ಬೆಂಗಳೂರು: ತೀವ್ರಗತಿಯಲ್ಲಿ ಏರುತ್ತಿರುವ ಕೊರೊನಾ ಸೋಂಕನ್ನು ನಿಯಂತ್ರಿಸುವ ಸಲುವಾಗಿ ಬೆಂಗಳೂರು ನಗರದಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಆದರೆ, ಭಿಕ್ಷುಕರು, ಅನಾಥರು ಒಂದೊತ್ತಿನ ಊಟ ಸಿಗದೆ ನರಕ ಅನುಭವಿಸುತ್ತಿದ್ದಾರೆ.
ತರಕಾರಿ, ಮಾಂಸದಂಗಡಿ, ದಿನಸಿ ಮತ್ತು ವೈದ್ಯಕೀಯ ಸೇವೆ ಬಿಟ್ಟರೆ ಉಳಿದೆಲ್ಲವೂ ಬಂದ್ ಆಗಿದೆ. ಜನರು ಅಗತ್ಯತೆಗಳನ್ನು ಪಡೆದು ತಮ್ಮ ಮನೆಯಲ್ಲೇ ಇರುತ್ತಾರೆ. ಆದರೆ, ಭೀಕ್ಷೆ ಬೇಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದವರ ಪಾಡು ಹೀಳತೀರದಾಗಿದೆ.
ಈಟಿವಿ ಭಾರತದ ಕಣ್ಣಿಗೆ ಬಿದ್ದ ಭಿಕ್ಷುಕನೋರ್ವ ಹಸಿವಿನಿಂದ ಕಂಗೆಟ್ಟು ಊಟ ಎಲ್ಲಿ ಸಿಗುತ್ತೆ ಎಂದು ಹುಡುಕಾಡುತ್ತಿದ್ದ. ಲಾಕ್ಡೌನ್ ಇದೆ ಅಂದರೆ ಉಚಿತ ಊಟ ಕೊಡ್ತಾರಾ ಎಂಬ ಪ್ರಶ್ನೆಯನ್ನೂ ಕೇಳುತ್ತಿದ್ದ.
ಇದೊಂದು ಉದಾಹರಣೆ ಅಷ್ಟೇ. ನಗರದಲ್ಲಿ ಮಾನಸಿಕ ಅಸ್ವಸ್ಥರು, ಅನಾಥರು ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿರುವವರ ಪಾಡು ಹೇಗಿರಬಹುದು ಅನ್ನೀನೋದನ್ವೇನು ಊಹಿಸುವುದೂ ಕಷ್ಟ. ಈ ಹಿಂದೆ ಲಾಕ್ಡೌನ್ ಹೇರಿದ ಸಂದರ್ಭದಲ್ಲಿ ಸಂಘಟನೆಗಳು, ದಾನಿಗಳು ಊಟದ ವ್ಯವಸ್ಥೆ ಮಾಡಿದ್ದರು. ಈಗ ಕೊರೊನಾ ಆರ್ಭಟ ಹೆಚ್ಚಾಗಿರುವ ಜನರಲ್ಲಿ ಭಯ ಹೆಚ್ಚಾಗಿದೆ. ಕೆಲವೆಡೆ ಮಾತ್ರ ಸಹೃದಯಿಗಳು ಮಾನವೀಯತೆ ದೃಷ್ಟಿಯಿಂದ ಅನ್ನದಾನ ಮಾಡುತ್ತಿದ್ದಾರೆ.