ETV Bharat / state

ಸಂಸದರಿಗಿಂತ ಅವರ ಪತ್ನಿರೇ ಶ್ರೀಮಂತರು... ಯಾರ ಆಸ್ತಿ ಎಷ್ಟು ಇಲ್ಲಿದೆ ನೋಡಿ! - ಆಸ್ತಿ ಮೌಲ್ಯ

ಹಲವು ಸಂಸದರು ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಕೆಲ ಸಂಸದರ ಆಸ್ತಿ ಮೌಲ್ಯ 2014ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಆದರೆ, ಅವರ ಪತ್ನಿಯರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡಿದೆ.

ಸಂಸದರ ಆಸ್ತಿ ಮೌಲ್ಯ
author img

By

Published : Apr 10, 2019, 5:53 PM IST

ಬೆಂಗಳೂರು: ರಾಜ್ಯದ ಹಾಲಿ ಸಂಸದರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಲೋಕಸಮರದ ರಣಕಣಕ್ಕೆ ಇಳಿದಿದ್ದಾರೆ‌. ಅದಕ್ಕಾಗಿ ಅಖಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಹಾಲಿ ಸಂಸದರು ಹಾಗೂ ಅವರ ಪತ್ನಿಯಂದಿರ ಆಸ್ತಿ ಮೌಲ್ಯ ಕಳೆದ ಲೋಕಸಮರಕ್ಕಿಂತ ಈ ಬಾರಿ ಎಷ್ಟು ಹೆಚ್ಚಾಗಿದೆ ಎಂಬ ಕೆಲ ಇಂಟ್ರೆಸ್ಟಿಂಗ್ ಅಂಶಗಳನ್ನು ನಿಮ್ಮ ಮುಂದಿಡುತ್ತೇವೆ.

ರಾಜ್ಯದಲ್ಲಿ ಬಹುತೇಕ ಎಲ್ಲ ಹಾಲಿ ಸಂಸದರು ಮತ್ತೊಮ್ಮೆ ಆಯ್ಕೆ ಬಯಸಿ ಲೋಕಸಮರದ ಅಖಾಡಕ್ಕೆ ಇಳಿದಿದ್ದಾರೆ. ಬಹುತೇಕ ಎಲ್ಲಾ ಹಾಲಿ ಸಂಸದರು ಕೋಟ್ಯಧಿಪತಿಗಳೇ. ಆದರೆ ಕೆಲ ಸಂಸದರಗಿಂತ ಅವರ ಪತ್ನಿಯರೇ ಶ್ರೀಮಂತರಾಗಿದ್ದಾರೆ. ಇನ್ನು ಕೆಲ ಸಂಸದರು ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಕೆಲ ಸಂಸದರ ಆಸ್ತಿ ಮೌಲ್ಯ 2014ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಆದರೆ, ಅವರ ಪತ್ನಿಯಂದಿರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡಿದೆ. ಇಂಥ ಕೆಲ ಸ್ವಾರಸ್ಯಕರ ಅಂಶಗಳನ್ನು ನೋಡೋಣ.

ಸಂಸದರ ಆಸ್ತಿ ಮೌಲ್ಯ

ಯಾರ ಆಸ್ತಿ ಎಷ್ಟು ವೃದ್ಧಿ?:

  • ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ ವೃದ್ಧಿಯಲ್ಲಿ ಅಗ್ರಗಣ್ಯರು. 2014ಕ್ಕೆ ಹೋಲಿಸಿದರೆ ಈ ಬಾರಿ ಡಿ.ಕೆ. ಸುರೇಶ್ ಆಸ್ತಿ ಮೌಲ್ಯದಲ್ಲಿ ಭಾರಿ ಏರಿಕೆ ಕಂಡಿದೆ. 2014ರಲ್ಲಿ ಡಿ.ಕೆ.ಸುರೇಶ್ 162 ಕೋಟಿ ರೂ. ಒಟ್ಟು ಚರಾಸ್ತಿ ಹಾಗೂ ಚಿರಾಸ್ತಿ ಘೋಷಿಸಿದ್ದರು. ಐದು ವರ್ಷದ ಬಳಿಕ ಈಗ ಆ ಆಸ್ತಿ ಮೌಲ್ಯ ಸುಮಾರು 338 ಕೋಟಿಗೆ ಏರಿಕೆ ಕಂಡಿದೆ.
  • ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಆಸ್ತಿ ಮೌಲ್ಯವೂ ಗಣನೀಯ ಏರಿಕೆ ಕಂಡಿದೆ. 2014ರಲ್ಲಿ ಡಿವಿಎಸ್ ಆಸ್ತಿ ಒಟ್ಟು 8.11 ಕೋಟಿ ಆಗಿತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 1.76 ಕೋಟಿ ಇತ್ತು. 2019ರಲ್ಲಿ ಸದಾನಂದ ಗೌಡರ ಆಸ್ತಿ ಮೌಲ್ಯ 33.09ಕೋಟಿ ರೂ.ಗೆ ವೃದ್ಧಿಸಿದೆ. ಅವರ ಪತ್ನಿಯ ಆಸ್ತಿ ಮೌಲ್ಯ 3.60 ಕೋಟಿಗೆ ಏರಿಕೆಯಾಗಿದೆ.
  • ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯಲ್ಲಿ ಅಲ್ಪ‌ಏರಿಕೆ ಕಂಡಿದೆ ಅಷ್ಟೇ. 2014ರಲ್ಲಿ ಖರ್ಗೆಯವರ ಒಟ್ಟು ಆಸ್ತಿ ಮೌಲ್ಯ ಸುಮಾರು 5.24 ಕೋಟಿ ರೂ. ಇತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 4.86 ಕೋಟಿ ಆಗಿತ್ತು. ಅದೇ 2019 ರಲ್ಲಿ ಖರ್ಗೆಯವರ ಆಸ್ತಿ ಮೌಲ್ಯದಲ್ಲಿ 7.38 ಕೋಟಿ ರೂ. ಏರಿಕೆಯಾಗಿದೆ. ಪತ್ನಿ ಆಸ್ತಿ ಮೌಲ್ಯ 7.13 ಕೋಟಿ ರೂ. ವೃದ್ಧಿಯಾಗಿದೆ.
  • ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಸ್ತಿ ಮೌಲ್ಯ 7.35 ಕೋಟಿ ರೂ.ನಿಂದ 10.48 ಕೋಟಿ ರೂ.ಗೆ ವೃದ್ಧಿಸಿದೆ.

ಆಸ್ತಿ ಮೌಲ್ಯ ಕುಸಿತ ಕಂಡ ಪ್ರಮುಖರು ಯಾರು?:

ಇನ್ನು ಕೆಲ ಪ್ರಮುಖ ಸಂಸದರು ತಮ್ಮ ಆಸ್ತಿ ಮೌಲ್ಯದಲ್ಲಿ ಕುಸಿತ ಕಂಡಿದ್ದಾರೆ. ಈ ಸರದಿಯಲ್ಲಿ ಬೆಂಗಳೂರು ಕೇಂದ್ರ ಸಂಸದ ಪಿ.ಸಿ.ಮೋಹನ್ ಹಾಗೂ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪ್ರಮುಖರಾಗಿದ್ದಾರೆ.

  • ಪಿ.ಸಿ.ಮೋಹನ್ 2014ರಲ್ಲಿ ಒಟ್ಟು 60.54 ಕೋಟಿ ರೂ. ಆಸ್ತಿ ಮೌಲ್ಯ ತೋರಿಸಿದ್ದರು. ಆದರೆ, 2019 ಕ್ಕೆ ಆ ಮೌಲ್ಯ 36.04 ಕೋಟಿಗೆ ಇಳಿಕೆಯಾಗಿದೆ. ಆದರೆ, ಅವರ ಪತ್ನಿ ಆಸ್ತಿ ಮೌಲ್ಯದಲ್ಲಿ ಏರಿಕೆ ಕಂಡಿದೆ. ಪತ್ನಿ ಆಸ್ತಿ ಮೌಲ್ಯ 2014ರಲ್ಲಿ ಸುಮಾರು 11.91 ಕೋಟಿ ರೂ. ಇತ್ತು. ಅದೀಗ 23.6 ಕೋಟಿಗೆ ಏರಿಕೆಯಾಗಿದೆ.
  • ಇನ್ನು ವೀರಪ್ಪ ಮೊಯ್ಲಿ ಆಸ್ತಿ ಮೌಲ್ಯದಲ್ಲೂ ಗಣನೀಯ ಇಳಿಕೆಯಾಗಿದೆ. ಮೊಯ್ಲಿ ಅವರು 2014ರಲ್ಲಿ ಸುಮಾರು 48.15 ಕೋಟಿ ಆಸ್ತಿ ಮೌಲ್ಯ ತೋರಿಸಿದ್ದರು. ಅದು ಈಗ 2.27 ಕೋಟಿಗೆ ಇಳಿಕೆಯಾಗಿದೆ. ಆದರೆ ಅವರ ಪತ್ನಿ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ 13.55 ಕೋಟಿ ರೂ.ನಿಂದ 16.08 ಕೋಟಿಗೆ ಏರಿಕೆಯಾಗಿದೆ.

