ಬೆಂಗಳೂರು: ಬನ್ನೇರುಘಟ್ಟ ರಸ್ತೆ ಮತ್ತು ಕಾಮಗಾರಿಗಳನ್ನು ಸಂಸದ ತೇಜಸ್ವಿ ಸೂರ್ಯ ಅಧಿಕಾರಿಗಳೊಂದಿಗೆ ತಪಾಸಣೆ ನಡೆಸಿ 3 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದಿದ್ದಾರೆ.
ಈ ಗ್ರಿಡ್ ಲಾಕ್‌ನಿಂದಾಗಿ ಅನೇಕ ಅಪಘಾತಗಳಾಗುತ್ತಿವೆ. ಆದಷ್ಟು ಬೇಗ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದು ತೇಜಸ್ವಿ ಸೂರ್ಯ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಇನ್ನು ಮಳೆ ಬಂತು ಅಂದರೆ ಸಾಕು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡವರ ಸಂಖ್ಯೆ ಲೆಕ್ಕಕ್ಕಿಲ್ಲ. ಜೆಡಿ ಮರ ಜಂಕ್ಷನ್ನಿಂದ ಐದು ಕಿಲೋ ಮೀಟರ್ ಕ್ರಮಿಸುವುದಕ್ಕೆ ಸುಮಾರು ಒಂದು ಗಂಟೆಗೂ ಅಧಿಕ ಸಮಯ ಕಳೆಯುವ ಅನಿವಾರ್ಯತೆ ವಾಹನ ಸವಾರರು ಎದುರಿಸುತ್ತಿದ್ದಾರೆ. ಈ ರಸ್ತೆಯ ಸಮಸ್ಯೆ ಪರಿಶೀಲನೆಗೆ ಎರಡರಿಂದ ಮೂರು ಬಾರಿ ಮೇಯರ್ ಮತ್ತು ಅಧಿಕಾರಿಗಳು, ಸ್ಥಳೀಯ ಶಾಸಕರು ಬಂದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ತೇಜಸ್ವಿ ಸೂರ್ಯಗೆ ಬಿಬಿಎಂಪಿ ಕಮಿಷನರ್, ಬಿಎಂಆರ್‌ಸಿಎಲ್, ಬಿಡಬ್ಲ್ಯೂಎಸ್ಎಸ್ಬಿ ಮುಖ್ಯಸ್ಥರು ಮತ್ತು ಶಾಸಕ ಸತೀಶ್ ರೆಡ್ಡಿ ಸಾಥ್ ನೀಡಿದರು.