ETV Bharat / state

ನಾಯಕತ್ವ ಅದಲು-ಬದಲು ಗೊಂದಲಕ್ಕೆ ಅಲ್ಪವಿರಾಮ... ದೆಹಲಿಯಲ್ಲೇ ಕ್ಲೈಮ್ಯಾಕ್ಸ್!?

author img

By

Published : Jun 20, 2021, 3:19 AM IST

ರಾಜ್ಯದಲ್ಲಿ ನಾಯಕತ್ವ ಅದಲು-ಬದಲು ಗೊಂದಲಕ್ಕೆ ಅಲ್ಪವಿರಾಮ ಬಿದ್ದಿದ್ದು, ಮುಂದೆ ಇದರ ಕ್ಲೈಮ್ಯಾಕ್ಸ್​ ದೆಹಲಿ ಅಂಗಳದಲ್ಲಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ.

Karnataka CM Changing issue, Temporary stop of Karnataka CM Changing issue, Karnataka state BJP in charge Arun singh, Arun singh news, ನಾಯಕತ್ವ ಅದಲು-ಬದಲು ಗೊಂದಲಕ್ಕೆ ಅಲ್ಪವಿರಾಮ, ನಾಯಕತ್ವ ಅದಲು-ಬದಲು ಗೊಂದಲಕ್ಕೆ ಅಲ್ಪವಿರಾಮ ಸು್ದಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸುದ್ದಿ,
ನಾಯಕತ್ವ ಅದಲು-ಬದಲು ಗೊಂದಲಕ್ಕೆ ಅಲ್ಪವಿರಾಮ

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಬಿಸಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ರಾಜ್ಯ ಭೇಟಿ ಬಳಿಕ ಸದ್ಯ ತಣ್ಣಗಾದಂತೆ ಕಾಣುತ್ತಿದೆ. ನಾಯಕತ್ವ ಬದಲಾವಣೆಯ ಟೆನ್ಷನ್‌ನಲ್ಲಿದ್ದ ಸಿಎಂ ಯಡಿಯೂರಪ್ಪ ಉಸ್ತುವಾರಿ ಭೇಟಿ ಬಳಿಕ ಸ್ವಲ್ಪ ನಿರಾಳರಾಗಿದ್ದಂತೆ ಕಂಡು ಬಂದರೂ, ಈಗಲೂ ನಾಯಕತ್ವದ ಗೊಂದಲ ಮುಂದುವರಿದಿದೆ.

ಹೈ ಕಮಾಂಡ್ ರಾಜ್ಯದಲ್ಲಿ ಪದೇ ಪದೆ ಕೇಳಿ ಬರುತ್ತಿದ್ದ ನಾಯಕತ್ವ ಬದಲಾವಣೆ ಕೂಗು, ಪಕ್ಷದೊಳಗಿನ ಬೇಗುದಿ ಏನೆಂಬುದನ್ನು ಅರಿಯಲು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮೂರು ದಿನಗಳ ರಾಜ್ಯ ಪ್ರವಾಸ ನಡೆಸಿದ್ದಾರೆ ಎನ್ನಲಾಗಿದೆ. ಮೇಲ್ನೋಟಕ್ಕೆ ಉಸ್ತುವಾರಿ ಅರುಣ್ ಸಿಂಗ್ ನಾಯಕತ್ವ ಬದಲಾವಣೆ ಗೊಂದಲಕ್ಕೆ ತೆರೆ ಎಳೆಯಲು ರಾಜ್ಯಕ್ಕೆ ಮೂರು ದಿನಗಳ ಭೇಟಿ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಸಿಗುತ್ತಿಲ್ಲ.