ಆಸ್ತಿ ಮೌಲ್ಯದಲ್ಲಿ ಪತ್ನಿಯರೇ ಸ್ಟ್ರಾಂಗು!:

ಹೌದು, ಕೆಲ ಸಂಸದರ ಮುಂದೆ ಅವರ ಪತ್ನಿಯರೇ ಶ್ರೀಮಂತರಾಗಿದ್ದಾರೆ. ಅದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ವೀರಪ್ಪ ಮೊಯ್ಲಿ, ಅನಂತ ಕುಮಾರ್ ಹೆಗಡೆ, ಮುನಿಯಪ್ಪ ಪ್ರಮುಖರಾಗಿದ್ದಾರೆ.

  • ಮಾಜಿ ಪ್ರಧಾನಿ ದೇವೇಗೌಡರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ದೇವೇಗೌಡರ ಆಸ್ತಿ ಮೌಲ್ಯ ಬರೇ 95.31 ಲಕ್ಷ ರೂ.‌ಇದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ 4.9 ಕೋಟಿ ರೂ.ಗೆ ಏರಿಕೆಯಾಗಿದೆ. ದೇವೇಗೌಡರ ಆಸ್ತಿ 77.21ಲಕ್ಷದಿಂದ ಬರೇ 95.31 ಲಕ್ಷಕ್ಕೆ ಏರಿಕೆಯಾಗಿದೆ.
  • ವೀರಪ್ಪ ಮೊಯ್ಲಿ ಪತ್ನಿಯೂ ಗಂಡನಿಗಿಂತ ಶ್ರೀಮಂತರಾಗಿದ್ದಾರೆ. ಮೊಯ್ಲಿ ಆಸ್ತಿ ಮೌಲ್ಯ 2.27 ಕೋಟಿ ರೂ. ಆಗಿದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 16.08 ಕೋಟಿ ರೂ.ಗೆ ಏರಿಕೆ ಕಂಡಿದೆ.
  • ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ ಪತ್ನಿಗಿಂತ ಬಡವರಾಗಿದ್ದಾರೆ. ಮುನಿಯಪ್ಪ ಆಸ್ತಿ ಮೌಲ್ಯ ಬರೇ 9.46 ಕೋಟಿ ರೂ. ಆಗಿದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 17.56 ಕೋಟಿ ರೂ.ಗೆ ಏರಿಕೆಯಾಗಿದೆ.
  • ಅದೇ ರೀತಿ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆ ಆಸ್ತಿ ಮೌಲ್ಯವೂ ಅಲ್ಪ ಏರಿಕೆ ಕಂಡಿದೆ. 1.45 ಕೋಟಿಯಿಂದ 2.82 ಕೋಟಿಗೆ ಏರಿಕೆ ಕಂಡಿದೆ. ಆದರೆ, ಅವರ ಪತ್ನಿ ಅವರಿಗಿಂತ ಶ್ರೀಮಂತರಾಗಿದ್ದಾರೆ. ಪತ್ನಿ ಹೆಸರಲ್ಲಿ 5.62 ಕೋಟಿ ರೂ. ಆಸ್ತಿ ಇದೆ.

Intro:Rich wives of mps'Body:KN_BNG_01_10_RICHWIVES_KARNATAKAMPS_SCRIPT_VENKAT_7201951

ರಾಜ್ಯದ ಯಾವ ಸಂಸದರಿಗಿಂತ ಅವರ ಪತ್ನಿಯಂದಿರು ಶ್ರೀಮಂತರು?; ಅಂದಿಗಿಂತ ಇಂದು ಹಾಲಿ ಸಂಸದರು ಎಷ್ಟು ಶ್ರೀಮಂತರು? ಇಲ್ಲಿದೆ ಸ್ವಾರಸ್ಯಕರ ಅಂಶ

