ETV Bharat / state

ಸಚಿವ ಸಿ.ಟಿ.ರವಿ ತಮ್ಮ ಇಲಾಖೆಯಲ್ಲಿ ಮಾಡಿರುವ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವರದಿ !

author img

By

Published : Dec 7, 2019, 6:53 PM IST

ಸಚಿವ ಸಿ.ಟಿ.ರವಿ ತಮ್ಮ ಇಲಾಖೆಗಳ ನೂರು ದಿನಗಳ ಸಾಧನೆ ಬಗ್ಗೆ ಇಂದು ವಿಧಾನಸೌಧದಲ್ಲಿ ಕಿರು ಹೊತ್ತಿಗೆ‌ ಬಿಡುಗಡೆ ಮಾಡಿ, ಈವೆರೆಗಿನ ತಮ್ಮ ಕಾರ್ಯಗಳ ಸಂಪೂರ್ಣ ಮಾಹಿತಿ ನೀಡಿದರು.

The achievements of the Minister CT Ravi in his department
ಸಚಿವ ಸಿ.ಟಿ.ರವಿ ತಮ್ಮ ಇಲಾಖೆಯಲ್ಲಿ ಮಾಡಿರುವ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವರದಿ !

ಬೆಂಗಳೂರು: ಸಚಿವ ಸಿ.ಟಿ.ರವಿ ತಮ್ಮ ಇಲಾಖೆಗಳ ನೂರು ದಿನಗಳ ಸಾಧನೆ ಬಗ್ಗೆ ಇಂದು ವಿಧಾನಸೌಧದಲ್ಲಿ ಕಿರು ಹೊತ್ತಿಗೆ‌ ಬಿಡುಗಡೆ ಮಾಡಿದರು.

ಕಿರು ಹೊತ್ತಿಗೆ ಬಿಡುಗಡೆ ಮಾಡಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಿ.ಟಿ.ರವಿ, ಶತದಿನದ ಸಂಕ್ರಮಣ ಇದಾಗಿದೆ. ಮೂವತ್ತು ಜಿಲ್ಲೆಗೆ ಹೋಗಿ ಇಲಾಖೆಗಳ ಪ್ರಗತಿ ಪರಿಶೀಲನೆ‌ ಮಾಡಿದ್ದು, ಕೆಳ‌ಹಂತದ ಪರಿಸ್ಥಿತಿಯ ಸಂತ್ಯಾಂಶ ತಿಳಿದುಬಂದಿದೆ ಎಂದು ಸ್ಪಷ್ಟಪಡಿಸಿದರು. ಪ್ರವಾಸೋದ್ಯಮ‌ ಇಲಾಖೆ ಬಗ್ಗೆ ಮಾತನಾಡಿ, ಗೋಲ್ಡನ್‌ ಚಾರಿಯೇಟ್ ರೈಲು ಸೇವೆಯನ್ನು ಪುನರಾರಂಭಿಸುತ್ತಿದ್ದು, ಈ ಬಾರಿ ನಷ್ಟದ ಪ್ರಶ್ನೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಬಾದಾಮಿ, ಬೇಲೂರು, ಹಂಪಿ, ವಿಜಯಪುರದಲ್ಲಿ ತ್ರಿ ಸ್ಟಾರ್ ಹೊಟೇಲ್ ನಿರ್ಮಿಸಲು ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ಮೈಸೂರಿನಲ್ಲಿ ಅತ್ಯಾಧುನಿಕ ಮೈಸೂರು ಹಾತ್​ಗೆ ಸಮಗ್ರ ಯೋಜನೆ ವರದಿ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಈ ಹಿಂದೆ‌ ಪ.ಜಾತಿ ಹಾಗೂ ಪ.ಪಂಗಡ ವಿದ್ಯಾರ್ಥಿಗಳಿಗೆ ಶಾಲಾ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗುತ್ತಿತ್ತು. ಮುಂದಿನ ವರ್ಷದಿಂದ ಅದನ್ನು ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ವಿಸ್ತರಿಸಲು ತೀರ್ಮಾನಿಸಲಾಗಿದೆ. ಮಕ್ಕಳನ್ನು ಜಾತಿ ಆಧಾರದಲ್ಲಿ ಪ್ರವಾಸಕ್ಕೆ ಕಳುಹಿಸಬಾರದು‌. ಹಾಗಾಗಿ ಮುಂದಿನ ವರ್ಷದಿಂದ ಎಲ್ಲಾ‌ ವರ್ಗದ ಮಕ್ಕಳಿಗೆ ಕರ್ನಾಟಕ ದರ್ಶನ ಪ್ರವಾಸ ಏರ್ಪಡಿಸಲಾಗುವುದೆಂದು ಸ್ಪಷ್ಟಪಡಿಸಿದರು.

