ETV Bharat / state

ಸುಪ್ರೀಂ ತೀರ್ಪು ಆಶ್ಚರ್ಯ ತಂದಿದೆ, ಇದು ತಪ್ಪು ಸಂದೇಶ ಸಾರುತ್ತಿದೆ: ಗುಂಡೂರಾವ್

author img

By

Published : Jul 17, 2019, 5:55 PM IST

ನಾವು ಸರ್ಕಾರ ಉಳಿಸುವ ಹೋರಾಟಕ್ಕೆ ಸಜ್ಜಾಗಿದ್ದೇವೆ. ಇಂದಿನ ಸುಪ್ರೀಂಕೋರ್ಟ್​ ತೀರ್ಪು ನಮಗೆ ಆಶ್ಚರ್ಯ ತಂದಿದೆ. ಆದ್ರೆ, ಇಂದಿನ ಸುಪ್ರೀಂಕೋರ್ಟ್ ತೀರ್ಪಿನಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ದಿನೇಶ್ ಗುಂಡೂರಾವ್

ಬೆಂಗಳೂರು: ಇವತ್ತಿನ ಸುಪ್ರೀಂಕೋರ್ಟ್ ತೀರ್ಪು ತಪ್ಪೆಂದು ನಾನು ಹೇಳುತ್ತಿಲ್ಲ. ಆದರೆ ನಮಗೆ ಆಶ್ಚರ್ಯ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಮಾರ ಕೃಪಾ ಅತಿಥಿಗೃಹಕ್ಕೆ ಭೇಟಿ ಕೊಟ್ಟ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ನಾವು ಸರ್ಕಾರ ಉಳಿಸುವ ಹೋರಾಟಕ್ಕೆ ಸಜ್ಜಾಗಿದ್ದೇವೆ. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಮುಂದೆ ಪಿಟಿಷನ್ ಇದೆ. ರಾಜ್ಯಪಾಲರ ಮುಂದಿರುವ ನಮ್ಮ ಪಿಟಿಷನ್‌ಗೂ ಇಂದಿನ ಸುಪ್ರೀಂ ತೀರ್ಪಿಗೂ ಸಂಬಂಧ ಇಲ್ಲ.ರಾಜೀನಾಮೆ ಅಂಗೀಕಾರ ಮಾಡುವುದಕ್ಕೆ ಮುಂಚೆ ಅವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ. ಇದರಿಂದಲೇ ಅತೃಪ್ತ ಶಾಸಕರ ಹುನ್ನಾರ ಏನು ಎಂದು ತಿಳಿಯುತ್ತೆ. ಹಾಗಾಗಿ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ಸಿಎಂ ಬದಲಾದ್ರೆ ಸರ್ಕಾರ ಉಳಿಯುತ್ತೆ ಅನ್ನೋದು ಕೇವಲ ಊಹಾಪೋಹ. ಆ ತರ ಯಾವುದೇ ಪ್ರಸ್ತಾವ ಇಲ್ಲ. ಸದನಕ್ಕೆ ಹಾಜರಾಗುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟದ್ದು ಎಂದು ಸುಪ್ರೀಂ ಹೇಳಿದೆ‌. ಆದ್ರೆ, ಇಂದಿನ ಸುಪ್ರೀಂಕೋರ್ಟ್ ತೀರ್ಪಿನಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು. ಬಿಜೆಪಿ ನಾಯಕರಿಗೆ ಬೇಕಾಗಿರೋದು ಬಹುಮತದಲ್ಲಿ ಗೆಲ್ಲೋದಷ್ಟೆ. ಶಾಸಕರ ಅನರ್ಹತೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ. ಸುಪ್ರೀಂಕೋರ್ಟ್ ತೀರ್ಪು ಸ್ಪೀಕರ್ ಅವರ ಸಾರ್ವಭೌಮತ್ವ ಎತ್ತಿ ಹಿಡಿದಿದೆ. ಸುಪ್ರೀಂಕೋರ್ಟ್ ತೀರ್ಪು ಶಾಸಕಾಂಗ ವ್ಯವಸ್ತೆಯಲ್ಲಿ ಹಸ್ತಕ್ಷೇಪ ಮಾಡಿದಂತಿದೆ.10ನೇ ಶೆಡ್ಯೂಲ್ ಪ್ರಕಾರ ವಿಪ್ ಜಾರಿ ಮಾಡೋ ಅಧಿಕಾರ ನಮಗಿದೆ ಎಂದರು.

