ETV Bharat / state

ಬೆಂಗಳೂರು: ಆಸ್ಪತ್ರೆಗೆ ಹೊರಟ್ಟಿದ್ದ ದಂಪತಿಯಿಂದಲೂ ದಂಡ ವಸೂಲಿ ಮಾಡಿದ ಪೊಲೀಸರು.. ಆರೋಪ - ಜಯನಗರ ಸಂಚಾರಿ ಠಾಣೆ

ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ರಸ್ತೆ ಮಧ್ಯದಲ್ಲಿ ತಡೆದು ದಂಡ ವಸೂಲಿ ಮಾಡಿದ ಜಯನಗರ ಸಂಚಾರಿ ಠಾಣೆ ಪೊಲೀಸರು - ಬೆಂಗಳೂರು ಸಂಚಾರಿ ಪೊಲೀಸ್ ಟ್ವಿಟರ್ ಪೇಜ್​ನಲ್ಲಿ ಗಂಭೀರ ಆರೋಪ.

ayanagar traffic station police
ಸಂಚಾರಿ ಪೊಲೀಸ್​
author img

By

Published : Feb 7, 2023, 4:15 PM IST

ಬೆಂಗಳೂರು: ದಂಡ ವಸೂಲಿ ಭರದಲ್ಲಿ ಸಂಚಾರಿ ಪೊಲೀಸರು ಮಾನವೀಯತೆಯನ್ನೇ ಮರೆತರೇ?. ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ರಸ್ತೆ ಮಧ್ಯದಲ್ಲಿ ತಡೆದ ಜಯನಗರ ಸಂಚಾರಿ ಠಾಣೆ ಪೊಲೀಸರು ದಂಡ ವಸೂಲಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹೌದು, ಈ ಪ್ರಕರಣದ ವಿರುದ್ಧ ವ್ಯಕ್ತಿಯೊಬ್ಬರು ನೀಡಿರುವ ದೂರಿನ ಪ್ರತಿಯನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಜಯನಗರ ಸಂಚಾರಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ ಇಂತಹ ಗಂಭೀರವಾದ ಆರೋಪ ಮಾಡಲಾಗಿದೆ.

ayanagar traffic station police
ಟ್ವಿಟರ್​ನಲ್ಲಿ ವ್ಯಕ್ತಿಯೊಬ್ಬರು ದೂರಿನ ಪ್ರತಿ ಹಂಚಿಕೊಂಡಿರುವುದು

ಆಸ್ಪತ್ರೆಗೆ ತೆರಳುತ್ತಿದ್ದ ದಂಪತಿಯನ್ನು ರಸ್ತೆಯಲ್ಲೇ ತಡೆದಿರುವ ಜಯನಗರ ಸಂಚಾರಿ ಠಾಣೆ ಪೊಲೀಸರು, ಒಂದು ಗಂಟೆಗೂ ಹೆಚ್ಚು ಕಾಲ ತಡೆದು ನಿಲ್ಲಿಸಿದ್ದಾರೆ. ಬಳಿಕ ದಂಡ ವಸೂಲಿ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಠಾಣೆಗೆ ನೀಡಿದ ದೂರಿನಲ್ಲಿ ಏನಿದೆ?: ಫೆಬ್ರವರಿ 2ರಂದು ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದ ರಾಕೇಶ್ ಅವರ ಪೋಷಕರಾದ ಮಲ್ಲೇಶ್ ಹಾಗೂ ಮಂಗಳಾ ಅವರು ಸಂಗಂ ಸರ್ಕಲ್ ಬಳಿ ಜಯನಗರ ಸಂಚಾರಿ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ತಡೆದಿದ್ದಾರೆ. ವಾಹನದ ಮೇಲಿರುವವರರಿಗೆ ಐದು ಸಾವಿರ ರೂ. ದಂಡ ಪಾವತಿಸಲು ಸೂಚಿಸಿದ್ದಾರೆ‌. ಈ ವೇಳೆ, ''45 ವರ್ಷದ ತನ್ನ ಪತ್ನಿಗೆ ಸಕ್ಕರೆ ಖಾಯಿಲೆ ಹಾಗೂ ಬಿಪಿಯಿದ್ದು, ತಪಾಸಣೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದೆವು. ಆಗ ನಮ್ಮ ಬಳಿ ಎರಡು ಸಾವಿರ ರೂ. ಮಾತ್ರ ಇದೆ. ಅಷ್ಟು ಮಾತ್ರ ಪಾವತಿ ಮಾಡುತ್ತೇನೆ' ಎಂದು ಮಲ್ಲೇಶ್ ಸಂಚಾರಿ ಠಾಣೆ ಪೊಲೀಸರಿಗೆ ಹೇಳಿದ್ದಾರೆ.

