ETV Bharat / state

500 ಕೋಟಿ ಟೆಂಡರ್‌ ಅನ್ನು 1000 ಕೋಟಿಗೆ ಮಾಡಿಸಲಾಗ್ತಿದೆ: ಸರ್ಕಾರದ ವಿರುದ್ಧ ಡಿಕೆಶಿ ಆರೋಪ - ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ

ಮಂತ್ರಿಗಿರಿ ತಪ್ಪಿದವರಿಗೆ ಸಾವಿರಾರು ಕೋಟಿ ರೂ. ಟೆಂಡರ್ ನೀಡಲಾಗುತ್ತಿದೆ- ನಾವು ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮವಾಗಿ ನೀಡಿರುವ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ- ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್

DK Shivakumar
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸುದ್ದಿಗೋಷ್ಟಿ
author img

By

Published : Feb 15, 2023, 2:28 PM IST

Updated : Feb 15, 2023, 10:32 PM IST

ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬರೀ ವಸೂಲಿ ವಸೂಲಿ ವಸೂಲಿ ಬಾಜಿ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ. ಸದಾಶಿವ ನಗರದ ತಮ್ಮ ನಿವಾಸದಲ್ಲಿ ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಜತೆ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಅವರು ಮಾತನಾಡಿದರು.

ಮಂತ್ರಿ ಮಾಡದೇ ಇರುವವರಿಗೆ 2-3 ಸಾವಿರ ಕೋಟಿ ಕೆಲಸ ಅಂತಾ ಹಂಚಿಕೆ ಮಾಡುತ್ತಿದ್ದಾರೆ. ನಮಗೆ ಅದೇ ಶಾಸಕರು ಮಾಹಿತಿ ನೀಡುತ್ತಿದ್ದಾರೆ. ಸಾವಿರಾರು ಕೋಟಿ ಹಳೆ ಕೆಲಸದ ಬಿಲ್ ಉಳಿದುಕೊಂಡಿದೆ. ಮುಂಚಿತವಾಗಿ ಹಣ ತಲುಪಿಸುತ್ತಾರೆ. ಅವರಿಗೆ ಕೆಲಸ ಹಂಚಿಕೆಯಾಗುತ್ತಿದೆ. ಯಾವುದೂ ಪಾರದರ್ಶಕವಾಗಿ ಟೆಂಡರ್ ಆಗ್ತಾ ಇಲ್ಲ. ಬಿಡಿಎ ಕಾರಂತ ಬಡಾವಣೆ ಇನ್ನೂ ಹಂಚಿಕೆ ಆಗಿಲ್ಲ. ಅಲ್ಲಿ 3 ಸಾವಿರ ಕೋಟಿ ಟೆಂಡರ್ ಕರೆದಿದ್ದಾರೆ ಎಂದು ದೂರಿದರು.

  • ನೀತಿ ಸಂಹಿತೆ ಜಾರಿಯಾಗಲಿರುವ ಹಿನ್ನೆಲೆಯಲ್ಲಿ ಭ್ರಷ್ಟ BJP ಸರ್ಕಾರವು ಚುನಾವಣೆಗೆ ಹಣ ಹೊಂದಿಸಲು ಬೀದಿಯಲ್ಲಿ ನಿಂತು ಕಾಂಟ್ರಾಕ್ಟರ್‌ಗಳಿಂದ ಕಮಿಷನ್‌ ವಸೂಲಿ ಮಾಡುತ್ತಿದೆ. ಅವರ ಮನೆಬಾಗಿಲಿಗೆ ಹೋಗಿ ಟೆಂಡರ್‌ ನೀಡುತ್ತಿದೆ. ನೀರಾವರಿ, ಆರೋಗ್ಯ ಸೇರಿದಂತೆ ಹಲವು ಇಲಾಖೆಯಲ್ಲಿನ ₹500 ಕೋಟಿ ಟೆಂಡರ್‌ ಅನ್ನು ₹1000 ಕೋಟಿಗೆ ಮಾಡಿಸಿದೆ.
    1/2 pic.twitter.com/ouxqy6far1

    — DK Shivakumar (@DKShivakumar) February 15, 2023 " class="align-text-top noRightClick twitterSection" data=" ">