ಇನ್ನೂ ಮಹಾತ್ಮರ ಜಯಂತಿಗಳನ್ನು ಜಾತಿ ಕೇಂದ್ರಿತವಾಗಿ ಆಚರಿಸಲಾಗುತ್ತಿದೆ. ಜಾತಿ ಬಲ ಇರುವ ಜಯಂತಿಗಳು ಅದ್ಧೂರಿಯಾಗಿ ನಡೆದರೆ, ಜಾತಿ ಬಲ ಇಲ್ಲದವರು ಸರಳವಾಗಿ ನಡೆಸುತ್ತಾರೆಂಬ ದೂರು ಬಂದಿತ್ತು. ಹೀಗಾಗಿ ಮಹಾತ್ಮರ ಜಯಂತಿಗಳನ್ನು ಅರ್ಥಪೂರ್ಣವಾಗಿ ಆಚರಿಸಲು, ಈ ಬಗ್ಗೆ ರೂಪುರೇಷೆ ರಚಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದು ತಜ್ಞರು ಹಾಗೂ ರಾಜಕೀಯ ಪಕ್ಷಗಳ ಜತೆ ಚರ್ಚಿಸಲಾಗುತ್ತದೆ. ಮುಂದಿನ ವರ್ಷದಿಂದ ವಿಭಿನ್ನ ರೂಪದಲ್ಲಿ ಜಯಂತಿ ಆಚರಿಸಲಾಗುತ್ತದೆ ಎಂದು ಸ್ಪಷ್ಟನೆ ನೀಡಿದರು. ಅಲ್ಲದೇ, ಜಯಂತಿಗಳನ್ನು ರದ್ದುಪಡಿಸಿದರೆ ರಾಜಕಾರಣ ಮಾಡುತ್ತಾರೆ. ಹಾಗಾಗಿ ಸಹಮತ ಮೂಡಿಸಿ ತೀರ್ಮಾನ ಮಾಡಲಾಗುತ್ತದೆ ಎಂದು ತಿಳಿಸಿದರು.

ಆನೆಗೆ ತಿನ್ನಿಸಿದರೆ ಕನಿಷ್ಠ ಲದ್ದಿ ಹಾಕುತ್ತೆ:

ರಾಜ್ಯದಲ್ಲಿ 18 ಸಕ್ಕರೆ ಕಾರ್ಖಾನೆಗಳಿವೆ. ಮೈಷುಗರ್ ಮಂಡ್ಯ ಕಾರ್ಖಾನೆ ಪುನಶ್ಚೇತನಕ್ಕೆ 504 ಕೋಟಿ ರೂ. ವ್ಯಯಿಸಲಾಗಿದ್ದರೂ ಸಹ ಅದರ ಪುನಶ್ಚೇತನ ಸಾಧ್ಯವಾಗಿಲ್ಲ. ಹೀಗಾಗಿ ಖಾಸಗಿ ಸಹಭಾಗಿತ್ವದಲ್ಲಿ ಪುನರಾರಂಭಿಸಲು ಅಧ್ಯಯನ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಆನೆಗೆ ಆಹಾರ ಕೊಟ್ಟರೆ ಲದ್ದಿಯಾದರೂ ಹಾಕುತ್ತದೆ, ಮೈ ಶುಗರ್​ಗೆ ಈಗಾಗಲೇ ಸಾಕಷ್ಟು ತಿನ್ನಿಸಿಯಾಗಿದೆ. ಇನ್ನೂ ಇದಕ್ಕೆ ತಿನ್ನಿಸಿದ್ರೆ ಲದ್ದಿಯಲ್ಲ ಏನೂ ಇಲ್ಲ. ಹೀಗಾಗಿ ಮತ್ತೆ ತಿನ್ನಿಸೋಕೆ ನಾವು ಹೋಗಲ್ಲ ಎಂದು ಸ್ಪಷ್ಟಪಡಿಸಿದರು. ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿಸಲು ಬಾಕಿ ಉಳಿಸಿಕೊಂಡಿದ್ದ ಹಿಂದಿನ ಸಾಲಗಳ ಒಟ್ಟು ಮೊತ್ತ 11948 ಕೋಟಿ ರೂ. ಪೈಕಿ 11,921 ಕೋಟಿ ರೂ. ಪಾವತಿಸಿದ್ದೇವೆ. ಸದ್ಯ ಕೇವಲ 37 ಕೋಟಿ ರೂ. ಮಾತ್ರ ಪಾವತಿ ಬಾಕಿ ಇದೆ ಎಂದು ಮಾಹಿತಿ ನೀಡಿದರು.

Intro:hhh

Body:hhhh

Conclusion:hhhh
ETV Bharat Logo

Copyright © 2024 Ushodaya Enterprises Pvt. Ltd., All Rights Reserved.