ಬೆಂಗಳೂರು: ಮೇಯರ್ ಚುನಾವಣೆ ಮತದಾರರ ಪಟ್ಟಿಯಿಂದ ಅನರ್ಹ ಶಾಸಕರ ಹೆಸರು ಕೈಬಿಟ್ಟ ಬಳಿಕ ಬಿಬಿಎಂಪಿ ಮತ್ತೊಂದು ಶಾಕ್ ನೀಡಿದೆ. ಬಿಬಿಎಂಪಿಯ ಕೆಂಪೇಗೌಡ ಜಯಂತಿ ಆಹ್ವಾನ ಪತ್ರಿಕೆಯಿಂದಲೂ ಅನರ್ಹ ಶಾಸಕರ ಹೆಸರನ್ನು ಕೈಬಿಡಲಾಗಿದೆ.
![Kempegowda Jayanti invitation](https://etvbharatimages.akamaized.net/etvbharat/prod-images/4314477_bbmp.jpg)
ಬೈರತಿ ಬಸವರಾಜ್, ಎಸ್.ಟಿ.ಸೋಮಶೇಖರ್, ಮುನಿರತ್ನ ಹಾಗೂ ಗೋಪಾಲಯ್ಯ ಅವರ ಹೆಸರನ್ನು ಬಿಬಿಎಂಪಿ ಆಹ್ವಾನ ಪತ್ರಿಕೆಯಿಂದ ಕೈಬಿಡಲಾಗಿದೆ. ಮಾಜಿ ಸ್ಪೀಕರ್ ರಮೇಶ್ ಕುಮಾರ್ರಿಂದ ಅನರ್ಹಗೊಂಡಿರುವ ಶಾಸಕರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿಲ್ಲ.
ಇತ್ತೀಚೆಗಷ್ಟೇ ಬಿಬಿಎಂಪಿ ಮೇಯರ್ ಚುನಾವಣೆಯ ಮತದಾರರ ಪಟ್ಟಿಯಿಂದಲೂ ಅನರ್ಹ ಶಾಸಕರ ಹೆಸರು ತೆಗೆಯಲಾಗಿತ್ತು. ಇದೀಗ ಕೆಂಪೇಗೌಡ ದಿನಾಚರಣೆ ಆಹ್ವಾನ ಪತ್ರಿಕೆಯಲ್ಲೂ ಹೆಸರಿಗೆ ಕೊಕ್ ನೀಡಲಾಗಿದೆ.