ETV Bharat / state

ಸಕಾಲ ಯೋಜನೆ ಜವಾಬ್ದಾರಿ ಸಚಿವರೊಬ್ಬರಿಗೆ ವಹಿಸಿ : ಸಿಎಂಗೆ ಸುರೇಶ್ ಕುಮಾರ್ ಪತ್ರ - ETV Bharath Kannada news

2011ರ ಸಮಯದಲ್ಲಿ ಸದಾನಂದ ಗೌಡ ಅವರ ಕಾಲದಲ್ಲಿ ಜಾರಿಗೆ ಬಂದ ಸಕಾಲ ಯೋಜನೆಯ ಜವಾಬ್ದಾರಿಯನ್ನು ಸಚಿವರೊಬ್ಬರಿಗೆ ವಹಿಸಿ ಎಂದು ಸುರೇಶ್ ಕುಮಾರ್ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

suresh kumar wrote letter to cm about sakala yojana
ಸಕಾಲ ಯೋಜನೆ ಜವಾಬ್ದಾರಿ ಸಚಿವರೊಬ್ಬರಿಗೆ ವಹಿಸಿ : ಸಿಎಂಗೆ ಸುರೇಶ್ ಕುಮಾರ್ ಪತ್ರ
author img

By

Published : Jun 12, 2023, 3:46 PM IST

ಬೆಂಗಳೂರು : ನಾಗರಿಕ ಸೇವೆಗಳನ್ನು ನಾಡಿನ ಜನತೆಗೆ ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ ಸರ್ಕಾರದ ಮಹತ್ವ ಪೂರ್ಣ ಯೋಜನೆ ಸಕಾಲದ ಪ್ರಭಾರವನ್ನು ಸಂಪುಟದ ಯಾವುದಾದರೂ ಸಚಿವರಿಗೆ ವಹಿಸಿ ಆದೇಶ ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.

ನಮ್ಮ ರಾಜ್ಯದ ಸಕಾಲ ಯೋಜನೆ ನಾಗರಿಕ ಸೇವೆಗಳನ್ನು ಪರಿಣಾಮಕಾರಿಯಾಗಿ ಕಾಲಮಿತಿಯಲ್ಲಿ ಒದಗಿಸುವ ಸರ್ಕಾರದ ಮಹತ್ವ ಪೂರ್ಣ ಯೋಜನೆಯಾಗಿದ್ದು, ಈ ಯೋಜನೆಯ ಬಗ್ಗೆ ಸರ್ಕಾರ ವಿಶೇಷ ಆಸ್ಥೆ ವಹಿಸಬೇಕಾದ ಅವಶ್ಯಕತೆ ಇದೆ. ಈ ಯೋಜನೆಯ ಉದ್ದೇಶ ಇಂದು ನಾಳೆ ಇನ್ನಿಲ್ಲ ಹೇಳಿದ ಸಮಯ ತಪ್ಪೋಲ್ಲ ಎನ್ನುವ ಉಪಶೀರ್ಷಿಕೆಯಲ್ಲಿಯೇ ವ್ಯಕ್ತವಾಗಿದೆ. ಇದರ ಆಶಯದಂತೆ ಈ ಕಾರ್ಯಕ್ರಮ ಅನುಷ್ಠಾನಗೊಂಡಿದ್ದು, ಕೋಟ್ಯಾಂತರ ನಾಗರಿಕರು ಇದುವರೆವಿಗೂ ಇದರ ಪ್ರಯೋಜನವನ್ನು ಪಡೆದಿದ್ದಾರೆ.

ಇನ್ನು ಇದೇ ಸಕಾಲ ಕಾರ್ಯಕ್ರಮದ ಮತ್ತೊಂದು ಮಹತ್ವದ ಕವಲು ಯೋಜನೆ ಜನಸೇವಕಕ್ಕೆ ಸರ್ಕಾರವು ಈಗಾಗಲೇ ಚಾಲನೆ ನೀಡಿರುವ ಅಂಶವನ್ನು ತಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಕಾರ್ಯಕ್ರಮದ ಮೂಲಕ ಜನರ ಮನೆ ಬಾಗಿಲಿಗೇ ನಾಗರೀಕ ಸೇವೆಗಳನ್ನು ಕೊಂಡೊಯ್ಯುವ ಮಹತ್ವದ ನಿರೀಕ್ಷೆಯನ್ನು ಹೊಂದಲಾಗಿದೆ. ಇದರಿಂದಲೂ ಬೆಂಗಳೂರು ನಗರದ ಲಕ್ಷಾಂತರ ಹಿರಿಯ ನಾಗರೀಕರು ಪ್ರಯೋಜನ ಪಡೆದಿದ್ದಾರೆ. ಈ ಎರಡು ಯೋಜನೆಗಳ ಕುರಿತು ತಾವು ವಿಶೇಷ ಗಮನಹರಿಸಬೇಕೆಂದು ಕೋರುತ್ತೇನೆ ಎಂದು ಸುರೇಶ್ ಕುಮಾರ್ ಸಿಎಂ ಸಿದ್ದರಾಮಯ್ಯಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.

