗಳು ಪೊಲೀಸ್​ ವಶಕ್ಕೆ

ಕಿರುಗಾವಲು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಲು ನಿರಾಕರಣೆಯಿಂದಾಗಿ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಶುರಾಮ್ ಬಳಿ ನ್ಯಾಯಕ್ಕಾಗಿ ಮೃತ ಯುವಕನ ಕುಟುಂಬಸ್ಥರು ಮನವಿ ಮಾಡಿದ್ದಾರೆ‌. ಕಿರುಗಾವಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮಾಡುವಂತೆ ಎಸ್ಪಿ ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.