ದಿನೇಶ್ ಗುಂಡೂರಾವ್

ನಮ್ಮ ಶಾಸಕರಿಗೆ ನಾವು ವಿಪ್ ಜಾರಿ ಮಾಡ್ತೀವಿ. ಸುಪ್ರೀಂಕೋರ್ಟ್ ಶಾಸಕರನ್ನು ಬರುವಂತೆ ಬಲವಂತ ಮಾಡದಂತೆ ಹೇಳಿದೆ. ಸುಪ್ರೀಂತೀರ್ಪು ಅವರಿಗೆ ಸಹಾಯ ಮಾಡುವ ರೀತಿ ಇದೆ. ಇಂತಹವರಿಗೆ ರಕ್ಷಣೆ ಕೊಡೋ ಕೆಲಸ ಸುಪ್ರೀಂ ಮಾಡಬಾರದು. ಶಾಸಕಾಂಗದ ಹಕ್ಕುಗಳ ಬಗ್ಗೆ ಚರ್ಚೆ ಆಗಬೇಕು. ನ್ಯಾಯಾಂಗ ನಮ್ಮ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡುವ ಹಾಗೇ ಇಲ್ಲ.ಸಂವಿಧಾನ ಶಾಸಕಾಂಗಕ್ಕೆ ಕೊಟ್ಟಿರುವ ಕೆಲಸ ಮೊಟಕುಗೊಳಿಸುವ ಕೆಲಸ ಆಗಬಾರದು ಎಂದರು.

ಇನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಮಾತನಾಡಿ, ವಿಶ್ವಾಸಮತದಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಸುಪ್ರೀಂಕೋರ್ಟ್ ಸ್ಪೀಕರ್ ತೀರ್ಮಾನಕ್ಕೆ ಬಿಟ್ಟಿದೆ. ಕೋರ್ಟ್ ತೀರ್ಪು ಸ್ವಲ್ಪ ಗೊಂದಲಮಯವಾಗಿದೆ. ಸುಪ್ರೀಂಕೋರ್ಟ್ ಶಾಸಕಾಂಗ ವ್ಯವಸ್ಥೆಯಲ್ಲಿ ಮಧ್ಯ ಪ್ರವೇಶಿಸುವಂತೆ ತೀರ್ಪನ್ನು ನೀಡಿದೆ. ಈ ತೀರ್ಪು ರಾಜ್ಯದಲ್ಲಷ್ಟೇ ಅಲ್ಲ ದೇಶದ ಶಾಸಕಾಂಗ ವ್ಯವಸ್ಥೆಗೆ ಮಧ್ಯ ಪ್ರವೇಶಿಸುವಂತಾಗಿದೆ. ಪಕ್ಷ ಭೇದವಿಲ್ಲದೇ ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ. ವಿಪ್ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಯಾರೂ ಕೂಡ ವಾದ ಮಂಡನೆ ಮಾಡಿರಲಿಲ್ಲ ಎಂದರು.

Intro:newsBody:ಸುಪ್ರೀಂ ತೀರ್ಪು ಆಶ್ಚರ್ಯ ತಂದಿದೆ, ಇದು ತಪ್ಪು ಸಂದೇಶ ಸಾರುತ್ತಿದೆ: ದಿನೇಶ್ ಗುಂಡೂರಾವ್

