ETV Bharat / state

ಸದನ ಸ್ವಾರಸ್ಯ: ವಿಧಾನಪರಿಷತ್​ನಲ್ಲಿ ಗಮನ ಸೆಳೆದ ಒಂದು ಚೊಂಬಿನ ಕಥೆ! - story of a Mug that was told at vidhanaparishath

ವಿಧಾನಪರಿಷತ್​ನಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಬಗ್ಗೆ ಚರ್ಚೆ ನಡೆಯುವ ವೇಳೆ ಬಿಜೆಪಿ ಸದಸ್ಯ ಪ್ರಾಣೇಶ್ ಕಥೆಯೊಂದನ್ನು ಹೇಳಿ ಗಮನ ಸೆಳೆದರು. ಬಳಿಕ ರಾವಣನ ಕಥೆ ಮೂಲಕ ಪ್ರಾಣೇಶ್​​ಗೆ ಜೆಡಿಎಸ್​ನ ಮರಿತಿಬ್ಬೇಗೌಡ ತಿರುಗೇಟು ನೀಡಿದರು.

ವಿಧಾನಪರಿಷತ್​
author img

By

Published : Oct 11, 2019, 7:57 PM IST

ಬೆಂಗಳೂರು: ವಿಧಾನಪರಿಷತ್ ಕಲಾಪದಲ್ಲಿ ನೆರೆಹಾನಿ ಕುರಿತು ಗಂಭೀರ ಚರ್ಚೆ ‌ನಡೆಯುವ ವೇಳೆ ಒಂದು ಚೊಂಬಿನ ಕಥೆ ಎನ್ನುವ ಹಾಸ್ಯ ಪ್ರಸಂಗ ನಡೆಯಿತು. ಬಿಜೆಪಿಯ ಕಥೆಗೆ ಜೆಡಿಎಸ್, ಕಥೆ ಮೂಲಕವೇ ತಿರುಗೇಟು ನೀಡಿತು.

ಪರಿಷತ್​ನಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುವ ವೇಳೆ ಬಿಜೆಪಿ ಸದಸ್ಯ ಪ್ರಾಣೇಶ್ ಕಥೆಯೊಂದನ್ನು ಹೇಳಿ ಗಮನ ಸೆಳೆದರು. 5 ಬೆರಳುಗಳಲ್ಲಿ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆದಿತ್ತು. ಬಲಶಾಲಿ ಎಂದು ಹೆಬ್ಬೆರಳು, ದಿಕ್ಕು ತೋರಿಸುವುದು ನಾನು ಎಂದು ತೋರುಬೆರಳು, ಮಧ್ಯದ ಬೆರಳು ನಾನು ಉದ್ದ ಇರುವುದಾಗಿ, ಉಂಗುರ ಬೆರಳು ನಾನು ವಜ್ರ ವೈಢೂರ್ಯ ತೊಡುತ್ತೇನೆ ಎಂದು, ಕಿರುಬೆರಳು ನಮಸ್ಕರಿಸುವಾಗ ನಾನು ಮೊದಲಿರುತ್ತೇನೆ. ಹೀಗಾಗಿ ನಾನು ದೊಡ್ಡವನು ಎಂದು ಪೈಪೋಟಿಗೆ ಬಿದ್ದಿದ್ದವು.

