ETV Bharat / state

ಸರ್ಕಾರಿ ನೌಕರನ ವಿರುದ್ಧ ಅನುಮಾನವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ: ಹೈಕೋರ್ಟ್ - High Court

ಸರ್ಕಾರಿ ನೌಕರನ ಪ್ರಾಮಾಣಿಕತೆಯ ಕುರಿತು ಅನುಮಾನ ಇದ್ದಲ್ಲಿ, ಅದು ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ ಎಂದು ಹೈಕೋರ್ಟ್​ ಅಭಿಪ್ರಾಯಪಟ್ಟಿದೆ.

suspicion-against-a-government-employee-will-tarnish-the-entire-system-says-high-court
ಸರ್ಕಾರಿ ನೌಕರನ ವಿರುದ್ಧ ಅನುಮಾನವಿದ್ದಲ್ಲಿ ಇಡೀ ವ್ಯವಸ್ಥೆಯ ಕಳಂಕಕ್ಕೆ ಕಾರಣವಾಗಲಿದೆ : ಹೈಕೋರ್ಟ್
author img

By ETV Bharat Karnataka Team

Published : Oct 11, 2023, 7:07 AM IST

Updated : Oct 11, 2023, 8:51 AM IST

ಬೆಂಗಳೂರು : ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಯ ಪ್ರಾಮಾಣಿಕತೆ ಕುರಿತು ಅನುಮಾನದ ನೆರಳು ಬಿದ್ದಲ್ಲಿ ಅದು ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತದೆ. ಜತೆಗೆ, ಅವರಿರುವ ಇಡೀ ವ್ಯವಸ್ಥೆಯನ್ನು ಕಳಂಕಗೊಳಿಸಲು ಕಾರಣವಾಗಲಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ತನ್ನ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದ ಕ್ರಮ ಪ್ರಶ್ನಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ಉಪಕಾರ್ಯದರ್ಶಿ-3 ಶ್ರೀರೂಪ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಎಸ್.ಸಂಜಯ್‌ಗೌಡ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ಪಟ್ಟಿದೆ.

ಅಲ್ಲದೆ, ಸಾರ್ವಜನಿಕ ಸೇವಕರ ವಿರುದ್ಧ ತನಿಖಾಧಿಕಾರಿಯಿಂದ ವಿಚಾರಣೆ ನಡೆಸಿದಲ್ಲಿ ಅಂತಹ ಸಂಶಯವನ್ನು ತೊಡೆದು ಹಾಕಲು ನೆರವಾಗುತ್ತದೆ. ಜತೆಗೆ, ಅಂತಹ ಸಂಸ್ಥೆಯ ವಿರುದ್ಧ ಕೆಟ್ಟ ಅನುಮಾನವನ್ನು ಅಳಿಸಿ ಹಾಕಿದಂತಾಗುತ್ತದೆ ಎಂದು ಅಭಿಪ್ರಾಯ ಪಟ್ಟು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಭ್ರಷ್ಟಾಚಾರ ನಿಗ್ರಹ ಕಾಯಿದೆಯ ಸೆಕ್ಷನ್ 17 ಎ ಸರ್ಕಾರಿ ಅಧಿಕಾರಿಗಳನ್ನು ತನಿಖಾಧಿಕಾರಿಗಳು ವಿನಾಕಾರಣ ವಿಚಾರಣೆಗೆ ಒಳಪಡಿಸುವುದನ್ನು ತಡೆಯುವ ಒಂದು ಅಸ್ತ್ರವಾಗಿದೆ. ಅಧಿಕಾರಿಗಳ ವಿರುದ್ಧ ಆರೋಪ ಎದುರಾದಲ್ಲಿ ಈ ಕಾಯಿದೆಯಡಿ ಅನುಮತಿ ಕಡ್ಡಾಯವಾಗಿದೆ. ಆದರೆ, ಸೆಕ್ಷನ್ 19ರ ಅಡಿ ಅನುಮತಿ ನೀಡಿದರೆ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಈ ರೀತಿಯ ಅವಕಾಶ ಸಾಮಾನ್ಯ ಜನತೆಗೆ ಇರುವುದಿಲ್ಲ. ಆದರೆ, ಅರ್ಜಿದಾರರ ವಿರುದ್ಧದ ಆರೋಪದ ಕುರಿತು ಸತ್ಯಾಸತ್ಯತೆ ತಿಳಿಯುವುದಕ್ಕೆ ಮಾತ್ರ ಅನುಮತಿ ನೀಡಲಾಗಿದೆ.

