ETV Bharat / state

ರಾಜ್ಯದಲ್ಲಿ ಜಾರಿಗೆ ಬರಲಿರುವ ಗೋ ಹತ್ಯೆ ನಿಷೇಧ ಕಾಯ್ದೆಯ ಸ್ವರೂಪ ಹೇಗಿರಲಿದೆ?

ಬಿಜೆಪಿ ಸರ್ಕಾರ ಇದೇ ಚಳಿಗಾಲದ ಅಧಿವೇಶನದಲ್ಲಿ ವಿವಾದಿತ ಗೋ ಹತ್ಯೆ ನಿಷೇಧ ವಿಧೇಯಕವನ್ನು ಮಂಡಿಸಲು ಎಲ್ಲಾ ತಯಾರಿಗಳನ್ನು ನಡೆಸುತ್ತಿದೆ. ಈ‌ ಸಂಬಂಧ ಈಗಾಗಲೇ ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಉತ್ತರ ಪ್ರದೇಶ ಹಾಗೂ ಗುಜರಾತ್​ಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.

author img

By

Published : Dec 3, 2020, 4:59 PM IST

Nature of the cow slaughter Prohibition Act
ಗೋ ಹತ್ಯೆ ನಿಷೇಧ ಕಾಯ್ದೆ

ಬೆಂಗಳೂರು: ಪ್ರತಿ ಪಕ್ಷಗಳ ವಿರೋಧದ‌ ಮಧ್ಯೆ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಕಠಿಣ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ.‌ ಈ ನಿಟ್ಟಿನಲ್ಲಿ ಪಶುಸಂಗೋಪನಾ ಸಚಿವರು ಈಗಾಗಲೇ ಉತ್ತರ ಪ್ರದೇಶ ಹಾಗೂ ಗುಜರಾತ್ ಪ್ರವಾಸ ಕೈಗೊಂಡಿದ್ದು, ಅಲ್ಲಿನ ಮಾದರಿಯಂತೆ ರಾಜ್ಯದಲ್ಲೂ ಬಲವಾದ ಕಾಯ್ದೆ ರೂಪಿಸಲು ನಿರ್ಧರಿಸಿದೆ.

ರಾಜ್ಯದ ಗೋ ಹತ್ಯೆ ನಿಷೇಧ ಕಾನೂನಿನ ಸ್ವರೂಪ ಹೇಗಿರಲಿದೆ ಎಂಬ ವರದಿ ಇಲ್ಲಿದೆ.

ಗೋ ಹತ್ಯೆ ನಿಷೇಧ ಕಾಯ್ದೆ
ಸಾಂದರ್ಭಿಕ ಚಿತ್ರ

ಕಾಯ್ದೆ ಹೇಗಿದೆ?:

ರಾಜ್ಯದಲ್ಲಿ ಸದ್ಯ 1964ರ ಗೋ ಹತ್ಯೆ ನಿಷೇಧ ಹಾಗೂ ಗೋವು ಸಂರಕ್ಷಣಾ ಕಾಯ್ದೆ ಜಾರಿಯಲ್ಲಿದೆ. ಈ ಕಾಯ್ದೆ ಕಠಿಣ ಕಾನೂನು ಹೊಂದಿಲ್ಲದ ಕಾರಣ ಬಿಜೆಪಿ ಹೊಸ ಕಾಯ್ದೆ ಜಾರಿಗೆ ತರಲು ನಿರ್ಧರಿಸಿದೆ.

ಹಾಲಿ ಇರುವ ಕಾಯ್ದೆ ಪ್ರಕಾರ ಕಾನೂನುಬಾಹಿರವಾಗಿ ಗೋಹತ್ಯೆ ಮಾಡಿದರೆ 6 ತಿಂಗಳು ಶಿಕ್ಷೆ ಹಾಗೂ 1 ಸಾವಿರ ರೂ. ದಂಡ ವಿಧಿಸಲಾಗುತ್ತದೆ. ಇದರ ಜೊತೆಗೆ 12 ವರ್ಷದೊಳಗಿನ ಗೋವು ಅಥವಾ ಬೇರೆ ಜಾನುವಾರು ಹತ್ಯೆಗೆ ನಿಷೇಧ ವಿಧಿಸಲಾಗಿದೆ. ಇನ್ನು ಹಸುಗಳನ್ನು ಕಸಾಯಿಖಾನೆಗೆ ತರುವುದಕ್ಕೆ ಅನುಮತಿ ಕಡ್ಡಾಯವಾಗಿದೆ.