ಈ ವೇಳೆ, ಬ್ರಹ್ಮ ಬೆರಳುಗಳಿಗೆ ಪರೀಕ್ಷೆ ಇಟ್ಟ. ಹಾಲು ತುಂಬಿದ ಚೊಂಬು ಇಟ್ಟು ಅದನ್ನು ಎತ್ತುವಂತೆ ಎಲ್ಲಾ ಬೆರೆಳುಗಳಿಗೆ ಹೇಳಿದ ಕೊನೆಗೆ ಯಾವ ಬೆರಳುಗಳಿಂದಲೂ ಎತ್ತಲೂ ಸಾಧ್ಯವಾಗಲಿಲ್ಲ. ನಂತರ ಎಲ್ಲಾ ಬೆರಳು ಸೇರಿ ಚೊಂಬು ಎತ್ತಿ ಎಂದು ಹೇಳಿದ ಆಗ ಹೂವಿನಂತೆ ಚೊಂಬನ್ನು ಎತ್ತಲು ಸಾಧ್ಯವಾಯಿತು. ಚೊಂಬು ಹಿಡಿದ ನಂತರ ಯಾವ ಬೆರಳು ಹೆಚ್ಚು ಎಂದಾಗ ಎಲ್ಲ ಬೆರಳುಗಳು ಸಮವಾಗಿರುವುದು ಕಂಡು ಬಂತು. ಅದೇ ರೀತಿ ಪ್ರತಿಪಕ್ಷ ಆಡಳಿತ ಪಕ್ಷಕ್ಕೆ ಸಹಕಾರ ಕೊಡಬೇಕಾ ಎಂದು ಬೆರಳಿನ ಕಥೆ ಮೂಲಕ ಆಡಳಿತ ಪಕ್ಷದ ಸದಸ್ಯ ಪ್ರಾಣೇಶ್ ಮನವಿ ಮಾಡಿದರು.

ಈ ವೇಳೆ ರಾವಣನ ಕಥೆ ಮೂಲಕ ಪ್ರಾಣೇಶ್​​ಗೆ ಜೆಡಿಎಸ್​ನ ಮರಿತಿಬ್ಬೇಗೌಡ ತಿರುಗೇಟು ನೀಡಿದರು. ರಾವಣ ಸೀತೆಯನ್ನು ಅಪಹರಿಸುವಾಗ ಸ್ವತಃ ಸೀತೆ ಅಪಹರಿಸದಂತೆ ಬೇಡಿಕೊಂಡರು. ಈ ವೇಳೆ ರಾವಣನ ಪತ್ನಿ ಮಂಡೋದರಿ ಕೂಡ ಅಪಹರಿಸದಂತೆ ಮನವಿ ಮಾಡಿದಳು. ಈ ವೇಳೆ‌ ನನ್ನದು ವಿಚಾರಕ್ಕೆ ಹೊರತು ಆಚಾರಕ್ಕಲ್ಲ ಎಂದು ಅಪಹರಣ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ. ಹಾಗೆಯೇ ಬಿಜೆಪಿಯವರು ವಿಚಾರಕ್ಕೆ ಹೊರತು ಆಚಾರಕ್ಕೆ ಅಲ್ಲ ಎಂದು ತಿರುಗೇಟು ನೀಡಿದರು.

ಈ ವೇಳೆ ಸೀತೆ ಅಪಹರಣ ಸಿದ್ಧಾಂತದ ಸಮರ್ಥನೆ ಮಾಡಿಕೊಳ್ಳಾಗಿದೆ. ಪರಸ್ತ್ರೀಯನ್ನು ಅಪಹರಣ ಮಾಡಿರೋದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಮರಿತಿಬ್ಬೇಗೌಡರ ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿದರು.

ಈ ವೇಳೆ ಬೇರೆ ಬೇರೆ ಸದಸ್ಯರು ಬೇರೆ ಬೇರೆ ಕಥೆ ಹೇಳಲು ಮುಂದಾದರು. ಆದರೆ ಇದಕ್ಕೆ ಸಭಾಪತಿಗಳು ಅವಕಾಶ ಕೊಟ್ಟಿಲ್ಲ. ಕೊನೆಗೆ ನೆರೆ ಕುರಿತು ಚರ್ಚೆಗೆ ಬೇರೆ ಸದಸ್ಯರಿಗೆ ಅವಕಾಶ ಮಾಡಿಕೊಟ್ಟ ಸಭಾಪತಿಗಳು ಚೊಂಬಿನ ಕಥೆ, ರಾವಣನ‌ ಕಥೆ ನಂತರ ಕಥೆಗಳು ಮುಂದುವರೆಯುವುದಕ್ಕೆ ವಿರಾಮ ಹಾಡಿದರು.