ಒಬ್ಬ ಉಸ್ತುವಾರಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆ, ಪಕ್ಷ ಸಂಘಟನೆ ಬಗ್ಗೆ ಸಲಹೆ ಸೂಚನೆಗಳನ್ನು ಕೊಟ್ಟು ವಾಪಸ್ಸಾಗಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಅವರ ಮೂರು ದಿನ ಭೇಟಿಯಿಂದ ಕೆಲ ಅತೃಪ್ತರು, ಬಂಡಾಯ ನಾಯಕರು, ಸಚಿವರುಗಳ ಜೊತೆ ಸಭೆ ನಡೆಸಿ ನಾಯಕತ್ವ ವಿಚಾರವಾಗಿ ಎದ್ದಿದ್ದ ಅಸಮಾಧಾನ, ಗೊಂದಲಕ್ಕೆ ಸದ್ಯ ತೆರೆ ಎಳೆದಂತೆ ಕಾಣುತ್ತಿದೆ.

ನಾಯಕತ್ವ ಬದಲಾವಣೆಯ ಬಂಡಾಯದ ಕೂಗಿಗೆ ಹೈ ಕಮಾಂಡ್ ಅಲ್ಪ ವಿರಾಮ ಹಾಕಿದೆಯಾ ಅಥವಾ ಪೂರ್ಣ ವಿರಾಮ ಹಾಕಿದೆಯಾ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ. ಸದ್ಯಕ್ಕಂತೂ ಬಂಡಾಯ ಕಹಳೆ ಊದಿದವರಿಗೆ ಹೈ ಕಮಾಂಡ್ ಒಂದು ಸಂದೇಶವನ್ನು ರವಾನೆ ಮಾಡಿದೆ.‌ ನಾಯಕತ್ವ ಬದಲಾವಣೆ ಸದ್ಯಕ್ಕಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಕೊಟ್ಟು ಹೋಗಿದೆ‌‌. ಆದರೆ ಅರುಣ್ ಸಿಂಗ್ ರಾಜ್ಯ ಪ್ರವಾಸ ಬಂಡಾಯ ಬಣದ ಜೊತೆಗೆ ಸಿಎಂ ಯಡಿಯೂರಪ್ಪಗೂ ಪರೋಕ್ಷವಾಗಿ ಸಂದೇಶ ರವಾನಿಸಲಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ನಾಯಕತ್ವ ಅದಲು-ಬದಲುಗೆ ಅಲ್ಪವಿರಾಮವಷ್ಟೇ: ರಾಜ್ಯ ಉಸ್ತುವಾರಿಯಾಗಿ ಪಕ್ಷದ ಆಂತರಿಕ ಕಲಹಕ್ಕೆ ಅರುಣ್ ಸಿಂಗ್ ಅಲ್ಪ ವಿರಾಮ ಹಾಕುವಲ್ಲಿ ಸಫಲವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದಂತಿರುವ ನಾಯಕತ್ವದ ಕಿಚ್ಚು ಮುಂದಿನ ದಿನಗಳಲ್ಲಿ ಮತ್ತೆ ಸದ್ದು ಮಾಡುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ ಅಂದುಕೊಂಡೇ ಅರುಣ್ ಸಿಂಗ್ ಒಬ್ಬೊಬ್ಬರಾಗಿ ಶಾಸಕರನ್ನು ಕರೆಸಿ ಅಭಿಪ್ರಾಯ ಸಂಗ್ರಹಿಸುವ ಕೆಲಸ ಮಾಡಿದ್ದಾರೆ.‌ ಆ ಮೂಲಕ ಶಾಸಕರ ಮನಸ್ಥಿತಿ, ನಾಯಕತ್ವದ ಬಗ್ಗೆ ಅವರ ಅಭಿಪ್ರಾಯ, ಸಿಎಂ ಕಾರ್ಯವೈಖರಿ ಬಗೆಗಿನ ನಿಲುವು, ಸಿಎಂ ಪುತ್ರ ಹಸ್ತಕ್ಷೇಪ ಕುರಿತಾದ ಒಂದು ಚಿತ್ರಣವನ್ನು ಅವಲೋಕಿಸಿದ್ದಾರೆ ಎನ್ನಲಾಗಿದೆ. ಪಕ್ಷದಲ್ಲಿ ನಡೆಯುತ್ತಿರುವ ರಾಜಕೀಯ ಮೇಲಾಟದಿಂದ ಪಕ್ಷಕ್ಕೆ ಆಗುತ್ತಿರುವ ನಷ್ಟದ ಬಗ್ಗೆನೂ ಪರಾಮರ್ಶೆ ನಡೆಸಿದ್ದಾರೆ.