ಬೆಂಗಳೂರು: ಇವತ್ತು ಸುಪ್ರೀಂ ಕೋರ್ಟ್ ತೀರ್ಪು ತಪ್ಪು ಸಂದೇಶ ಕೊಡುತ್ತದೆ. ಇದು ತಪ್ಪೆಂದು ನಾನು ಹೇಳುತ್ತಿಲ್ಲ ಆದರೆ ನಮಗೆ ಆಶ್ಚರ್ಯ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟಿದ್ದಾರೆ.
ಕುಮಾರ ಕೃಪ ಅತಿಥಿಗೃಹಕ್ಕೆ ಭೇಟಿ ಕೊಟ್ಟ ಸಂದರ್ಭ ಸುದ್ದಿಗಾರರ ಜೊತೆ ಮಾತನಾಡಿ, ನಾವು ಸರ್ಕಾರ ಉಳಿಸುವ ಹೋರಾಟಕ್ಕೆ ಸಜ್ಜಾಗಿದ್ದೇವೆ. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ಮುಂದೆ ಪಿಟಿಷನ್ ಇದೆ. ರಾಜ್ಯಪಾಲರ ಮುಂದಿರುವ ನಮ್ಮ ಪಿಟಿಷನ್‌ಗೂ ಇಂದಿನ ಸುಪ್ರೀಂ ತೀರ್ಪಿಗೂ ಸಂಬಂಧ ಇಲ್ಲ. ರಾಜೀನಾಮೆ ಅಂಗೀಕಾರ ಮಾಡುವುದಕ್ಕೆ ಮುಂಚೆ ಅವರು ರಾಜ್ಯಪಾಲರ ಬಳಿ ಹೋಗಿದ್ದಾರೆ. ಬಿಜೆಪಿ ನಾಯಕರ ಜೊತೆ ಗುರುತಿಸಿಕೊಂಡಿದ್ದಾರೆ. ಇದರಿಂದಲೇ ಅತೃಪ್ತ ಶಾಸಕರ ಹುನ್ನಾರ ಏನು ಎಂದು ತಿಳಿಯುತ್ತೆ. ಹಾಗಾಗಿ ಅವರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.
ಎಲ್ಲವೂ ಊಹಾಪೋಹ
ಸಿಎಂ ಬದಲಾದ್ರೆ ಸರ್ಕಾರ ಉಳಿಯುತ್ತೆ ಅನ್ನೊದು ಕೇವಲ ಊಹಾಪೋಹಗಳು. ಆತರ ಯಾವುದೇ ಪ್ರಸ್ತಾವ ಇಲ್ಲ. ಸದನಕ್ಕೆ ಹಾಜರಾಗುವುದು ಬಿಡುವುದು ಅತೃಪ್ತ ಶಾಸಕರಿಗೆ ಬಿಟ್ಟದ್ದು ಎಂದು ಸುಪ್ರೀಂ ಹೇಳಿದೆ‌. ಆದ್ರೆ, ಇಂದಿನ ಸುಪ್ರೀಂ ಕೋರ್ಟ್ ತೀರ್ಪಿನಿಂದ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಹೇಳಿದರು.
ಬಿಜೆಪಿ ನಾಯಕರಿಗೆ ಬೇಕಾಗಿರೋದು
ಬಹುಮತದಲ್ಲಿ ಗೆಲ್ಲೋದಷ್ಟೆ. ಶಾಸಕರ ಅನರ್ಹತೆ ಬಗ್ಗೆ ಬಿಜೆಪಿ ತಲೆಕೆಡಿಸಿಕೊಂಡಿಲ್ಲ. ಸುಪ್ರೀಂ ಕೋರ್ಟ್ ತೀರ್ಪು
ಸ್ಪೀಕರ್ ಅವರ ಸಾರ್ವಭೌಮತ್ವವನ್ನು ಎತ್ತಿ ಹಿಡಿದಿದೆ. ಸುಪ್ರೀಂ ಕೋರ್ಟ್ ತೀರ್ಪು ಶಾಸಕಾಂಗ ವ್ಯವಸ್ತೆಯಲ್ಲಿ ಹಸ್ತಕ್ಷೇಪ ಮಾಡಿದಂತಿದೆ. 10ನೇ ಶೆಡ್ಯೂಲ್ ಪ್ರಕಾರ ವಿಪ್ ಇಷ್ಯೂ ಮಾಡೋ ಅಧಿಕಾರ ನಮಗಿದೆ. ನಮ್ಮ ಶಾಸಕರಿಗೆ ನಾವು ವಿಪ್ ಜಾರಿ ಮಾಡ್ತೀವಿ. ಸುಪ್ರೀಂ ಕೋರ್ಟ್ ಶಾಸಕರನ್ನು ಬರುವಂತೆ ಬಲವಂತ ಮಾಡದಂತೆ ಹೇಳಿದೆ. ಸುಪ್ರೀಂ ತೀರ್ಪು ಅವರಿಗೆ ಸಹಾಯ ಮಾಡುವ ರೀತಿ ಇದೆ. ಇಂತಹವರಿಗೆ ರಕ್ಷಣೆ ಕೊಡೋ ಕೆಲಸ ಸುಪ್ರೀಂ ಮಾಡಬಾರದು. ಶಾಸಕಾಂಗದ ಹಕ್ಕುಗಳ ಈ ಬಗ್ಗೆ ಚರ್ಚೆ ಆಗಬೇಕು. ನ್ಯಾಯಾಂಗ ನಮ್ಮ ಕೆಲಸದಲ್ಲಿ ಮಧ್ಯ ಪ್ರವೇಶ ಮಾಡುವ ಹಾಗೇ ಇಲ್ಲ. ಸಂವಿಧಾನ ಶಾಸಕಾಂಗಕ್ಕೆ ಕೊಟ್ಟಿರುವ ಕೆಲಸ ಮೊಟಕುಗೊಳಿಸುವ ಕೆಲಸ ಆಗಬಾರದು ಎಂದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಮಾತನಾಡಿ, ವಿಶ್ವಾಸ ಮತದಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಸುಪ್ರೀಂ ಕೋರ್ಟ್ ಸ್ಪೀಕರ್ ತೀರ್ಮಾನಕ್ಕೆ ಬಿಟ್ಟಿದೆ. ಸುಪ್ರೀಂ ಕೋರ್ಟ್ ತೀರ್ಪು ಸ್ವಲ್ಪ ಗೊಂದಲವಾಗಿದೆ. ಸುಪ್ರೀಂ ಕೋರ್ಟ್ ಶಾಸಕಾಂಗ ವ್ಯವಸ್ಥೆಯಲ್ಲಿ ಮದ್ಯೆ ಪ್ರವೇಶಿಸುವಂತೆ ತೀರ್ಪನ್ನು ನೀಡಿದೆ. ಸುಪ್ರೀಂ ತೀರ್ಪು ರಾಜ್ಯದಲ್ಲಷ್ಟೆ ಅಲ್ಲ ದೇಶದ ಶಾಸಕಾಂಗ ವ್ಯವಸ್ಥೆಗೆ ಮದ್ಯಪ್ರವೇಶಿಸುವಂತಾಗಿದೆ. ಪಕ್ಷ ಬೇದವಿಲ್ಲದೆ ಇದರ ಬಗ್ಗೆ ಗಂಭೀರ ಚರ್ಚೆ ಆಗಬೇಕಿದೆ. ವಿಪ್ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಯಾರೂ ಕೂಡ ವಾದ ಮಂಡನೆ ಮಾಡಿರಲಿಲ್ಲ ಎಂದರು.Conclusion:news

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.