Intro:

ಬೆಂಗಳೂರು: ವಿಧಾನ ಪರಿಷತ್ ನಲ್ಲಿ ಕಲಾಪದಲ್ಲಿ ನೆರೆಹಾನಿ ಕುರಿತು ಗಂಭೀರ ಚರ್ಚೆ ‌ನಡೆಯುವ ವೇಳೆ ಒಂದು ಚೊಂಬಿನ ಕಥೆ ಎನ್ನುವ ಹಾಸ್ಯ ಪ್ರಸಂಗ ನಡೆಯಿತು, ಬಿಜೆಪಿಯ ಕಥೆಗೆ ಜೆಡಿಎಸ್ ಕಥೆ ಮೂಲಕವೇ ತಿರುಗೇಟು ನೀಡಿತು.

ಪರಿಷತ್ ನಲ್ಲಿ ನೆರೆ ಸಂತ್ರಸ್ತರ ಸಮಸ್ಯೆ ಬಗ್ಗೆ ಬಿಸಿ ಬಿಸಿ ಚರ್ಚೆ ನಡೆಯುವ ವೇಳೆ ಬಿಜೆಪಿ ಸದಸ್ಯ ಪ್ರಾಣೇಶ್ ಕಥೆಯೊಂದನ್ನು ಹೇಳಿ ಗಮನ ಸೆಳೆದರು. 5 ಬೆರಳುಗಳಲ್ಲಿ ಅಗ್ರ ಸ್ಥಾನಕ್ಕಾಗಿ ಪೈಪೋಟಿ ನಡೆದಿತ್ತು.ಬಲಶಾಲಿ ಎಂದು ಹೆಬ್ಬೆರಳು, ದಿಕ್ಕು ತೋರಿಸುವುದು ನಾನು ಎಂದು ತೋರುಬೆರಳು, ಮಧ್ಯದ ಬೆರಳು ನಾನು ಉದ್ದ ಇರುವುದಾಗಿ,
ಉಂಗುರ ಬೆರಳು ನಾನು ವಜ್ರ ವೈಡೂರ್ಯ ತೊಡುತ್ತೇನೆ ಎಂದು, ಕಿರುಬೆರಳು ನಮಸ್ಕರಿಸುವಾಗ ನಾನು ಮೊದಲಿರುತ್ತೇನೆ ಹೀಗಾಗಿ ನಾನು ದೊಡ್ಡವನು ಎಂದು ಪೈಪೋಟಿಗೆ ಬಿದ್ದಿದ್ದವು ಈ ವೇಳೆ ಬ್ರಹ್ಮ ಬೆರಳುಗಳಿಗೆ ಪರೀಕ್ಷೆ ಇಟ್ಟ.ಹಾಲು ತುಂಬಿದ ಚೊಂಬು ಇಟ್ಟು ಅದನ್ನು ಎತ್ತುವಂತೆ ಎಲ್ಲಾ ಬೆರೆಳುಗಳಿಗೆ ಹೇಳಿದ ಕೊನೆಗೆ ಯಾವ ಬೆರಳುಗಳಿಂದಲೂ ಎತ್ತಲೂ ಸಾಧ್ಯವಾಗಲಿಲ್ಲ ನಂತರ ಎಲ್ಲಾ ಬೆರಳು ಸೇರಿ ಚೊಂಬು ಎತ್ತಿ ಎಂದು ಹೇಳಿದ ಆಗ ಹೂವಿನಂತೆ ಚೊಂಬನ್ನು ಎತ್ತಲು ಸಾಧ್ಯವಾಯಿತು ಚೊಂಬು ಹಿಡಿದ ನಂತರ ಯಾವ ಬೆರಳು ಹೆಚ್ಚು ಎಂದಾಗ ಎಲ್ಲ ಬೆರಳುಗಳು ಸಮವಾಗಿರುವುದು ಕಂಡು ಬಂತು.ಅದೇ ರೀತಿ ಪ್ರತಿಪಕ್ಷ ಆಡಳಿತ ಪಕ್ಷಕ್ಕೆ ಸಹಕಾರ ಕೊಡಬೇಕ ಎಂದು ಬೆರಳಿನ ಕಥೆ ಮೂಲಕ ಆಡಳಿತ ಪಕ್ಷದ ಸದಸ್ಯ ಪ್ರಾಣೇಶ್ ಮನವಿ ಮಾಡಿದರು.