ಸರ್ಕಾರ ಇನ್ನು ಒಂದು ತಿಂಗಳು ಮಾತ್ರ ಇರುತ್ತದೆ. ಬಜೆಟ್ ಅಧಿವೇಶನ ಮುಗಿದ ಮೇಲೆ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಎಲ್ಲ ಇಲಾಖೆಗಳಲ್ಲಿ ತರಾತುರಿಯಲ್ಲಿವೆ. ಜಲಸಂಪನ್ಮೂಲ, ಇಂಧನ, ಆರೋಗ್ಯ ಸೇರಿ ಎಲ್ಲ ಇಲಾಖೆಗಳಲ್ಲಿ ಟೆಂಡರ್ ರೆಡಿ ಮಾಡ್ತಾ ಇದ್ದಾರೆ. 500 ಕೋಟಿ ಟೆಂಡರ್ ಇದ್ರೆ ಅದನ್ನು 1000 ಕೋಟಿ ರೂ. ಎಸ್ಟಿಮೇಟ್ ಮಾಡ್ತಾ ಇದ್ದಾರೆ. ಲೋಕೋಪಯೋಗಿ ಇಲಾಖೆಯಲ್ಲೂ ಕೂಡ ಎಸ್ಡಿಮೇಟ್ ಅನ್ನು 100% ಗಿಂತ ಜಾಸ್ತಿ ಮಾಡ್ತಾ ಇದ್ದಾರೆ. ಏಳು ದಿನ ಮಾತ್ರ ಟೈಂ ಕೊಟ್ಟು ಶಾಸಕರಿಗೆ ಹಂಚಿ ಬಿಟ್ಟಿದ್ದಾರೆ. ಗುತ್ತಿಗೆದಾರರನ್ನು ಸೆಟ್ ಮಾಡಬೇಕು ಅಂತ ಶಾಸಕರಿಗೆ ಹಂಚಿಬಿಟ್ಟಿದ್ದಾರೆ. ಬೀದಿಯಲ್ಲಿ ನಿಂತು ಅವರು ಕರೆತಿದ್ದಾರೆ ಬನ್ನಿ ಬನ್ನಿ ಅಂತ ಎಂದು ಹೇಳಿದರು.

ಭ್ರಷ್ಟಾಚಾರದ ಕೂಪ: ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದ ಕೂಪ ಆಗಿದೆ. ಎಲ್ಲ ಇಲಾಖೆಗಳಲ್ಲೂ ದುಡ್ಡು ಲೂಟಿ ಹೊಡೆಯೋದಕ್ಕೆ ಮುಂದಾಗಿದ್ದಾರೆ. ಆಡಳಿತದಲ್ಲಿ ಎಲ್ಲ ನಾಯಕರನ್ನೂ ಸುಮ್ಮನೆ ಬಿಡೋದಿಲ್ಲ. ಕರ್ನಾಟಕಕ್ಕೆ ಭ್ರಷ್ಟಾಚಾರದ ರಾಜಧಾನಿ ಎಂಬ ಹೆಸರು ಬಂದಿದೆ. ನಾವು ಇದನ್ನು ಸುಮ್ನೆ ಬಿಡುವುದಿಲ್ಲ. ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಗುತ್ತಿಗೆದಾರರ ಅಧಿಕಾರಿಗಳಿಗೆ ವಾರ್ನ್ ಮಾಡ್ತಾ ಇದ್ದೇವೆ. ನಾವು ಅಧಿಕಾರಕ್ಕೆ ಬಂದ ಕೂಡಲೇ ಭ್ರಷ್ಟ ಬಿಜೆಪಿ ಸರ್ಕಾರ ಅಕ್ರಮವಾಗಿ ನೀಡಿರುವ ಎಲ್ಲ ಟೆಂಡರ್‌ಗಳನ್ನು ರದ್ದು ಮಾಡುತ್ತೇವೆ. ಅಧಿಕಾರಿಗಳನ್ನು, ಗುತ್ತಿಗೆದಾರರನ್ನು ಹಾಗೂ ರಾಜಕಾರಣಿಗಳನ್ನೂ ಕೂಡ ಬಿಡಲ್ಲ ಎಂದು ಕಿಡಿ ಕಾರಿದರು.

40% ಕಮಿಷನ್ ಮುಂದುವರೆದ ಭಾಗ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಯಾರಿಗೆ ಅಸಮಾಧಾನ ಇದೆ. ಯಾರನ್ನ ಮಂತ್ರಿ ಮಾಡಿಲ್ಲ ಅವರಿಗೆ ಹಣ ಮಾಡಲು. ಪ್ರಾಜೆಕ್ಟ್​​ಗಳನ್ನು ಅಪ್ರೂವಲ್ ಮಾಡಿಕೊಳ್ಳುತ್ತಿದ್ದಾರೆ. ಕಮಿಷನ್ ಹೊಡೆಯಲು ಮುಂದಾಗಿದ್ದಾರೆ. 40% ಕಮಿಷನ್ ಮುಂದುವರೆದ ಭಾಗ ಇದು. ಜನರ ತೆರಿಗೆ ಹಣ, ಜನರ ಬೆವರಿನ ಹಣ. ಅದನ್ನ ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ. ಟೆಂಡರ್ ಹಣ ಹೆಚ್ಚು ಮಾಡಿದ್ದಾರೆ‌. ಹೆಚ್ಚು ಕಮಿಷನ್ ಕೊಟ್ಟವರಿಗೆ, ಅವರಿಗೆ ಬೇಕಾದವರಿಗೆ ಟೆಂಡರ್ ಕೊಟ್ಟು ಕಮಿಷನ್ ವಸೂಲಿ ಮಾಡುತ್ತಿದ್ದಾರೆ. ಪೆಡಿಂಗ್ ಬಿಲ್ಸ್ ಗ್ರಾಮೀಣಾಭಿವೃದ್ಧಿ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಯಲ್ಲಿ‌ ನಡೆಯುತ್ತಿದೆ. ಸಿಎಂ ಕಚೇರಿಯಿಂದಲೇ ಕಮಿಷನ್ ಪ್ರಾರಂಭ ಆಗಿದೆ ಎಂದು ಆರೋಪಿಸಿದರು.

