ಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ 10 ಮಂದಿಗೆ ಒಮಿಕ್ರಾನ್ ದೃಢಪಟ್ಟಿದೆ. ವಿದೇಶದಿಂದ ಬಂದ 5 ಮಂದಿಗೆ ಹಾಗೂ ಯಾವುದೇ ಸಂಪರ್ಕ ಇಲ್ಲದೇ ಇದ್ದರೂ ಕೆಲವರಿಗೆ ಪಾಸಿಟಿವ್ ಕಂಡುಬಂದಿದ್ದು, ರಾಜ್ಯದಲ್ಲೀಗ ಒಟ್ಟಾರೆ ಸೋಂಕಿತರ ಸಂಖ್ಯೆ 76ಕ್ಕೆ ಏರಿಕೆ ಆಗಿದೆ.
-
Ten new cases of Omicron have been confirmed in Karnataka on Jan 2nd taking the tally to 76:
— Dr Sudhakar K (@mla_sudhakar) January 3, 2022 " class="align-text-top noRightClick twitterSection" data="
🔹 Bengaluru: 8 cases (of which 5 are international travellers)
🔹Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviya
">Ten new cases of Omicron have been confirmed in Karnataka on Jan 2nd taking the tally to 76:
— Dr Sudhakar K (@mla_sudhakar) January 3, 2022
🔹 Bengaluru: 8 cases (of which 5 are international travellers)
🔹Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviyaTen new cases of Omicron have been confirmed in Karnataka on Jan 2nd taking the tally to 76:
— Dr Sudhakar K (@mla_sudhakar) January 3, 2022
🔹 Bengaluru: 8 cases (of which 5 are international travellers)
🔹Dharwad: 2 cases#OmicronInIndia #Omicronindia #COVID19 #Karnataka @BSBommai @mansukhmandviya
ಈ ಕುರಿತು ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಸುಧಾಕರ್, ಬೆಂಗಳೂರಿನ 8 ಮಂದಿ (ಐವರು ಅಂತಾರಾಷ್ಟ್ರೀಯ ಪ್ರಯಾಣಿಕರು) ಹಾಗೂ ಧಾರವಾಡದ ಇಬ್ಬರಿಗೆ ಒಮಿಕ್ರಾನ್ ಸೋಂಕು ದೃಢಪಟ್ಟಿರುವುದಾಗಿ ತಿಳಿಸಿದ್ದಾರೆ.
ಅಮೆರಿಕದಿಂದ ಬಂದಿದ್ದ 19 ವರ್ಷದ ಯುವಕ, ಬೆಲ್ಜಿಯಂನಿಂದ ಬಂದಿದ್ದ 40 ವರ್ಷದ ಮಹಿಳೆ, ದುಬೈಯಿಂದ ಬಂದಿದ್ದ ಕೆನಡಾದ 46 ವರ್ಷದ ವ್ಯಕ್ತಿ, ದುಬೈನಿಂದ ಬಂದಿದ್ದ 49 ವರ್ಷದ ಇಬ್ಬರು ಮಹಿಳೆಯರಿಗೂ ಒಮಿಕ್ರಾನ್ ತಗುಲಿದೆ.
ಅಲ್ಲದೆ, 67ನೇ ಸೋಂಕಿತನ ಪ್ರಾಥಮಿಕ ಸಂಪರ್ಕ ಹೊಂದಿದ್ದ ಬೆಂಗಳೂರಿನ 13 ವರ್ಷದ ಬಾಲಕಿಗೂ ಒಮಿಕ್ರಾನ್ ತಗುಲಿದೆ. ಅಲ್ಲದೆ ಮುಂಬೈನಿಂದ ಬಂದಿದ್ದ 42 ವರ್ಷದ ಹಾಗೂ ಹಾಗೂ 65 ವರ್ಷದ ಮಹಿಳೆಯರಿಗೂ ರೂಪಾಂತರಿ ದೃಢಪಟ್ಟಿದೆ.
ಧಾರವಾಡದ ಇಬ್ಬರಿಗೆ ಒಮಿಕ್ರಾನ್:
ಟ್ರಾವೆಲ್ ಹಿಸ್ಟರಿ ಇಲ್ಲದ ಧಾರವಾಡದ 14 ವರ್ಷದ ಬಾಲಕಿಗೆ ಒಮಿಕ್ರಾನ್ ಪಾಸಿಟಿವ್ ಬಂದಿದೆ. ಬಾಲಕಿಯು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿದ್ದಳು. ಹಾಗೆಯೇ 53 ವರ್ಷದ ಮಹಿಳೆಗೂ ರೂಪಾಂತರಿ ಕಂಡುಬಂದಿದ್ದು, ಇವರೂ ಕೂಡ ಕೋವಿಡ್ ಸೋಂಕಿತರ ಸಂಪರ್ಕದಲ್ಲಿದ್ದಿರುವುದು ಗೊತ್ತಾಗಿದೆ.
ಸೋಂಕಿತ ಯುವಕ ನಾಪತ್ತೆ:
ಬೆಂಗಳೂರಿನ ಯುವಕನೊಬ್ಬನಿಗೂ ಒಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ. ಆದರೆ, ಆತ ಆರೋಗ್ಯ ಇಲಾಖೆಯ ಸಂಪರ್ಕಕ್ಕೆ ಸಿಕ್ಕಿಲ್ಲ. ಸದ್ಯ ಪೊಲೀಸರು ಹುಡುಕಾಟದಲ್ಲಿ ತೊಡಗಿದ್ದಾರೆ. ಈತ ರಾಜ್ಯದಲ್ಲಿ ಪತ್ತೆಯಾದ 77ನೇ ಸೋಂಕಿತನಾಗಲಿದ್ದಾನೆ.
ಇದನ್ನೂ ಓದಿ: ಇಂದಿನಿಂದ 15-18 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಲಸಿಕೆ ಪ್ರಾರಂಭ