ETV Bharat / state

ಕೊರೊನಾ ಭೀತಿಯಲ್ಲಿ ಆರಂಭಗೊಂಡ ಅಧಿವೇಶನ: ಹಲವು ಸಚಿವರು, ಶಾಸಕರು ಸದನಕ್ಕೆ ಗೈರು - corona panic

ಇಂದಿನಿಂದ ವಿಧಾನಮಂಡಲ ಉಭಯ ಸದನಗಳ ಕಲಾಪ ಆರಂಭಗೊಂಡಿದ್ದು, ಐವರು ಸಚಿವರು ಹಾಗೂ 60 ಕ್ಕೂ ಹೆಚ್ಚು ಶಾಸಕರು ಹಾಗೂ ಕೆಲ ಅಧಿಕಾರಿಗಳು ಕೊರೊನಾ ಸೋಂಕಿನಿಂದ ಕ್ವಾರಂಟೈನ್‌ಗೆ ಒಳಗಾಗಿದ್ದು, ಇವರೆಲ್ಲಾ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು.

Assembly
ಅಧಿವೇಶನ
author img

By

Published : Sep 21, 2020, 5:18 PM IST

ಬೆಂಗಳೂರು: ಕೊರೊನಾ ಸೋಂಕಿನ ಭೀತಿಯಲ್ಲೇ ವಿಧಾನಮಂಡಲ ಉಭಯ ಸದನಗಳ ಕಲಾಪ ಇಂದಿನಿಂದ ಆರಂಭಗೊಂಡಿದೆ. ಆದರೆ, ಅಧಿವೇಶನ ಈ ಮೊದಲಿನಂತಿಲ್ಲ‌. ಭಯ, ಆತಂಕದ ನಡುವೆ ಕಲಾಪ ಪ್ರಾರಂಭವಾಗಿದ್ದು, ಇಂದು ಗಣ್ಯರಿಗೆ ಸಂತಾಪ ಸೂಚಿಸಿದ ನಂತರ ಮಧ್ಯಾಹ್ನ ಕಲಾಪವನ್ನು ನಾಳೆಗೆ ಮುಂದೂಡಲಾಯಿತು.

ಐವರು ಸಚಿವರು ಹಾಗೂ 60 ಕ್ಕೂ ಹೆಚ್ಚು ಶಾಸಕರು ಹಾಗೂ ಕೆಲ ಅಧಿಕಾರಿಗಳು ಕೊರೊನಾ ಸೋಂಕಿನಿಂದ ಕ್ವಾರಂಟೈನ್‌ಗೆ ಒಳಗಾಗಿದ್ದು, ಇವರೆಲ್ಲಾ ಅಧಿವೇಶನಕ್ಕೆ ಗೈರು ಹಾಜರಾಗಿದ್ದರು. ಸದನದ ಒಳಗೆ ಸದಸ್ಯರ ಆಸನಗಳಿಗೆ ಗಾಜಿನ ಸುರಕ್ಷತಾ ಫಲಕಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಶಾಸಕರ ಮೇಜಿನ ಮೇಲೆ ಸ್ಯಾನಿಟೈಸರ್ ಇಡಲಾಗಿದೆ. ಎಲ್ಲರೂ ಮಾಸ್ಕ್ ಧರಿಸಿ ಬರುವುದನ್ನು ಕಡ್ಡಾಯಗೊಳಿಸಲಾಗಿದೆ.

ಪತ್ರಕರ್ತರಿಗೆ ವಿಧಾನಸಭೆಯ ಎರಡನೇ ಮಹಡಿಯಿಂದ ಪ್ರವೇಶ ನೀಡಲಾಗಿದೆ. ಅಧಿವೇಶನ ಹಿನ್ನೆಲೆಯಲ್ಲಿ ಶಾಸಕರು, ಸಚಿವರು, ಉಭಯ ಸದನಗಳ ಅಧಿಕಾರಿಗಳು ಸಿಬ್ಬಂದಿ ಮತ್ತು ಪತ್ರಕರ್ತರಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿತ್ತು. ಅನೇಕ ಮಂದಿಗೆ ಸೋಂಕು ಧೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.

