ETV Bharat / state

Textbook Revision: ಎನ್‌ಇಪಿ ಬದಲಿಸಿ ಸಾಂವಿಧಾನಿಕ ಮೌಲ್ಯ ಅಳವಡಿಸಿ ಸಮಗ್ರ ಪಠ್ಯಕ್ರಮ ಅನುಷ್ಠಾನವಾಗಲಿ- ಬಿ.ಕೆ.ಹರಿಪ್ರಸಾದ್‌ - ಈಟಿವಿ ಭಾರತ್​ ಕನ್ನಡ ನ್ಯೂಸ್

ಪಠ್ಯ ಪರಿಷ್ಕರಣೆಯನ್ನು ಬದಲಾಯಿಸಲು ಬಿ.ಕೆ. ಹರಿಪ್ರಸಾದ್‌ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ಧಾರೆ.

ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌

author img

By

Published : Jun 15, 2023, 10:33 PM IST

ಬೆಂಗಳೂರು : ಪ್ರಸ್ತುತ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಹಿಂದಿನ ಸರ್ಕಾರದ ಪಠ್ಯ ಪರಿಷ್ಕರಣೆಯನ್ನು ಬದಲಾಯಿಸಿ, ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸುವುದರ ಜೊತೆಗೆ ಸಮಗ್ರೀಕರಿಸಿ ಅನುಷ್ಠಾನಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಮನವಿ ಮಾಡಿದ್ದಾರೆ.

ಈ ಸಂಬಂಧ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಹರಿಪ್ರಸಾದ್‌, ಹಿಂದಿನ ಸರ್ಕಾರವು ಶಿಕ್ಷಣವನ್ನು ಕೇಸರಿಕರಣಗೊಳಸುವ ಉದ್ದೇಶದೊಂದಿಗೆ ನಮ್ಮ ಪವಿತ್ರ ಸಂವಿಧಾನವು ಒಪ್ಪಿಕೊಂಡಿರುವ ಮೌಲ್ಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಸಹೋದರತ್ವ ಮತ್ತು ಬಹುತ್ವವನ್ನು ಧಿಕ್ಕರಿಸಿ ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕೀಯ ಕಾರಣಗಳಗೆ ಬಳಸಿಕೊಂಡಿರುವುದು ವಿಷಾದನೀಯ. ಪಠ್ಯಪರಿಷ್ಕರಣೆಯ ನೆಪದಲ್ಲಿ ಹಿಂದಿನ ಸರ್ಕಾರವು ಈ ನೆಲ ಸಂಸ್ಕೃತೀಯನ್ನು ಶ್ರೀಮಂತಗೊಳಿಸಿದ ಧೀಮಂತರಾದ ಬಾಬಾಸಾಹೇಬ ಅಂಬೇಡ್ಕರ್, ಕುವೆಂಪು, ನಾರಾಯಣಗುರುಗಳು, ದೇವನೂರು ಮಹಾದೇವ ಅವರನ್ನೊಳಗೊಂಡಂತೆ ಅನೇಕ ದಾರ್ಶನಿಕರನ್ನು, ಸಾಹಿತಿಗಳನ್ನು, ಚಿಂತಕರನ್ನು ಅವಮಾನಿಸಿರುವುದು ದುರದೃಷ್ಟಕರ.

ಈ ನೆಲದಲ್ಲಿ ಹುಟ್ಟಿ ಶಾಂತಿ ಮತ್ತು ಪ್ರೀತಿಯನ್ನು ಜಗತ್ತಿಗೆ ಸಾರಿದ ಜೈನ-ಬೌದ್ಧ ಸಮುದಾಯಗಳನ್ನು ಕೂಡ ಅಪಮಾನಿಸಿದ್ದು, ಇತಿಹಾಸಕ್ಕೆ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ದ್ರೋಹ. ತಕ್ಷಣದಲ್ಲಿ ಈ ಪ್ರಮಾದಗಳನ್ನು ಸರಿಪಡಿಸುವ ಮೂಲಕ ನಮ್ಮ ಸರ್ಕಾರ ಸರ್ವಜನಾಂಗದ ಶಾಂತಿಯ ತೋಟವೆಂದು ಸಾರಿದ ಮಹನೀಯರ ಧೀಮಂತರ ಇತಿಹಾಸವನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ವಿವರಿಸಿದ್ದಾರೆ.

