ಬೆಂಗಳೂರು: ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಉತ್ಸವಕ್ಕೆ ಅದ್ದೂರಿಯಾಗಿ ಚಾಲನೆ ಸಿಕ್ಕಿದೆ. ಮೂರು ದಿನಗಳ ಕಾಲ ಏರ್ಪೋರ್ಟ್‌ನಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಪ್ರಯಾಣಿಕರಿಗೆ ಮನರಂಜನೆ ಉಣಬಡಿಸಲಾಗುತ್ತಿದೆ.
ವಿಮಾನ ನಿಲ್ದಾಣದಲ್ಲಿ ಇಂದಿನಿಂದ ದಸರಾ ಉತ್ಸವ ಮನೆ ಮಾಡಿದೆ. ಬಿಐಎಎಲ್ ಹಾಗೂ ರಾಜ್ಯ ಸರ್ಕಾರ ಇಲಾಖೆ ಜಂಟಿಯಾಗಿ ಈ ಸಮಾರಂಭವನ್ನು ಆಯೋಜಿಸಿದ್ದು, ಪ್ರತಿ ವರ್ಷ ದಂತೆ ಈ ಸಲವು ಮೂರು ದಿನಗಳ ಕಾಲ ಪ್ರಯಾಣಿಕರಿಗೆ ಕನ್ನಡದ ಸಂಸ್ಕೃತಿ ಹಾಗೂ ಇತಿಹಾಸದ ಪರಿಚಯದ ಜೊತೆಗೆ ಮನರಂಜನೆ ನೀಡುತ್ತಿದೆ.