ಬೆಂಗಳೂರು: ರಾಜ್ಯದ ಹಾಲಿ ಸಂಸದರು ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷಿಸಲು ಲೋಕಸಮರದ ರಣಕಣಕ್ಕೆ ಇಳಿದಿದ್ದಾರೆ‌. ಅದಕ್ಕಾಗಿ ಅಖಾಡದಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲ ಹಾಲಿ ಸಂಸದರು ಹಾಗೂ ಅವರ ಪತ್ನಿಯಂದಿರ ಆಸ್ತಿ ಮೌಲ್ಯ ಕಳೆದ ಲೋಕಸಮರಗಿಂತ ಈ ಬಾರಿ ಎಷ್ಟು ಹೆಚ್ಚಾಗಿದೆ ಎಂಬ ಕೆಲ ಇಂಟ್ರೆಸ್ಟಿಂಗ್ ಅಂಶಗಳನ್ನು ನಿಮ್ಮ ಮುಂದಿಡುತ್ತೇವೆ.

ರಾಜ್ಯದಲ್ಲಿ ಬಹುತೇಕ ಎಲ್ಲ ಹಾಲಿ ಸಂಸದರು ಮತ್ತೊಮ್ಮೆ ಆಯ್ಕೆ ಬಯಸಿ, ಲೋಕಸಮರದ ಅಖಾಡಕ್ಕೆ ಇಳಿದಿದ್ದಾರೆ. ಬಹುತೇಕ ಎಲ್ಲಾ ಹಾಲಿ ಸಂಸದರು ಕೋಟ್ಯಾಧಿಪತಿಗಳೇ. ಆದರೆ ಕೆಲ ಸಂಸದರಗಿಂತ ಅವರ ಪತ್ನಿಯರೇ ಶ್ರೀಮಂತರಾಗಿದ್ದಾರೆ. ಇನ್ನು ಕೆಲ ಸಂಸದರು ತಮ್ಮ ಐದು ವರ್ಷದ ಅಧಿಕಾರವಧಿಯಲ್ಲಿ ತಮ್ಮ ಆಸ್ತಿ ಮೌಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಕೆಲ ಸಂಸದರ ಆಸ್ತಿ ಮೌಲ್ಯ 2014ಕ್ಕೆ ಹೋಲಿಸಿದರೆ ಈ ಬಾರಿ ಕಡಿಮೆಯಾಗಿದೆ. ಆದರೆ, ಅವರ ಪತ್ನಿಯಂದಿರ ಆಸ್ತಿ ಮೌಲ್ಯದಲ್ಲಿ ಗಣನೀಯ ಏರಿಕೆ ಕಂಡಿದೆ. ಇಂಥ ಕೆಲ ಸ್ವಾರಸ್ಯಕರ ಅಂಶಗಳನ್ನು ನೋಡೋಣ.

ಯಾರ ಆಸ್ತಿ ಎಷ್ಟು ವೃದ್ಧಿ?:

ಬೆಂ.ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ ವೃದ್ಧಿಯಲ್ಲಿ ಅಗ್ರಗಣ್ಯರು. 2014ಕ್ಕೆ ಹೋಲಿಸಿದರೆ ಈ ಬಾರಿ ಡಿ.ಕೆ. ಸುರೇಶ್ ಆಸ್ತಿ ಮೌಲ್ಯದಲ್ಲಿ ಭಾರೀ ಏರಿಕೆ ಕಂಡಿದೆ.

2014ರಲ್ಲಿ ಡಿ.ಕೆ.ಸುರೇಶ್ 162 ಕೋಟಿ ರೂ. ಒಟ್ಟು ಚರಾಸ್ತಿ ಹಾಗೂ ಚಿರಾಸ್ತಿ ಘೋಷಿಸಿದ್ದರು. ಐದು ವರ್ಷದ ಬಳಿಕ ಈಗ ಆ ಆಸ್ತಿ ಮೌಲ್ಯ ಸುಮಾರು 338 ಕೋಟಿಗೆ ಏರಿಕೆ ಕಂಡಿದೆ.

ಇತ್ತ ಬೆಂ.ಉತ್ತರ ಕ್ಷೇತ್ರದ ಹಾಲಿ ಸಂಸದ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಆಸ್ತಿ ಮೌಲ್ಯವೂ ಗಣನೀಯ ಏರಿಕೆ ಕಂಡಿದೆ.

