ಬೆಂಗಳೂರು: ಈಜಲು ಹೋದ ಬಾಲಕ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
8 ವರ್ಷದ ಪ್ರಜ್ವಲ್ ಬಾವಿಯಲ್ಲಿ ಮುಳುಗಿ ಮೃತಪಟ್ಟಿರುವ ಬಾಲಕ. ಪ್ರಜ್ವಲ್ ತನ್ನ ಸ್ನೇಹಿತರೊಂದಿಗೆ ಸಮೀಪದಲ್ಲಿರುವ ಸ್ವಿಮ್ಮಿಂಗ್ ಪೂಲ್ಗೆ ಈಜಲು ತೆರಳಿದ್ದಾನೆ. ಈ ವೇಳೆ ಪ್ರವೇಶ ನಿರಾಕರಣೆ ಹಿನ್ನೆಲೆ ಪಕ್ಕದ ಬಾವಿಗೆ ಈಜಲು ಹೋಗಿದ್ದಾರೆ. ಬಾವಿ ಕಂಡ ಕೂಡಲೇ ಪ್ರಜ್ವಲ್ ನೀರಿಗೆ ಧುಮುಕಿದ್ದಾನೆ. ಬಿದ್ದು ಹಲವು ನಿಮಿಷಗಳಾದರೂ ಮೇಲಕ್ಕೆ ಬಾರದಿದ್ದರಿಂದ ಜೊತೆಗಿದ್ದ ಹುಡುಗರು ಗಾಬರಿಯಾಗಿ ಕೂಡಲೇ ಆತನ ಪೋಷಕರಿಗೆ ತಿಳಿಸಿದ್ದಾರೆ.
ಮಾಹಿತಿಯನ್ನಾಧರಿಸಿ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸಿವಿಲ್ ಡಿಫೆನ್ಸ್ ಫೋರ್ಸ್ ಸ್ಥಳಕ್ಕೆ ದೌಡಾಯಿಸಿ ಶವ ಪತ್ತೆಗೆ ಶೋಧ ನಡೆಸಲಾಗುತ್ತಿದೆ. ಬಾವಿ ಸುಮಾರು 50ರಿಂದ 60 ಅಡಿ ಆಳವಿದೆ ಎಂದು ಹೇಳಲಾಗುತ್ತಿದೆ. ಸದ್ಯ ಅಗ್ನಿಶಾಮಕ ದಳ ಕಾರ್ಯಾಚರಣೆ ಮುಂದುವರೆಸಿದೆ.