ETV Bharat / state

ಸೂರ್ಯಗ್ರಹಣ ಸಂದರ್ಭ ದೇವಾಲಯಗಳು ಬಂದ್​.. ದೀಪಾವಳಿಯಾದರೂ ಭಕ್ತರಿಗೆ ಸಿಗಲ್ಲ ದೇಗುಲ ದರ್ಶನ ಭಾಗ್ಯ - Temples are close in banglore on suryagrahan

ದೀಪಾವಳಿ ಆಚರಣೆಯ ನಡುವೆಯೇ ಸೂರ್ಯಗ್ರಹಣ ಬಂದಿದ್ದು, ಬೆಂಗಳೂರು ನಗರದಲ್ಲಿ ವಿವಿಧ ದೇವಾಲಯಗಳು ಮುಚ್ಚಿರಲಿದ್ದು, ಭಕ್ತಾದಿಗಳಿಗೆ ದರ್ಶನಕ್ಕೆ ಅವಕಾಶವಿಲ್ಲ.

temples-are-close-in-banglore-on-suryagrahan
ಸೂರ್ಯಗ್ರಹಣ ಸಂದರ್ಭ ನಗರದ ದೇವಾಲಯಗಳು ಬಂದ್ :ದೀಪಾವಳಿಯಾದರೂ ದೇಗುಲ ದರ್ಶನ ಭಾಗ್ಯವಿಲ್ಲ
author img

By

Published : Oct 23, 2022, 5:53 PM IST

ಬೆಂಗಳೂರು: ದೀಪಾವಳಿ ಆಚರಣೆ ನಡುವೆಯೇ ಸೂರ್ಯಗ್ರಹಣ ಆಗಮಿಸಿರುವ ಹಿನ್ನೆಲೆ ಮಹಾನಗರದ ವಿವಿಧ ದೇವಾಲಯಗಳು ಮುಚ್ಚಿರಲಿದ್ದು, ಭಕ್ತರಿಗೆ ದೇಗುಲ ದರ್ಶನ ಭಾಗ್ಯ ಇಲ್ಲವಾಗಿದೆ.

ದೀಪಾವಳಿ ಆಚರಣೆಯ ಲಕ್ಷ್ಮಿ ಪೂಜೆ ದಿನ ಅಂದರೆ ಅಮಾವಾಸ್ಯೆಯಂದು ಸಂಜೆ ಖಗ್ರಾಸ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆ ಸೂರ್ಯಗ್ರಹಣ ಸಂಭವಿಸುವ ಸಂದರ್ಭ ದೇವಾಲಯಗಳನ್ನು ಮುಚ್ಚಲು ನಿರ್ಧರಿಸಲಾಗಿದೆ. ಅಕ್ಟೋಬರ್ 25ರ ಸಂಜೆ 4:22ಕ್ಕೆ ಸೂರ್ಯಗ್ರಹಣ ಪ್ರಾರಂಭವಾಗಲಿದ್ದು, ಸಂಜೆ 6.25ಕ್ಕೆ ಗ್ರಹಣ ಕೊನೆಗೊಳ್ಳುತ್ತದೆ. ಎರಡು ಗಂಟೆ ಮೂರು ನಿಮಿಷಗಳ ಕಾಲ ಗ್ರಹಣವಿರುತ್ತದೆ. ಗ್ರಹಣ ಕಳೆದ ಬಳಿಕ ದೇವಾಲಯವನ್ನು ಶುದ್ಧೀಕರಿಸಿ ಭಕ್ತರ ದರ್ಶನಕ್ಕೆ ಅವಕಾಶ ನೀಡುವ ಕಾರ್ಯಕ್ಕೆ ಕೆಲ ದೇವಾಲಯಗಳು ಮುಂದಾಗಿವೆ.

ಬೆಂಗಳೂರಿನ ವಿವಿಧ ದೇವಾಲಯಗಳು ಬಂದ್​ : ಬೆಂಗಳೂರಿನ ಪ್ರಮುಖ ದೇವಾಲಯಗಳಾದ ದೊಡ್ಡ ಬಸವನಗುಡಿ ದೇವಾಲಯ, ದೊಡ್ಡ ಗಣೇಶ ದೇವಾಲಯ, ಶಿವ ದೇವಾಲಯ, ಗವಿ ಗಂಗಾಧರೇಶ್ವರ ದೇವಾಲಯ, ಇಸ್ಕಾನ್ ದೇವಸ್ಥಾನ, ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ, ಬನಶಂಕರಿ ದೇವಾಲಯ, ಹಲಸೂರು ಸೋಮೇಶ್ವರ ದೇವಾಲಯ ಸೇರಿದಂತೆ ಪ್ರಮುಖ ದೇವಾಲಯಗಳು ಹಾಗೂ ಸಣ್ಣಪುಟ್ಟ ಮಂದಿರಗಳು ಗ್ರಹಣ ಸಂದರ್ಭದಲ್ಲಿ ಮುಚ್ಚಿರಲಿವೆ. ಗ್ರಹಣ ಕಳೆದ ಬಳಿಕ ದೇವಾಲಯ ಪ್ರವೇಶಕ್ಕೆ ಅವಕಾಶ ಇರಲಿದೆ.