2014ರಲ್ಲಿ ಡಿವಿಎಸ್ ಆಸ್ತಿ ಒಟ್ಟು 8.11 ಕೋಟ ರೂ. ಆಗಿತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 1.76 ಕೋಟ ಇತ್ತು. 2019ರಲ್ಲಿ ಸದಾನಂದ ಗೌಡರ ಆಸ್ತಿ ಮೌಲ್ಯ 33.09ಕೋಟಿ ರೂ.ಗೆ ವೃದ್ಧಿಸಿದೆ. ಅದೇ ಅವರ ಪತ್ನಿ ಯ ಆಸ್ತಿ ಮೌಲ್ಯ 3.60 ಕೋಟಿಗೆ ಏರಿಕೆಯಾಗಿದೆ.

ಮಲ್ಲಿಕಾರ್ಜುನ ಖರ್ಗೆಯವರ ಆಸ್ತಿಯಲ್ಲಿ ಅಲ್ಪ‌ಏರಿಕೆ ಕಂಡಿದೆ ಅಷ್ಟೇ. 2014ರಲ್ಲಿ ಖರ್ಗೆಯವರ ಒಟ್ಟು ಆಸ್ತಿ ಮೌಲ್ಯ ಸುಮಾರು 5.24 ಕೋಟಿ ರೂ. ಇತ್ತು. ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 4.86 ಕೋಟಿ ಆಗಿತ್ತು. ಅದೇ 2019 ರಲ್ಲಿ ಖರ್ಗೆಯವರ ಆಸ್ತಿ ಮೌಲ್ಯದಲ್ಲಿ 7.38 ಕೋಟಿ ರೂ. ಏರಿಕೆಯಾಗಿದೆ. ಪತ್ನಿ ಆಸ್ತಿ ಮೌಲ್ಯ 7.13 ಕೋಟಿ ರೂ. ವೃದ್ಧಿಯಾಗಿದೆ.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಆಸ್ತಿ ಮೌಲ್ಯ 7.35 ಕೋಟಿ ರೂ.ನಿಂದ 10.48 ಕೋಟಿ ರೂ.ಗೆ ವೃದ್ಧಿಸಿದೆ.

ಆಸ್ತಿ ಮೌಲ್ಯ ಕುಸಿತ ಕಂಡ ಪ್ರಮುಖರು ಯಾರು?:

ಇನ್ನು ಕೆಲ ಪ್ರಮುಖ ಸಂಸದರು ತಮ್ಮ ಆಸ್ತಿ ಮೌಲ್ಯದಲ್ಲಿ ಕುಸಿತ ಕಂಡಿದ್ದಾರೆ. ಈ ಸರದಿಯಲ್ಲಿ ಬೆಂ.ಕೇಂದ್ರ ಸಂಸದ ಪಿ.ಸಿ.ಮೋಹನ್ ಹಾಗೂ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಪ್ರಮುಖರಾಗಿದ್ದಾರೆ.

ಪಿ.ಸಿ.ಮೋಹನ್ 2014ರಲ್ಲಿ ಒಟ್ಟು 60.54 ಕೋಟಿ ರೂ. ಆಸ್ತಿ ಮೌಲ್ಯ ತೋರಿಸಿದ್ದರು. ಆದರೆ, 2019 ಕ್ಕೆ ಆ ಮೌಲ್ಯ 36.04 ಕೋಟಿಗೆ ಇಳಿಕೆಯಾಗಿದೆ. ಆದರೆ, ಅವರ ಪತ್ನಿ ಆಸ್ತಿ ಮೌಲ್ಯದಲ್ಲಿ ಏರಿಕೆ ಕಂಡಿದೆ. ಪತ್ನಿ ಆಸ್ತಿ ಮೌಲ್ಯ 2014ರಲ್ಲಿ ಸುಮಾರು 11.91 ಕೋಟಿ ರೂ. ಇತ್ತು. ಅದೀಗ 23.6 ಕೋಟಿಗೆ ಏರಿಕೆಯಾಗಿದೆ.