  • ಜಯನಗರದ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯು 02/02/23ರಂದು ನನ್ನ ವೃದ್ಧ ತಂದೆ ಹಾಗೂ ಆಸ್ಪತ್ರೆಗೆ ತೆರಳುತ್ತಿದ್ದ ತಾಯಿಯನ್ನು ತಡೆದು ರಸ್ತೆಯಲ್ಲಿಯೇ 1 ಗಂಟೆಗಳ ಕಾಲ ನಿಲ್ಲಿಸಿ. ಏಕವಚನದಲ್ಲಿ ಮಾತನಾಡಿ ಅಮಾನವೀಯವಾಗಿ ವರ್ತಿಸಿ ದುರ್ನಡತೆ ತೋರಿಸಿರುತ್ತಾರೆ. 03/02/22 ರಂದು ಠಾಣಾಧಿಕಾರಿಗಳನ್ನು ಭೇಟಿ ಮಾಡಿ ಅವರ ಗಮನಕ್ಕೂ ಸಹ ತಂದಿರುತ್ತೇನೆ. pic.twitter.com/S7c1gaw2GP

    — Rakesh NSUI (@NsuiRakesh) February 6, 2023 " class="align-text-top noRightClick twitterSection" data=" ">

2 ಕಿ.ಮೀ. ನಡೆದುಕೊಂಡು ಹೋಗಿ ದಂಡ ಕಟ್ಟಿದರು: ''ಇದಕ್ಕೆ ಒಪ್ಪದ ಪೊಲೀಸರು, ಐದು ಸಾವಿರ ರೂ. ಪಾವತಿಸಲೇಬೇಕು ಎಂದು ಪಟ್ಟುಹಿಡಿದರು ಎನ್ನಲಾಗಿದೆ. ವಿಧಿ ಇಲ್ಲದೇ ದ್ವಿಚಕ್ರ ವಾಹನವನ್ನು ಸ್ಥಳದಲ್ಲೇ ಬಿಟ್ಟು ಎರಡು ಕಿ.ಮೀ. ನಡೆದುಕೊಂಡು ಮನೆಗೆ ತೆರಳಿದ ನನ್ನ ತಂದೆ ಮಲ್ಲೇಶ್ ಅವರು ಹಣ ತಂದು ನಂತರ ದಂಡ ಪಾವತಿಸಿದ್ದಾರೆ. ಖಾಯಿಲೆಯಿಂದ ಬಳಲುತ್ತಿದ್ದ ನನ್ನ ತಾಯಿ ಮಂಗಳಾ ಅವರು ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ'' ಎಂದು ಈ ಕುರಿತು ಬೆಂಗಳೂರು ಸಂಚಾರಿ ಪೊಲೀಸ್ ಟ್ವಿಟರ್ ಪೇಜ್​ನಲ್ಲಿ ರಾಕೇಶ್ ತಮ್ಮ ದೂರು ದಾಖಲಿಸಿದ್ದಾರೆ.

ಇತ್ತೀಚೆಗೆ ಅಮಾನತು ಆಗಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ: ದಂಪತಿಯನ್ನು ಬೆದರಿಸಿ ಹಣ ಸುಲಿಗೆ ಮಾಡಿದ್ದ ಆರೋಪದ ಹಿನ್ನೆಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಸೇವೆಯಿಂದ ವಜಾ ಮಾಡಲಾಗಿತ್ತು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಅವರು ಇತ್ತೀಚೆಗೆ ಆದೇಶ ನೀಡಿದ್ದರು. ಸಂಪಿಗೆಹಳ್ಳಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್​ಟೇಬಲ್ ರಾಜೇಶ್ ಹಾಗೂ ಕಾನ್ಸ್​ಟೇಬಲ್ ನಾಗೇಶ್ ಸೇವೆಯಿಂದ ವಜಾ ಮಾಡಲಾಗಿತ್ತು.