ಕೋವಿಡ್ ಲಾಕ್ ಡೌನ್ ಹಿನ್ನೆಲೆ ಅದ್ದೂರಿಯಾಗಿ ದೀಪಾವಳಿ ಆಚರಣೆ ಮಾಡಲಾಗದ ಭಕ್ತಾದಿಗಳು ಈ ಸಾರಿ ದೀಪಾವಳಿಯನ್ನು ಉತ್ತಮ ರೀತಿಯಲ್ಲಿ ಆಚರಿಸಲು ನಿರ್ಧರಿಸಿದ್ದರು. ಸೋಮವಾರ ನರಕ ಚತುರ್ದಶಿ ಹಾಗೂ ಬುಧವಾರ ಬಲಿಪಾಡ್ಯಮೆ ಆಚರಣೆ ನಡುವೆ ಮಂಗಳವಾರ ಅಮಾವಾಸ್ಯೆ ಯಂದು ಲಕ್ಷ್ಮಿ ಪೂಜೆಯನ್ನು ಸಹ ಆಚರಿಸಲು ಸಿದ್ಧತೆ ಕೈಗೊಂಡಿದ್ದ ಭಕ್ತರಿಗೆ ಗ್ರಹಣ ಅಡ್ಡಿಯಾಗಿದೆ.

27ವರ್ಷದ ಬಳಿಕ ದೀಪಾವಳಿಯಂದೇ ಸೂರ್ಯಗ್ರಹಣ : ಪ್ರತಿ ವರ್ಷ ದೀಪಾವಳಿ ಅಮಾವಾಸ್ಯೆಯಂದು ಜನ ದೇವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದರು. ಆದರೆ ಈ ಬಾರಿ 27 ವರ್ಷಗಳ ಬಳಿಕ ದೀಪಾವಳಿ ಆಚರಣೆ ದಿನವೇ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಭಕ್ತಾದಿಗಳಿಗೆ ಸಾಕಷ್ಟು ನಿರಾಸೆ ಮೂಡಿಸಿದೆ. ಗ್ರಹಣ ಸಂದರ್ಭ ಬೆಂಗಳೂರಿನ ವಿವಿಧೆಡೆ ಇರುವ ಶನೇಶ್ವರ ದೇವಸ್ಥಾನಗಳು ಮಾತ್ರ ಭಕ್ತರ ದರ್ಶನಕ್ಕೆ ತೆರೆದಿರಲಿವೆ. ಎಲ್ಲರಿಗೂ ವಿವಿಧ ದೇವಾಲಯಗಳಲ್ಲಿ ಗ್ರಹಣದ ಸಂದರ್ಭ ಜಪ ತಪ ಹೋಮ ಹಾಗೂ ಅನುಷ್ಠಾನಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಹೆಚ್ಚಿನ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿಲ್ಲ.