ಇನ್ನು ವೀರಪ್ಪ ಮೊಯ್ಲಿ ಆಸ್ತಿ ಮೌಲ್ಯದಲ್ಲೂ ಗಣನೀಯ ಇಳಿಕೆಯಾಗಿದೆ. ಮೊಯ್ಲಿ ಅವರು 2014ರಲ್ಲಿ ಸುಮಾರು 48.15 ಕೋಟಿ ಆಸ್ತಿ ಮೌಲ್ಯ ತೋರಿಸಿದ್ದರು. ಅದು ಈಗ 2.27 ಕೋಟಿಗೆ ಇಳಿಕೆಯಾಗಿದೆ. ಆದರೆ ಅವರ ಪತ್ನಿ ಹೆಸರಿನಲ್ಲಿರುವ ಒಟ್ಟು ಆಸ್ತಿ ಮೌಲ್ಯ 13.55 ಕೋಟಿ ರೂ.ನಿಂದ 16.08 ಕೋಟಿಗೆ ಏರಿಕೆಯಾಗಿದೆ.

ಆಸ್ತಿ ಮೌಲ್ಯದಲ್ಲಿ ಪತ್ನಯರೇ ಸ್ಟ್ರಾಂಗು!:

ಹೌದು ಕೆಲ ಸಂಸದರ ಮುಂದೆ ಅವರ ಪತ್ನಿಯರೇ ಶ್ರೀಂಮತರಾಗಿದ್ದಾರೆ. ಅದರಲ್ಲಿ ಮಾಜಿ ಪ್ರಧಾನಿ ದೇವೇಗೌಡರು, ವೀರಪ್ಪ ಮೊಯ್ಲಿ, ಅನಂತ ಕುಮಾರ್ ಹೆಗ್ಡೆ, ಮುನಿಯಪ್ಪ ಪ್ರಮುಖರಾಗಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡರಿಗಿಂತ ಅವರ ಪತ್ನಿಯೇ ಶ್ರೀಮಂತರಾಗಿದ್ದಾರೆ. ದೇವೇಗೌಡರ ಆಸ್ತಿ ಮೌಲ್ಯ ಬರೇ 95.31 ಲಕ್ಷ ರೂ.‌ಇದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ 4.9 ಕೋಟಿ ರೂ.ಗೆ ಏರಿಕೆಯಾಗಿದೆ. ದೇವೇಗೌಡರ ಆಸ್ತಿ 77.21ಲಕ್ಷದಿಂದ ಬರೇ 95.31 ಲಕ್ಷಕ್ಕೆ ಏರಿಕೆಯಾಗಿದೆ.

ಇತ್ತ ವೀರಪ್ಪ ಮೊಯ್ಲಿ ಪತ್ನಿಯೂ ಗಂಡನಿಂದ ಶ್ರೀಮಂತರಾಗಿದ್ದಾರೆ. ಮೊಯ್ಲಿ ಆಸ್ತಿ ಮೌಲ್ಯ 2.27 ಕೋಟಿ ರೂ. ಆಗಿದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 16.08 ಕೋಟಿ ರೂ.ಗೆ ಏರಿಕೆ ಕಂಡಿದೆ.

ಇತ್ತ ಕೋಲಾರ ಸಂಸದ ಕೆ.ಎಚ್.ಮುನಿಯಪ್ಪರ ಪತ್ನಿಗಿಂತ ಬಡವರಾಗಿದ್ದಾರೆ. ಮುನಿಯಪ್ಪ ಆಸ್ತಿ ಮೌಲ್ಯ ಬರೇ 9.46 ಕೋಟಿ ರೂ. ಆಗಿದ್ದರೆ, ಅವರ ಪತ್ನಿ ಆಸ್ತಿ ಮೌಲ್ಯ ಸುಮಾರು 17.56 ಕೋಟಿ ರೂ.ಗೆ ಏರಿಕೆಯಾಗಿದೆ.

ಅದೇ ರೀತಿ ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗ್ಡೆ ಆಸ್ತಿ ಮೌಲ್ಯ ವೂ ಅಲ್ಪ ಏರಿಕೆ ಕಂಡಿದೆ. 1.45 ಕೋಟಿಯಿಂದ 2.82 ಕೋಟಿಗೆ ಏರಿಕೆ ಕಂಡಿದೆ. ಆದರೆ, ಅವರ ಪತ್ನಿ ಶ್ರೀಮಂತರಾಗಿದ್ದಾರೆ. ಪತ್ನಿ ಹೆಸರಲ್ಲಿ 5.62 ಕೋಟಿ ರೂ. ಆಸ್ತಿ ಇದೆ.Conclusion:Venkat, bangalore
ETV Bharat Logo

Copyright © 2024 Ushodaya Enterprises Pvt. Ltd., All Rights Reserved.