ಏನೇ ಅಸಮಾಧಾನ, ಅತೃಪ್ತಿ ಇದ್ದರೂ ಅದನ್ನು ಬಹಿರಂಗವಾಗಿ ವ್ಯಕ್ತಪಡಿಸದಿರುವಂತೆ ಎಲ್ಲಾ ಶಾಸಕರಿಗೆ, ಸಚಿವರಿಗೆ ಅರುಣ್ ಸಿಂಗ್ ಸೂಚನೆ ನೀಡಿದ್ದಾರೆ. ಅದರ ಜೊತೆಗೆ ನಾಯಕತ್ವ ಬದಲಾವಣೆ ಸಂಬಂಧ ಬಹಿರಂಗ ಚರ್ಚೆ ಬೇಡ ಅನ್ನೋ ಸಂದೇಶವನ್ನೂ ನೀಡಿದ್ದಾರೆ. ಹೀಗಾಗಿ ಸದ್ಯ ನಾಯಕತ್ವ ಬದಲಾವಣೆ ಬಗ್ಗೆ ಬಹಿರಂಗ ಹೇಳಿಕೆಗಳು, ಚರ್ಚೆಗಳು ಬೇಡ. ಎಲ್ಲವನ್ನೂ ಹೈ ಕಮಾಂಡ್ ನೋಡುತ್ತೆ ಎಂಬ ಸಂದೇಶವನ್ನು ನೀಡಿ, ನಾಯಕತ್ವದ ಬದಲಾವಣೆಗೆ ಹೈಕಮಾಂಡ ಅಲ್ಪವಿರಾಮ ಹಾಕಿದೆ ಎಂದು ರಾಜಕೀಯ ವಿಶ್ಲೇಷಕರು ವ್ಯಾಖ್ಯಾನಿಸಿದ್ದಾರೆ.

ಅತೃಪ್ತರಿಗೂ, ಸಿಎಂಗೂ ಸಂದೇಶ: ಅರುಣ್ ಸಿಂಗ್ ಎಂಟ್ರಿಯಿಂದ ಒಂದೇ ಕಲ್ಲಿನಿಂದ ಎರಡು ಹಕ್ಕಿಯನ್ನು ಉರುಳಿಸುವ ಕೆಲಸವನ್ನು ಹೈ ಕಮಾಂಡ್ ಮಾಡಿದೆ ಎಂಬ ವ್ಯಾಖ್ಯಾನವೂ ಕೇಳಿ ಬರುತ್ತಿದೆ.

ಒಂದೆಡೆ ಹೈ ಕಮಾಂಡ್ ರೆಬೆಲ್ ನಾಯಕರಿಗೆ ಒಂದು ಸಂದೇಶವನ್ನು ರವಾನಿಸಿದರೆ, ಇನ್ನೊಂದೆಡೆ ಸಿಎಂಗೂ ಪರೋಕ್ಷವಾಗಿ ಸಂದೇಶ ರವಾನಿಸಿದೆ. ಶಾಸಕರಿಂದ ಅಭಿಪ್ರಾಯ ಕಲೆ ಹಾಕುವ ಮೂಲಕ ಹೈ ಕಮಾಂಡ್ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆ, ಶಾಸಕರ ಸಮಸ್ಯೆ, ಅಹವಾಲಿಗೂ ಕಿವಿ ಗೊಡುತ್ತೆ ಎಂಬ ಸಂದೇಶವನ್ನು ನೀಡಿದೆ.