ಡಿ.8ರ ರಾತ್ರಿ‌ 11 ಗಂಟೆ ಸುಮಾರಿಗೆ ಮಾನ್ಯತಾ ಟೆಕ್ ​ಪಾರ್ಕ್​ ಬಳಿ ತನ್ನ ಪತ್ನಿಯೊಂದಿಗೆ ನಡೆದುಕೊಂಡು ಬರುತ್ತಿದ್ದ ಕಾರ್ತಿಕ್ ಎಂಬಾತನನ್ನ ತಡೆದಿದ್ದ ಹೊಯ್ಸಳ ಸಿಬ್ಬಂದಿ, ಆಧಾರ್ ಕಾರ್ಡ್ ಸೇರಿದಂತೆ ಐಡೆಂಟಿಟಿ ದಾಖಲೆಗಳನ್ನ ಪರಿಶೀಲಿಸಿದ್ದರು. 'ಮನೆಯ ಸಮೀಪದಲ್ಲೇ ಇದ್ದೇವೆ, ಮೇಲಾಗಿ 11 ಗಂಟೆಯ ಸುಮಾರಿಗೆ ಓಡಾಟಕ್ಕೆ ನಿರ್ಬಂಧವಿದೆಯೇ?' ಎಂದು ಪ್ರಶ್ನಿಸಿದಾಗ, 3 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡುವುದಿಲ್ಲ ಎಂದಾಗ ಬೆದರಿಕೆ ಹಾಕಿ, 1 ಸಾವಿರ ರೂ.ಗಳನ್ನ ಡಿಜಿಟಲ್ ಪೇಮೆಂಟ್ ಮೂಲಕ ಪಡೆದು ಸ್ಥಳದಿಂದ ತೆರಳಿದ್ದ ಘಟನೆ ನಡೆದಿತ್ತು.

ಹೊಯ್ಸಳ ಸಿಬ್ಬಂದಿ ನಡೆ ಕುರಿತು ಟ್ವೀಟ್​​ ಮಾಡಿದ್ದ ಕಾರ್ತಿಕ್, ತಮಗಾದ ಅನುಭವ ಹಂಚಿಕೊಂಡಿದ್ದರು. ಬಳಿಕ ಇಬ್ಬರು ಸಿಬ್ಬಂದಿ ಅಮಾನತುಗೊಳಿಸಿ ಆದೇಶಿಸಿದ್ದ ಈಶಾನ್ಯ ವಿಭಾಗದ ಡಿಸಿಪಿ ಇಲಾಖಾ ತನಿಖೆಗೆ ಆದೇಶಿಸಿದ್ದರು. ಇಬ್ಬರು ಸಿಬ್ಬಂದಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ತಿಳಿಸಿದ್ದಾರೆ‌.

ರಸ್ತೆಯಲ್ಲಿ ಓಡಾಡಿದ್ದಕ್ಕೆ ದಂಡ ವಿಧಿಸಿದ್ದ ಸಿಬ್ಬಂದಿ: ತಮ್ಮ ಮನೆಯ ಹತ್ತಿರ ರಾತ್ರಿ ಹೊತ್ತಲ್ಲಿ ಸುತ್ತಾಡಿದ ಕಾರಣಕ್ಕೆ ದಂಪತಿಗೆ ಪೊಲೀಸರು ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಕಾನೂನು ಭಂಗ ಮಾಡಿದ್ದಕ್ಕಾಗಿ ದಂಪತಿಗೆ ಪೊಲೀಸರು 1000 ರೂ. ದಂಡ ವಿಧಿಸಿದ್ದರು. ಕಾರ್ತಿಕ್ ಎಂಬ ಹೆಸರಿನ ವ್ಯಕ್ತಿಯು ತಮ್ಮ ಮೇಲಾದ ಅನ್ಯಾಯವನ್ನು ಹೇಳಿಕೊಂಡಿದ್ದು, ತಮಗೆ ಸಹಾಯ ಮಾಡುವಂತೆ ಟ್ವಿಟರ್​ನಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬೆಂಗಳೂರು ಪೊಲೀಸ್ ಇಲಾಖೆ, ಆರೋಪಕ್ಕೊಳಗಾದ ಇಬ್ಬರು ಕಾನಸ್ಟೇಬಲ್​ಗಳನ್ನು ಅಮಾನತು ಮಾಡಿತ್ತು. ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ ಎಂದು ತಿಳಿಸಿತ್ತು.

ಇದನ್ನೂ ಓದಿ: ಕೆಐಎಬಿ ಆಡಳಿತ ಮಂಡಳಿ ವಿರುದ್ಧ ಅಸಮಧಾನಗೊಂಡ ಕೆಎಸ್​​​ಡಿಸಿ ಕಾರು ಚಾಲಕರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.