ದೀಪಾವಳಿ ಹಬ್ಬದ ಎರಡು ಸರ್ಕಾರಿ ರಜಾ ದಿನಗಳ ಮಧ್ಯೆ ಸೂರ್ಯ ಗ್ರಹಣ ಆಗಮಿಸಿರುವ ಹಿನ್ನೆಲೆ ಸಾರ್ವಜನಿಕ ಸಂಚಾರ ವಿರಳವಾಗಿ ಇರಲಿದೆ. ಸಂಜೆ 4 ಗಂಟೆ ನಂತರ ಗ್ರಹಣ ಸಂಭವಿಸುವ ಹಿನ್ನೆಲೆ ಸೂರ್ಯಸ್ತದ ಮುಕ್ತಾಯ ವೀಕ್ಷಣೆಗೆ ಸಿಗುವುದಿಲ್ಲ. ಹೀಗಾಗಿ ಕೆಲ ದೇವಾಲಯಗಳು ರಾತ್ರಿ ದೇವಾಲಯವನ್ನು ಶುದ್ಧೀಕರಿಸಿ ಬಾಗಿಲು ತೆಗೆಯುವ ಬದಲು ಮಾರನೇ ದಿನವೇ ದೇವಾಲಯ ತೆರೆಯುವ ಚಿಂತನೆಯನ್ನು ಸಹ ನಡೆಸಿವೆ. ಒಟ್ಟಾರೆ ದೀಪಾವಳಿ ಆಚರಣೆ ಸಂದರ್ಭ ದೇವಾಲಯಕ್ಕೆ ತೆರಳಲು ಬಯಸುವ ಭಕ್ತಾದಿಗಳಿಗೆ ಮಂಗಳವಾರ ಗ್ರಹಣ ಆಗಮಿಸಿರುವುದು ಕೊಂಚ ನಿರಾಸೆ ಮೂಡಿಸಿದೆ. ಬೆಂಗಳೂರು ಮಹಾನಗರ ಮಾತ್ರವಲ್ಲದೆ ರಾಜ್ಯದ ವಿವಿಧ ದೇವಾಲಯಗಳನ್ನು ಸಹ ಗ್ರಹಣ ಸಂದರ್ಭ ಮುಚ್ಚಲು ದೇವಸ್ಥಾನ ಆಡಳಿತ ಮಂಡಳಿಯವರು ತೀರ್ಮಾನಿಸಿದ್ದಾರೆ.

ಸೂರ್ಯಗ್ರಹಣದಿಂದ ಯಾವುದೇ ಅಪಾಯವಿಲ್ಲ : ಗ್ರಹಣ ಸಂದರ್ಭ ದೇವರನ್ನು ಸ್ಮರಿಸಿ ದೀಪಾವಳಿ ಹಬ್ಬದ ಮಧ್ಯ ಬಂದಿರುವ ಗ್ರಹಣದ ಸಂದರ್ಭ ಜನ ಮನೆಯಲ್ಲೇ ಇದ್ದು ಜಪ ತಪಾದಿಗಳನ್ನು ಮಾಡುವುದು ಉತ್ತಮ. ಗ್ರಹಣ ಸಂದರ್ಭದಲ್ಲಿ ದೇವರ ಧ್ಯಾನ ಮಾಡುವುದರಿಂದ ಒಂದಿಷ್ಟು ಧನಾತ್ಮಕ ಶಕ್ತಿ ಮನಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಗ್ರಹಣ ಕಳೆದ ಬಳಿಕ ಸ್ನಾನ ಮಾಡಿ ದೇವರಿಗೆ ಎಣ್ಣೆ ದೀಪ ಹಚ್ಚುವುದರಿಂದ ಅನಿಷ್ಟಗಳು ದೂರವಾಗುತ್ತವೆ. ದೀಪಾವಳಿ ಅಮಾವಾಸ್ಯೆಯಂದು ಬಂದಿರುವ ಗ್ರಹಣದಿಂದ ಅಂತಹ ದೊಡ್ಡ ಅಪಾಯವೇನು ಎದುರಾಗುವುದಿಲ್ಲ. ಜನ ಈ ವಿಚಾರದಲ್ಲಿ ಹೆಚ್ಚಿನ ಆತಂಕ ಪಡುವ ಅಗತ್ಯ ಇಲ್ಲ. ಆದರೆ ಗ್ರಹಣ ಅಂದರೆ ಒಂದು ಆತಂಕ ಜನರಲ್ಲಿ ಸಹಜವಾಗಿ ಇರುತ್ತದೆ. ಈ ಸಾರಿಯ ಗ್ರಹಣದ ಬಗ್ಗೆ ಹೆಚ್ಚು ಚಿಂತೆ ಮಾಡದೆ ದೀಪಾವಳಿ ಆಚರಣೆಯತ್ತ ಹೆಚ್ಚು ಗಮನ ಕೊಡಿ ಎಂದು ಬೆಂಗಳೂರಿನ ಗಾಂಧಿನಗರದ ಜ್ಯೋತಿಷಿ ಸೂರ್ಯಪ್ರಕಾಶ್ ಶರ್ಮ ತಿಳಿಸಿದ್ದಾರೆ.

ಇದನ್ನೂ ಓದಿ : ದೀಪಾವಳಿ ಹಬ್ಬದಂದು ಸೂರ್ಯ ಗ್ರಹಣ: ಗ್ರಹಣದ ಪರಿಣಾಮ, ಪಾಲನೆ, ಪೂಜಾ ವಿಧಾನ ಹೇಗಿರಬೇಕು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.