ಬೆಂಗಳೂರು : ಸಿಲಿಕಾನ್ ಸಿಟಿಯ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಬಳಿ ರಸ್ತೆ ಕಾಮಗಾರಿ ನಡೆಯುವ ಮಣ್ಣು ಕುಸಿದು ಕಾರ್ಮಿಕನೋರ್ವ ಮೃತಪಟ್ಟಿರುವ ಘಟನೆ ನಡೆದಿದೆ.
ಒಳಚರಂಡಿ ಕಾಮಗಾರಿ ವೇಳೆ ಆಳದಲ್ಲಿ ಕೆಲಸ ಮಾಡ್ತಿದ್ದ 30 ವರ್ಷದ ಕಾರ್ಮಿಕ ಧರ್ಮರಾಜ್ ಎಂಬುವರ ಮೇಲೆ ಮಣ್ಣು ಕುಸಿದ ಪರಿಣಾಮ, ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಇದನ್ನೂ ಓದಿ: ರೌಡಿ ಕೊತ್ವಾಲನ ಶಿಷ್ಯ ಎನ್ನುವುದನ್ನು ಡಿಕೆಶಿ ವರ್ತನೆ ತೋರಿಸುತ್ತಿದೆ : ಬಿಜೆಪಿ 'ಟ್ವೀಕೆ'
ಕನಿಷ್ಟ ಮುಂಜಾಗ್ರತಾ ಕ್ರಮಕೈಗೊಳ್ಳದೆ ಅಜಾಗರೂಕತೆ ವಹಿಸಿರುವುದು ಘಟನೆಗೆ ಕಾರಣ ಎಂದು ಆರೋಪಿಸಲಾಗಿದೆ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ. ಗುತ್ತಿಗೆದಾರ ಮತ್ತು ಎಂಜಿನಿಯರ್ ವಿರುದ್ಧ ಎಫ್ಐಆರ್ ದಾಖಲಿಸುವ ಸಾಧ್ಯತೆಯಿದೆ.