'ಕೋರ್ಟ್‌ ಮೊರೆ ಹೋಗುತ್ತೇವೆ': ರಾಜ್ಯದ ಬೊಕ್ಕಸವನ್ನು ಸರ್ಕಾರ ಯದ್ವಾ ತದ್ವ ಲೂಟಿ ಮಾಡುತ್ತಿದೆ. ಚುನಾವಣೆಗೆ ದುಡ್ಡು ಮಾಡಲು, ಅಸಮಾಧಾನ ತಣಿಸಲು ಈ ಕೆಲಸ. ತರಾತುರಿಯಲ್ಲಿ ಎಲ್ಲ ನಿಗಮಗಳಲ್ಲಿ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ. ನಾವು ಇದನ್ನು ಸುಮ್ಮನೆ ‌ಬಿಡಲ್ಲ, ಕೋರ್ಟ್ ಮೊರೆ ಹೋಗುತ್ತೇವೆ. ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುತ್ತೇವೆ. ಅಧಿಕಾರಕ್ಕೆ ಬಂದ ಮೇಲೆ ತನಿಖೆ ಮಾಡಿಸಿ ಭ್ರಷ್ಟಾಚಾರ ಬಯಲಿಗೆಳೆಯುವ ಕೆಲಸ ಮಾಡುತ್ತೇವೆ. ಭ್ರಷ್ಟಾಚಾರದ ಆರೋಪ, ಸ್ವಜನ ಪಕ್ಷಪಾತ ಮಾಡಿದವರ ಮೇಲೆ ತನಿಖೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

ತನಿಖಾ ಸಮಿತಿ ರಚನೆ ಮಾಡಿ ಯಾರು ಯಾರ ಮೇಲೆ ಆರೋಪ ಇದೆ ಅವೆಲ್ಲವನ್ನೂ ಬಯಲಿಗೆ ಎಳೆಯುತ್ತೇವೆ. ಗೂಳಿಹಟ್ಟಿ ಶೇಖರ್ ಪತ್ರ ಬರೆದಿದ್ದಾರೆ. ಒಂದೇ ದಿನ 18 ಸಾವಿರ ಕೋಟಿ ಟೆಂಡರ್ ಆಗಿದೆ ಅಂತಾ ಬಿಜೆಪಿ ಎ‌ಂಎಲ್ಎ ಪತ್ರ ಬರೆದಿದ್ದಾರೆ. ಇದು ಅವ್ಯಾಹತವಾಗಿ ನಡೆದುಕೊಂಡು ಬರುತ್ತಿದೆ. ಎಲೆಕ್ಷನ್ ಫಂಡ್ ರೇಸ್ ಮಾಡುವುದಕ್ಕೆ ಹೀಗೆ ಮಾಡುತ್ತಿದ್ದಾರೆ. ಬಹಿರಂಗವಾಗಿ 6 ಸಾವಿರ ಕೋಟಿ ಕೊಡ್ತೀವಿ ಅಂತಾ ಹೇಳ್ತಾರೆ. ಇಷ್ಟು ಮಟ್ಟಿಗೆ ರಾಜ್ಯವನ್ನು ಹಾಳು ಮಾಡುವುದಕ್ಕೆ ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ಇದನ್ನೂ ಓದಿ: ನಮ್ಮನ್ನು ಜೈಲಿಗೆ ಕಳುಹಿಸುವುದರಲಿ, ಕಾಂಗ್ರೆಸ್ಸಿಗರು ಜೈಲಿಗೆ ಹೋಗುವುದರಿಂದ ಮೊದಲು ತಪ್ಪಿಸಿಕೊಳ್ಳಲಿ: ಸಿಎಂ

Last Updated : Feb 15, 2023, 10:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.