ಹೀಗಾಗಿ ಪಕ್ಷದ ಸಿದ್ಧಾಂತಕ್ಕನುಗುಣವಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದು, ತಾರತಮ್ಯ ಮಾಡದೇ, ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳದೇ ಆಡಳಿತ ನಡೆಸಬೇಕು ಎಂಬ ಪರೋಕ್ಷ ಸಂದೇಶವನ್ನೂ ನೀಡಿದೆ ಎಂದೂ ರಾಜಕೀಯ ವಿಶ್ಲೇಷಕರು ವಿಶ್ಲೇಷಣೆ ಮಾಡಿದ್ದಾರೆ.

ದೆಹಲಿಗೆ ರಾಜ್ಯ ಅದಲು ಬದಲು ಆಟ ಶಿಫ್ಟ್?: ಅರುಣ್ ಸಿಂಗ್ ರಾಜ್ಯ ಭೇಟಿ ಮಾಡಿ ನಾಯಕತ್ವ ಬದಲಾವಣೆ ಗೊಂದಲಕ್ಕೆ ಪೂರ್ಣ ವಿರಾಮ ಹಾಕಲು ಸಾಧ್ಯವಾಗಿಲ್ಲ. ಸಚಿವರು, ಶಾಸಕರ ಅಭಿಪ್ರಾಯ ಪಡೆದು, ಒಂದು ವರದಿಯನ್ನು ಸಿದ್ಧಪಡಿಸಿದ್ದಾರಷ್ಟೇ. ಆ ವರದಿಯನ್ನು ಅರುಣ್ ಸಿಂಗ್ ಹೈ ಕಮಾಂಡ್​ಗೆ ನೀಡಲಿದ್ದಾರೆ ಎನ್ನಲಾಗಿದೆ.

ಹೀಗಾಗಿ ನಾಯಕತ್ವ ಬದಲಾವಣೆ ಚೆಂಡು ಮತ್ತೆ ದೆಹಲಿ ಅಂಗಳಕ್ಕೆ ಶಿಫ್ಟ್ ಆಗಿದೆ. ಅರುಣ್ ಸಿಂಗ್ ಸಂಗ್ರಹಿಸಿದ ರಾಜ್ಯದ ವಿದ್ಯಾಮಾನಗಳನ್ನು ಬಿಜೆಪಿ ಹೈ ಕಮಾಂಡ್ ಗಮನಕ್ಕೆ ತರಲಿದ್ದಾರೆ. ಅದರ ಆಧಾರದಲ್ಲಿ ಹೈ ಕಮಾಂಡ್ ಒಂದು ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಮಾತುಗಳು ರಾಜಕೀಯ ದುರೀಣರಿಂದ ಕೇಳಿ ಬರುತ್ತಿದೆ.

ಸಿಎಂ ಯಡಿಯೂರಪ್ಪ ಆಡಳಿತ ಕಾರ್ಯವೈಖರಿ, ಸಿಎಂ ಕುಟುಂಬದ ಹಸ್ತಕ್ಷೇಪ, ಏಕಪಕ್ಷೀಯ ನಿರ್ಧಾರ, ಭ್ರಷ್ಟಾಚಾರ ಸಂಬಂಧ ಕೇಳಿ ಬಂದ ಆರೋಪ, ಪಕ್ಷ ಸಂಘಟನೆ, ಮುಂಬರುವ ಚುನಾವಣೆಗಳ ಮೇಲೆ ಪರಿಣಾಮಗಳೆಲ್ಲವನ್ನೂ ಹೈ ಕಮಾಂಡ್ ಪರಾಮರ್ಶಿಸಿ ಸೂಕ್ತ ಸಮಯದಲ್ಲಿ ಮುಂದಿನ ಹೆಜ್ಜೆ ಇಡಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ನಾಯಕತ್ವ ಅದಲು-ಬದಲಿನ ಆಟ ಮುಂದಿನ ದಿನಗಳಲ್ಲಿ ದೆಹಲಿ ಅಂಗಳದಲ್ಲೇ ಕ್ಲೈಮಾಕ್ಸ್ ಕಾಣಲಿದೆ ಎಂದು ಹೇಳಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.