ಎಲ್ಲದಕ್ಕೂ ನಿರ್ಬಂಧ: ಕೊರೊನಾ ಹಿನ್ನೆಲೆಯಲ್ಲಿ ಅಧಿವೇಶನ ವೀಕ್ಷಿಸಲು ಆಗಮಿಸುತ್ತಿದ್ದ ಸಾರ್ವಜನಿಕರಿಗೆ ಇದೇ ಮೊದಲ ಬಾರಿಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ. ಪ್ರತಿ ಅಧಿವೇಶನ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು, ವಿವಿಧ ದೇಶಗಳಿಂದ ಆಗಮಿಸುವ ಗಣ್ಯರು ಸೇರಿದಂತೆ ಎಲ್ಲರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಕೊರೊನಾದಿಂದಾಗಿ ನಿರ್ಬಂಧಿಸಲಾಗಿದೆ.

ಪ್ರತಿಬಾರಿಯ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸದಸ್ಯರು ಮೊಗಸಾಲೆಯಲ್ಲಿ ಲೋಕಾಭಿರಾಮವಾಗಿ ಕುಳಿತು ಉಭಯ ಕುಶಲೋಪರಿ ಮಾತನಾಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಕೊರೊನಾ ಅದಕ್ಕೆಲ್ಲಾ ಕಡಿವಾಣ ಹಾಕಿದ ಹಿನ್ನೆಲೆಯಲ್ಲಿ ಶಾಸಕರು ಮುಖ ನೋಡಿಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿಧಾನ ಮಂಡಲದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬಿಗಿ ಕ್ರಮಗಳೊಂದಿಗೆ ವಿಶಿಷ್ಟ ರೀತಿಯಲ್ಲಿ ಅಧಿವೇಶನ ನಡೆಸಲಾಗುತ್ತಿದೆ.

ಪ್ರತಿಯೊಬ್ಬರು ಮಾಸ್ಕ್ ಧರಿಸುವ ಜೊತೆಗೆ ದೈಹಿಕ ಉಷ್ಣಾಂಶ ತಪಾಸಣೆ, ಸ್ಯಾನಿಟೈಸರ್ ಬಳಕೆ, ಕಡ್ಡಾಯವಾಗಿದ್ದು ಇನ್ನೂ ಕೆಲವರು ಮುಖಕ್ಕೆ ಫೇಸ್ ಶೀಲ್ಡ್ ಹಾಕಿಕೊಂಡು ಕಲಾಪಕ್ಕೆ ಹಾಜರಾಗಿದ್ದರು. ಸದನದ ಗ್ಯಾಲರಿ ಗೆ ಹೋಗುವ ಅಧಿಕಾರಿಗಳು ಹಾಗೂ ಪತ್ರಕರ್ತರು ಕಡ್ಡಾಯವಾಗಿ ಮುಖ್ಯದ್ವಾರದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ನೆಗೆಟಿವ್ ವರದಿ ಬಂದಿರುವ ಮೆಸೇಜ್ ತೋರಿಸಿದವರಷ್ಟೇ ಒಳ ಪ್ರವೇಶಿಸಲು ಅವಕಾಶ ಕಲ್ಪಿಸಲಾಗಿದೆ.