ಹಾಲಿ ಕಾಯ್ದೆಯಲ್ಲಿ ಕಠಿಣ ಅಂಶಗಳು ಇಲ್ಲದಿರುವುದರಿಂದ ಹಾಗೂ ಶಿಕ್ಷೆ ಪ್ರಮಾಣ ಕಡಿಮೆ ಇರುವುದರಿಂದ ಆರೋಪಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿದೆ. ಹಾಲಿ ಕಾಯ್ದೆಯಿಂದ ಗೋ ಹತ್ಯೆಗೆ ಕಡಿವಾಣ ಬಿದ್ದಿಲ್ಲ. ಅಕ್ರಮ ಗೋ ಹತ್ಯೆ, ಮಾರಾಟ, ಸಾಗಾಟ ನಿರಂತರವಾಗಿ ಸಾಗಿದೆ ಎಂಬುದು ಬಿಜೆಪಿ ಸರ್ಕಾರದ ವಾದ. ಈ ಹಿನ್ನೆಲೆಯಲ್ಲಿ ಕಾಯ್ದೆಗೆ ಇನ್ನಷ್ಟು ಬಲ ತುಂಬಲು ಸರ್ಕಾರ ಮುಂದಾಗಿದೆ.

ಬಿಜೆಪಿ ಉದ್ದೇಶಿಸಿದ್ದ ಕಾನೂನು ಹೇಗಿತ್ತು:

ಈ ಹಿಂದೆ 2010ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಸಂರಕ್ಷಣೆ ಮಸೂದೆ 2010 ತರಲು ಉದ್ದೇಶಿದ್ದರು. ಅದರಲ್ಲಿ ಗೋವುಗಳ ಜತೆಗೆ ಎತ್ತು, ಎಮ್ಮೆ, ಎಮ್ಮೆ ಕರುವಿನ ವಧೆಗೆ ನಿಷೇಧ ಹೇರಲಾಗಿತ್ತು.

ಗೋ ಹತ್ಯೆ ಹಾಗೂ ಕಳ್ಳ ಸಾಗಣೆ ಮಾಡುವವರಿಗೆ 7 ವರ್ಷ ಶಿಕ್ಷೆ ಹಾಗೂ 1 ಲಕ್ಷ ದಂಡ ಸೇರಿಸಲಾಗಿತ್ತು. ಒಂದು ತಾಲೂಕಿನಿಂದ ಇನ್ನೊಂದು ತಾಲೂಕಿಗೆ ಗೋವುಗಳನ್ನು ಕೊಂಡೊಯ್ಯಲು ಪೊಲೀಸರ ಅನುಮತಿ ಕಡ್ಡಾಯವಾಗಿತ್ತು.

2010ರಲ್ಲಿ ಯಡಿಯೂರಪ್ಪ ಅವರು ಈ ವಿವಾದಿತ ಗೋ ಹತ್ಯೆ ನಿಷೇಧ ಮಸೂದೆಯನ್ನು ಮಂಡಿಸಿದ್ದರು. ಎರಡೂ ಸದನಗಳಲ್ಲಿ ಮಸೂದೆ ಅಂಗೀಕೃತವಾಗಿತ್ತು. ಆದರೆ, ಬಳಿಕ ಅಂದಿನ ರಾಜ್ಯಪಾಲ ಭಾರದ್ವಾಜ್ ತಮ್ಮ ಅನುಮೋದನೆ ನೀಡಿರಲಿಲ್ಲ. ಅತ್ತ ಅಂದಿನ ಕೇಂದ್ರ ಗೃಹ ಸಚಿವಾಲಯ ಸಹ ಕೆಲವೊಂದು ಆಕ್ಷೇಪಣೆ ವ್ಯಕ್ತಪಡಿಸಿ ತಿದ್ದುಪಡಿಗೆ ಸೂಚನೆ ನೀಡಿತ್ತು. ಇದಾದ ಬಳಿಕ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ 1964ರ ಕಾಯ್ದೆಯನ್ನೇ ಮುಂದುವರಿಸುವ ನಿರ್ಧಾರಕ್ಕೆ ಬಂದಿತ್ತು.

ಗೋ ಹತ್ಯೆ ನಿಷೇಧ ಕಾಯ್ದೆ
ಸಾಂದರ್ಭಕ ಚಿತ್ರ

ಗುಜರಾತ್, ಉ.ಪ್ರದೇಶ ಮಾದರಿ ಕಾಯ್ದೆಯಲ್ಲೇನಿದೆ?:

ಗುಜರಾತ್ ಅಥವಾ ಉ.ಪ್ರದೇಶ ಮಾದರಿಯ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ಗುಜರಾತ್ ಗೋ ಹತ್ಯೆ ನಿಷೇಧ ಕಾಯ್ದೆಯಡಿ ಗರಿಷ್ಠ ಶಿಕ್ಷೆಯನ್ನು 14 ವರ್ಷಕ್ಕೆ ಏರಿಕೆ ಮಾಡಲಾಗಿದೆ. 7 ವರ್ಷ ಕಡಿಮೆ ಇಲ್ಲದಂತೆ ಗೋ ಹಂತಕರಿಗೆ ಶಿಕ್ಷೆ ವಿಧಿಸಲಾಗುವುದು. ಗೋ ಹಂತಕರಿಗೆ 1 ಲಕ್ಷರಿಂದ 5 ಲಕ್ಷ ರೂ. ವರೆಗೆ ದಂಡ ವಿಧಿಸಲಾಗಿದೆ.