ಅಲ್ಲದೇ, ಪ್ರಸ್ತುತ ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಇನ್ನೂ ವಿಚಾರಣೆ ಮಾಡಬೇಕಾಗಿದೆ. ಅದಕ್ಕೂ ಮುನ್ನ ಅವರ ವಿರುದ್ಧ ದೋಷಾರೋಪ ಮಾಡುವ ಪ್ರಶ್ನೆ ಉದ್ಭವಿಸುವುದಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ಮಾಡಬೇಕಾಗಿದ್ದು, ವಿಚಾರಣೆ ಮಾಡಬೇಕೇ ಬೇಡವೇ ಎನ್ನುವ ಕುರಿತು ಈ ಸಂದರ್ಭದಲ್ಲಿ ತಾರ್ಕಿಕ ಅಂತ್ಯಕ್ಕೆ ಬರಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ. ಜತೆಗೆ, ಅರ್ಜಿದಾರರ ವಿರುದ್ಧ ವಿಚಾರಣೆ ನಡೆಸಿ ಆ ಬಗ್ಗೆ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವುದಕ್ಕೆ ಅವಕಾಶವಿಲ್ಲ ಎಂಬ ಅಂಶ ಗೊತ್ತಾದ ಸಂದರ್ಭದಲ್ಲಿ ಆರೋಪ ಕೈಬಿಡಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಅಲ್ಲದೇ, ಈ ಪ್ರಕರಣದಲ್ಲಿ 40-60 ಅಳತೆಯ ನಿವೇಶನಗಳನ್ನು ಹಂಚಿಕೆ ಮಾಡಿದ್ದರೂ, 30-40 ನಿವೇಶನಗಳನ್ನಾಗಿ ಪರಿವರ್ತಿಸಿ ಮರು ಹಂಚಿಕೆ ಮಾಡಲಾಗಿದೆ ಎಂಬ ಆರೋಪವಿದೆ. ಈ ಆರೋಪ ಹೊತ್ತಿರುವ ವ್ಯಕ್ತಿಯ ಪ್ರಕರಣದಲ್ಲಿ ಲಾಭ ಗಳಿಸಲು ಈ ಕೃತ್ಯ ಮಾಡಿದ್ದಾರೆಯೇ ಎಂಬುದನ್ನು ತಿಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಅರ್ಜಿದಾರರ ವಿರುದ್ಧ ಮುಂದಿನ 3 ತಿಂಗಳಲ್ಲಿ ವಿಚಾರಣೆ ನಡೆಸಿ ಸೂಕ್ತ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಹಿನ್ನೆಲೆ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಅಭಿವೃದ್ಧಿಪಡಿಸಿರುವ ಸರ್ ಎಂ.ವಿಶ್ವೇಶ್ವರಯ್ಯ ಬಡಾವಣೆಯ ಐದನೇ ಹಂತದಲ್ಲಿ ಫಲಾನುಭವಿಗಳಿಗೆ ನಿವೇಶನಗಳನ್ನು ಹಂಚಿಕೆ ಮಾಡಿತ್ತು. ಈ ನಡುವೆ ಭಾಸ್ಕರ್ ರೆಡ್ಡಿ ಎಂಬವರಿಗೆ 40-60 ಅಡಿಗಳ 1607/69 ಸಂಖ್ಯೆಯ ನಿವೇಶನವನ್ನು ಹಂಚಿಕೆ ಮಾಡಿ ಸ್ವಾಧೀನಾನುಭವ ಪತ್ರವನ್ನೂ ನೀಡಿತ್ತು. ಜತೆಗೆ, 2005ರಲ್ಲಿ ಸೇಲ್ ಡೀಡನ್ನು ವಿತರಣೆ ಮಾಡಲಾಗಿತ್ತು.

ಇದಾದ ಬಳಿಕ 2012ರಲ್ಲಿ 40-60ರ ಅಳತೆಗೆ ಆರು ನಿವೇಶನಗಳನ್ನು 30-40 ಅಳತೆಯಂತೆ 12 ನಿವೇಶನಗಳನ್ನಾಗಿ ಮಾಡಿ ಹಂಚಿಕೆ ಮಾಡಿದ್ದು, ಭಾಸ್ಕರ್​ ರೆಡ್ಡಿ ಅವರಿಗೆ 1609/69(ಎ) ಸಂಖ್ಯೆಯ ನಿವೇಶನವನ್ನು ಮರು ಹಂಚಿಕೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಅಂದಿನ ಬಿಡಿಎ ಅಧ್ಯಕ್ಷರು ಹಾಗೂ ಅರ್ಜಿದಾರರ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ಭ್ರಷ್ಟಾಚಾರ ನಿಗ್ರಹ ದಳದ ಡಿಐಜಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದರು. ಈ ಮನವಿಯನ್ನು ಸರ್ಕಾರ ಅಂಗೀಕರಿಸಿತ್ತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಸರ್ಕಾರ ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಆರೋಪಗಳು ಇದೆ ಎಂಬುದಾಗಿ ತಿಳಿಸಿ ವಿಚಾರಣೆ ಅನುಮತಿ ನೀಡಿದೆ. ಹೀಗಾಗಿ ಅನುಮತಿ ರದ್ದುಪಡಿಸಬೇಕು ಎಂದು ಕೋರಿದ್ದರು.

ಇದನ್ನೂ ಓದಿ : ಸಂಚಾರ ದಟ್ಟಣೆ ತಪ್ಪಿಸಲು ಶಾಲೆ, ಕೈಗಾರಿಕೆಗಳ ಸಮಯ ಬದಲಾವಣೆ: ನಿರ್ಧಾರ ತೆಗೆದುಕೊಳ್ಳಲು ಸರ್ಕಾರಕ್ಕೆ ಕಾಲಾವಕಾಶ

Last Updated : Oct 11, 2023, 8:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.