ದುರುದ್ದೇಶ ಪುಷ್ಟೀಕರಣ: ಇಲ್ಲಿನವರೆಗೆ ಚಾಲ್ತಿಯಲ್ಲಿರುವ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಪಠ್ಯ ಮಸ್ತಕಗಳ ಏಕಮುಖವಾದ ಪರಿಷ್ಕರಣೆ ಹಿಂದಿನ ಅಡಳತ ಪಕ್ಷದ ಗುಪ್ತ, ಧಾರ್ಮಿಕ ಹಾಗೂ ರಾಜಕೀಯ ದುರುದ್ದೇಶಗಳನ್ನು ಪುಷ್ಟಿಕರಿಸಲು ಇರುವುದನ್ನು ನಾವೆಲ್ಲರು ಗಮನಿಸಿದ್ದೇವೆ. ಪಠ್ಯ ಮಸ್ತಕಗಳ ಕೇಸರೀಕರಣದ ಭಾಗವಾಗಿ ನಿಜವಾದ ಸ್ವಾತಂತ್ರ ಹೋರಾಟಗಾರರ ರಾಷ್ಟ್ರೀಯತಾವಾದಿಗಳ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದವರ ಆಶಯ ಮತ್ತು ಜೀವನ ತತ್ವಗಳನ್ನು ಬದಿಗೆ ಸರಿಸಿದೆ. ಇದರ ಬದಲಿಗೆ ಆರ್​ಎಸ್​ಎಸ್, ಸಂಸ್ಥಾಪಕರ ಮತ್ತು ಮೂಲಭೂತವಾದಿಗಳ ಪ್ರಚೋದನಕಾರಿ ಭಾಷಣಗಳನ್ನು ಅಳವಡಿಸಿಕೊಂಡಿರುವ ಅಂಶಗಳಿಗೆ ಕಡಿವಾಣ ಹಾಕಬೇಕಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತತ್ವಗಳನ್ನು ವೈಭವಿಕರಿಸುವ ಶಿಕ್ಷಣ ನೀತಿ ಮತ್ತು ಪಠ್ಯಗಳ ಅವಶ್ಯಕತೆ ನಮ್ಮಗಿಲ್ಲ. ಆರ್​ಎಸ್​ಎಸ್​ ನ ಅಣತಿಯಂತೆ ರೂಪಿತವಾಗಿದ್ದ ಶೈಕ್ಷಣಿಕ ವೇಳಾಪಟ್ಟಿ, ಸಂವಿಧಾನ ವಿರೋಧಿ, ಆವೈಜ್ಞಾನಿಕ ಮತ್ತು ಅಪ್ರಜಾಸತ್ತಾತ್ಮಕ ಪಠ್ಯವು ಮೂಲೋತ್ಪಾಟನೆಗೊಳ್ಳಬೇಕಿದೆ. ಮತ್ತು ಸಮಗ್ರ ಧನಾತ್ಮಕ ಪರಿಷ್ಕರಣೆಯ ಅವಶ್ಯಕತೆ ಇದೆ ಎಂದಿದ್ದಾರೆ.

ಬಡ ಹಾಗೂ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಖಾತ್ರಿಗೊಳಸುವ ಆರ್‌ಟಿಇ ಸಂಪೂರ್ಣ ಅನುಷ್ಟಾನದಿಂದ ವಂಚಿತವಾಗಿದೆ. ಹೀಗಾಗಿ ಸಮಪರ್ಕವಾಗಿ ಮರು ಅನುಷ್ಠಾನಗೊಳಸುವ ಪೂರ್ಣ ಅವಶ್ಯಕತೆ ಇದೆ. ಸುಮಾರು 18ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳದಿರುವ ವಿಷಯದ ಬಗ್ಗೆ ಶಿಕ್ಷಣ ಇಲಾಖೆ ಆದ್ಯತೇಯ ಮೇರೆಗೆ, ಯುದ್ಧೋಪಾದಿಯ ಕ್ರಮ ಜರುಗಿಸಿ ಶಾಲೆಗಳಗೆ ಮರು ಸೇರಿಸುವ ಪ್ರಯತ್ನವಾಗಬೇಕಿದೆ.