ಈ ವೇಳೆ ರಾವಣನ ಕಥೆ ಮೂಲಕ ಪ್ರಾಣೇಶ್ ಗೆ ಜೆಡಿಎಸ್ ನ ಮರಿತಿಬ್ಬೇಗೌಡ ತಿರುಗೇಟು ನೀಡಿದರು. ರಾವಣ ಸೀತೆಯನ್ನು ಅಪಹರಿಸುವಾಗ ಸ್ವತಃ ಸೀತೆ ಅಪಹರಿಸದಂತೆ ಬೇಡಿಕೊಂಡರು, ಈ ವೇಳೆ ರಾವಣನ ಪತ್ನಿ ಮಂಡೋದರಿ ಕೂಡ ಅಪಹರಿಸದಂತೆ ಮನವಿ ಮಾಡಿದಳು ಈ ವೇಳೆ‌ ನನ್ನದು ವಿಚಾರಕ್ಕೆ ಹೊರತು ಆಚಾರಕ್ಕಲ್ಲ ಎಂದು ಅಪಹರಣ ಕಾರ್ಯವನ್ನು ಪೂರ್ಣಗೊಳಿಸುತ್ತಾನೆ ಹಾಗೇಯೇ ಬಿಜೆಪಿಯವರು ವಿಚಾರಕ್ಕೆ ಹೊರತು ಆಚಾರಕ್ಕೆ ಅಲ್ಲಾ ಎಂದು ತಿರುಗೇಟು ನೀಡಿದರು.

ಈ ವೇಳೆ ಸೀತೆ ಅಪಹರಣ ಸಿದ್ದಾಂತದ ಸಮರ್ಥನೆ ಮಾಡಿಕೊಳ್ಳಾಗಿದೆ,ಪರಸ್ತ್ರೀಯನ್ನು ಅಪಹರಣ ಮಾಡಿರೋದನ್ನು ಸಮರ್ಥನೆ ಮಾಡಿಕೊಂಡಿದ್ದಾರೆ ಮರಿತಿಬ್ಬೇಗೌಡರ ಈ ಹೇಳಿಕೆಯನ್ನು ಖಂಡಿಸುತ್ತೇನೆ ಎಂದು ಆಡಳಿತ ಪಕ್ಷದ ಸದಸ್ಯೆ ತೇಜಸ್ವಿನಿ ರಮೇಶ್ ಹೇಳಿದರು.

ಈ ವೇಳೆ ಬೇರೆ ಬೇರೆ ಸದಸ್ಯರು ಬೇರೆ ಬೇರೆ ಕಥೆ ಹೇಳಲು ಮುಂದಾದರು.ಆದರೆ ಇದಕ್ಕೆ ಸಭಾಪತಿಗಳು ಅವಕಾಶ ಕೊಟ್ಟಿಲ್ಲ.ಕೊನೆಗೆ ನೆರೆ ಕುರಿತು ಚರ್ಚೆಗೆ ಬೇರೆ ಸದಸ್ಯರಿಗೆ ಅವಕಾಶ ಮಾಡಿಕೊಟ್ಟ ಸಭಾಪತಿಗಳು ಚೊಂಬಿನ ಕಥೆ,ರಾವಣನ‌ ಕಥೆ ನಂತರ ಕಥೆಗಳು ಮುಂದುವರೆಯುವುದಕ್ಕೆ ವಿರಾಮ ಹಾಡಿದರು.

Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.