ಹಸುವಿನ ಕಳ್ಳ ಸಾಗಾಟ ಮಾಡುವವರ ಮೇಲಿನ ಶಿಕ್ಷೆ ಪ್ರಮಾಣವನ್ನು 7 ರಿಂದ 10 ವರ್ಷ ವರೆಗೆ ಹೆಚ್ಚಿಸಲಾಗಿದೆ. ಅದೇ ರೀತಿ ದಂಡದ ಪ್ರಮಾಣವನ್ನು 50,000 ರೂ. ನಿಂದ 1 ಲಕ್ಷ ರೂ.‌ವರೆಗೆ ಏರಿಕೆ ಮಾಡಲಾಗಿದೆ. ಹಸುವಿನ ಕಳ್ಳ ಸಾಗಟ ಮಾಡುವ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಆರೋಪಿಗಳಿಗೆ ಜಾಮೀನು ರಹಿತ ಶಿಕ್ಷೆ ವಿಧಿಸಲಾಗುತ್ತದೆ.

ಇತ್ತ ಉತ್ತರ ಪ್ರದೇಶ ಕಾಯ್ದೆಯಡಿ ಗೋ ಹಂತಕರಿಗೆ 10 ವರ್ಷ ಸಜೆ ವಿಧಿಸಿದರೆ, 5 ಲಕ್ಷ ರೂ. ವರೆಗೆ ದಂಡ ಹಾಕಲಾಗುತ್ತದೆ. ಮೊದಲ ಅಪರಾಧಕ್ಕೆ ಒಂದು ವರ್ಷದಿಂದ 7 ವರ್ಷ ವರೆಗೆ ಕಠಿಣ ಸಜೆ ವಿಧಿಸಲಾಗುತ್ತದೆ. 1ರಿಂದ 3 ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿಯ ಅಪರಾಧಕ್ಕೆ 10 ವರ್ಷದ ಸಜೆ ಜೊತೆಗೆ 5 ಲಕ್ಷ ರೂ. ವರೆಗೆ ದಂಡ ಹಾಕಲಾಗುತ್ತದೆ.

ರಾಜ್ಯದ ಹೊಸ ಕಾನೂನು ಹೇಗಿರಲಿದೆ?:

ರಾಜ್ಯದಲ್ಲೂ ಗುಜರಾತ್ ಮತ್ತು ಉತ್ತರ ಪ್ರದೇಶ‌ ಕಾಯ್ದೆಯಲ್ಲಿರುವ ಕಠಿಣ ಅಂಶವನ್ನು ಸೇರಿಸಿ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ತರಲು ಉದ್ದೇಶಿಸಲಾಗಿದೆ.

ರಾಜ್ಯದಲ್ಲೂ ಕನಿಷ್ಠ 7 ರಿಂದ ಗರಿಷ್ಠ 10 ವರ್ಷದ ವರೆಗೆ ಶಿಕ್ಷೆ ವಿಧಿಸುವ ಅಂಶವನ್ನು ಸೇರಿಸಲು ಮುಂದಾಗಿದೆ. ಜಾಮೀಜು ರಹಿತ ಶಿಕ್ಷೆ ವಿಧಿಸಲು ಕಠಿಣ ಅಂಶ ಸೇರಿಸುವ ಚಿಂತನೆ ಇದೆ. ಅದೇ ರೀತಿ ಗರಿಷ್ಠ 5 ಲಕ್ಷ ರೂ. ದಂಡ ಹಾಕುವ ಅಂಶವನ್ನು ಸೇರ್ಪಡೆಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಯಾವುದೇ ಜಾನುವಾರು ಕೊಲ್ಲದೆ ಕೊನೆಯ ತನಕ ಕಾಪಾಡಬೇಕು. ಯಾವುದೇ ಪ್ರಾಣಿಗಳ ಸಾಗಾಟಕ್ಕೆ ಅಧಿಕಾರಿಗಳ ಅನುಮತಿ ಕಡ್ಡಾಯಗೊಳಿಸುವ ನಿಯಮವನ್ನು ಸೇರಿಸುವ ಚಿಂತನೆ ಇದೆ. ಗೋಶಾಲೆ, ಕೃಷಿ ಹಾಗೂ ಹೈನುಗಾರಿಕೆಗೆ ಆದ್ಯತೆ, ಪ್ರಾಧಿಕಾರ ರಚನೆ ಮಾಡಿ ಅದರ ಮೂಲಕ ನಿಯಂತ್ರಣ, ಗೋ ಸೇವಾ ಆಯೋಗ ರಚನೆ ಮಾಡಿ ಅದರ ಮೂಲಕ ಸಂರಕ್ಷಣೆ ಮಾಡಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.