ಆಸನದ ವ್ಯವಸ್ಥೆ: ವಿಧಾನಸೌಧದ ಪೂರ್ವದ್ವಾರದಿಂದ ಸಚಿವರು, ಶಾಸಕರು ಹಾಗೂ ಅವರ ಗನ್‌ಮ್ಯಾನ್ ಮತ್ತು ಪಿಎಗಳಿಗೆ ಅವಕಾಶ ಪ್ರವೇಶಾವಕಾಶ ಕಲ್ಪಿಸಲಾಗಿದ್ದು, ಶಾಸಕರ ಪಿಎ ಮತ್ತು ಗನ್‌ಮ್ಯಾನ್‌ಗಳಿಗೆ ವಿಧಾನಸಭೆಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಇವರಿಗೆ ಬ್ಯಾಕ್ವೆಂಟ್ ಹಾಲ್‌ನಲ್ಲಿ ಕೂರಲು ಆಸನ ವ್ಯವಸ್ಥೆ ಮಾಡಲಾಗಿದೆ. ಶಾಸಕರ ಆಪ್ತ ಸಹಾಯಕರಿಗೆ ಪೂರ್ವದ್ವಾರದ ಸೆಂಟ್ರಲ್ ಹಾಲ್‌ನಲ್ಲಿ ಕೂರಲು ಅವಕಾಶ ಮಾಡಿಕೊಡಲಾಗಿದ್ದು, ಮಾಧ್ಯಮದವರಿಗೆ ಪೂರ್ವ ದ್ವಾರದ ಸೆಂಟ್ರಲ್ ಹಾಲ್‌ನಲ್ಲಿ ಆಸನ ವ್ಯವಸ್ಥೆ ಹಾಗೂ 2 ನೇ ಮಹಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ.

ಸದನಕ್ಕೆ ಗೈರಾದ ಸಚಿವರು, ಶಾಸಕರು : ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಡಿಸಿಎಂ ಡಾ. ಅಶ್ವಥನಾರಾಯಣ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ. ಗೋಪಾಲಯ್ಯ, ಬೈರತಿ ಬಸವರಾಜ್, ಪ್ರಭು ಚೌಹಾಣ್, ಶಾಸಕರಾದ ಉಮಾನಾಥ್ ಕೋಟ್ಯಾನ್, ಎಂ‌.ಪಿ.ಕುಮಾರಸ್ವಾಮಿ, ಎಸ್.ಆರ್. ವಿಶ್ವನಾಥ್ ಗೈರಾಗಿದ್ದಾರೆ.

ಕಾಂಗ್ರೆಸ್​ನ ಕೊರೊನಾ ಪೀಡಿತ ಕಾಂಗ್ರೆಸ್ ಶಾಸಕರು: ಎಚ್. ಪಿ. ಮಂಜುನಾಥ್, ಬಿ.ನಾರಾಯಣರಾವ್, ಡಿ.ಎಸ್ ಹುಲಗೇರಿ, ಬಸನಗೌಡ ದದ್ದಲ್, ಪ್ರಿಯಾಂಕಾ ಖರ್ಗೆ, ಕುಸುಮಾ ಶಿವಳ್ಳಿ, ಬಿ.ಕೆ. ಸಂಗಮೇಶ ಸೋಂಕಿಗೆ ಒಳಪಟ್ಟಿದ್ದಾರೆ.

ಜೆಡಿಎಸ್ ಶಾಸಕರುಗಳು: ವೆಂಕಟರಾವ್ ನಾಡಗೌಡ, ಡಿ.ಸಿ.ಗೌರಿಶಂಕರ್, ಕೆ.ಮಹದೇವ್ ಅವರು ಸೋಂಕಿತರಾಗಿದ್ದಾರೆ. ಇನ್ನು ಹೋಂ ಕ್ವಾರಂಟೈನ್​ನಲ್ಲಿ ಸಚಿವರಾದ ಶಶಕಲಾ ಜೊಲ್ಲೆ, ಶಿವರಾಂ ಹೆಬ್ಬಾರ್ ಸೇರಿದಂತೆ ಹಲವರು ಇದ್ದಾರೆ. ಇವರೆಲ್ಲರೂ ಇಂದು ಸದನಕ್ಕೆ ಗೈರಾಗಿದ್ದರು. ಅದೇ ರೀತಿ ಮಾಜಿ ಸಿಎಂ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ದಿನೇಶ್ ಗುಂಡೂರಾವ್ ಮತ್ತಿತರ ನಾಯಕರು ಇಂದು ಸದನಕ್ಕೆ ಬಂದಿರಲಿಲ್ಲ.

ಸಾರ್ವಜನಿಕರಿಗೆ ನಿರ್ಬಂಧ: ವಿಧಾನ ಮಂಡಲದ ಅಧಿವೇಶನದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಧಾನಸೌಧದ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದ್ದು, ವಿಧಾನಸೌಧದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.