ಖಾಯಂ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಸರ್ಕಾರಿ ಶಾಲೆಗಳಗೆ ತಕ್ಷಣದಲ್ಲಿ ಶಿಕ್ಷಕರ ನೇಮಕಾತಿ ಮಾಡಿ. ಬಡ ಮತ್ತು ಹಿಂದುಳದ ವರ್ಗಗಳಿಗೆ ಸೇರಿದ ಮಕ್ಕಳಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ಪವಿತ್ರ ಕಾರ್ಯ ತಕ್ಷಣದಲ್ಲಿ ಪ್ರಾರಂಭವಾಗಬೇಕಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯಲ್ಲಿ ಬೇರು ಬಿಟ್ಟು ತಮ್ಮ ಪಾರುಪತ್ಯ ಮುಂದುವರೆಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವರ್ಗಾವಣೆಯಾಗಬೇಕಿದೆ. ಶಿಕ್ಷಣ ಕ್ಷೇತ್ರದಲ್ಲಿ ಹಿಂದಿನ ಸರ್ಕಾರದ ಅವಧಿಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವನ್ನು ಕೊನೆಗೊಳಿಸಿ ಅತ್ಯಂತ ಪಾರದರ್ಶಕವಾದ ಮತ್ತು ನಿಷ್ಪಕ್ಷಪಾತವಾದ ಅಡಳತ ವ್ಯವಸ್ಥೆಯನ್ನು ಸ್ಥಾಪಿಸುವುದು ಅನಿವಾರ್ಯವಾಗಿದೆ ಎಂದು ಬಿ.ಕೆ. ಹರಿಪ್ರಸಾದ್‌ ಪತ್ರದಲ್ಲಿ ವಿವರಿಸಿದ್ದಾರೆ.

ನಮ್ಮ ಪಕ್ಷದ ಪ್ರಣಾಳಕೆಯಲ್ಲಿ ಘೋಷಿಸಿರುವ ಶೈಕ್ಷಣಿಕ ಮೌಲ್ಯ ಹಾಗೂ ಆದರ್ಶಗಳನ್ನು ಮಷ್ಟಿಕರಿಸುವ ದೃಷ್ಠಿಯಿಂದ ಶಿಕ್ಷಣವನ್ನು ಸಂವಿಧಾನದ-ಮಾನವ ಹಕ್ಕುಗಳ ಆದರ್ಶಗಳಾದ ಬಹುಸಂಸ್ಕೃತಿ, ಭ್ರಾತೃತ್ವ, ಸಮಾನತೆ ಮತ್ತು ಸಾಮಾಜಿಕನ್ಯಾಯ ಸಿದ್ಧಾಂತಗಳನ್ನು ಪುನರ್‌ಸ್ಥಾಪಿಸುವಬೇಕು. ಇದರೊಂದಿಗೆ ನೂತನ ವ್ಯವಸ್ಥೆಯನ್ನು ಜಾರಿಗೊಳಸುವ ಪ್ರಕ್ರಿಯೆಗೆ ಸೂಕ್ತ ಆದೇಶ ಹೊರಡಿಸಿಬೇಕು. ರಾಜ್ಯದ ಶೈಕ್ಷಣಿಕ ಹಾಗೂ ಸಾಮಾಜಿಕ ಹಿತದೃಷ್ಟಿಯನ್ನು ಕಾಪಾಡಲು ಉನ್ನತ ಮಟ್ಟದ ತಜ್ಞರ ಶಿಕ್ಷಣ ಆಯೋಗವನ್ನು ರಚಿಸುವಬೇಕು. ಇದಕ್ಕಾಗಿ ಸೂಕ್ತ ಕ್ರಮಗಳನ್ನು ಜರುಗಿಸಿ ಎಂದು ಬಿ.ಕೆ. ಹರಿಪ್ರಸಾದ್‌ ಕೋರಿದ್ದಾರೆ.

ಇದನ್ನೂ ಓದಿ : Textbook Revision : ಪಠ್ಯ ಪರಿಷ್ಕರಣೆ ಬಗ್ಗೆ ಬೊಮ್ಮಾಯಿ, ಸುನೀಲ್ ಕುಮಾರ್, ತೇಜಸ್ವಿ ಸೂರ್ಯ ಕಿಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.