suresh kumar wrote letter to cm about sakala yojana
ಸಿಎಂಗೆ ಸುರೇಶ್ ಕುಮಾರ್ ಬರೆದ ಪತ್ರ

ಇನ್ನು ಯೋಜನೆಗಳ ಅನುಷ್ಠಾನ ಸಮರ್ಪಕವಾಗಬೇಕಾದಲ್ಲಿ ಈ ಕುರಿತು ಆಸಕ್ತಿ ಇರುವ ಸಚಿವರೊಬ್ಬರಿಗೆ ಇದರ ಹೊಣೆಯನ್ನು ವಹಿಸಬೇಕಾಗುತ್ತದೆ. ಈ ಹಿಂದೆ ನಾನು ಈ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. 2013 ರಿಂದ 2018ರ ನಡುವಿನ ತಮ್ಮ ಅಧಿಕಾರದ ಅವಧಿಯಲ್ಲಿ ಅಂದಿನ ಸಚಿವ ಸಂಪುಟದ ಸಚಿವರಾಗಿದ್ದ ಜಯಚಂದ್ರ ಅವರು ಈ ಇಲಾಖೆಯ ಜವಾಬ್ದಾರಿ ಹೊಂದಿದ್ದರು. ಇಂತಹ ಮಹತ್ವದ, ಜನಪರ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇದರ ಪ್ರಭಾರವನ್ನು ತಮ್ಮ ಸಚಿವ ಸಂಪುಟದ ಆಸಕ್ತ ಸಚಿವರೊಬ್ಬರಿಗೆ ವಹಿಸಿ ಆದೇಶ ಮಾಡಬೇಕಾಗಿ ಕೋರುತ್ತೇನೆ ಎಂದು ಸುರೇಶ್ ಕುಮಾರ್ ಮನಿವ ಮಾಡಿದ್ದಾರೆ.

ಸಕಾಲ ಯೋಜನೆ ವಿವರ: ಕರ್ನಾಟಕ ವಿಧಾನಸಭೆ ಸಕಾಲ ಸೇವೆಗಳ ಕಾಯಿದೆಯನ್ನು 2011 ರಲ್ಲಿ ಅಂಗೀಕರಿಸಿತು, ಇದು ನಮ್ಮ ರಾಜ್ಯದಲ್ಲಿ ನಾಗರಿಕರಿಗೆ ಸೇವೆಗಳ ಖಾತರಿಯನ್ನು ಒದಗಿಸಲು ನಾಗರಿಕ ಸಂಬಂಧಿತ ಸೇವೆಗಳಿಗೆ ನಿಗದಿತ ಸಮಯವನ್ನು ಸೀಮಿತಗೊಳಿಸುತ್ತದೆ. ಈ ಕಾಯಿದೆಯನ್ನು ನವೆಂಬರ್ 2012 ರಿಂದ ಸಕಾಲ ಕಾಯಿದೆ ಎಂದು ಕರೆಯಲಾಯಿತು. ಸಾರ್ವಜನಿಕ ಸೇವೆಗಳ ಹಕ್ಕು ಶಾಸನದ ಅಡಿಯಲ್ಲಿ ಕಾಯಿದೆಯನ್ನು ಅಳವಡಿಸಿದ ಹತ್ತನೇ ರಾಜ್ಯ ಕರ್ನಾಟಕವಾಗಿದೆ.

ಅರ್ಜಿಯನ್ನು ತಿರಸ್ಕರಿಸಿದ ಸಂದರ್ಭದಲ್ಲಿ ಅಥವಾ ನಿಗದಿತ ಸಮಯದೊಳಗೆ ಸೇವೆಯನ್ನು ಒದಗಿಸದಿದ್ದಲ್ಲಿ, ನಾಗರಿಕರು GSC ಸಂಖ್ಯೆಯನ್ನು ಉಲ್ಲೇಖಿಸಿ ತಮ್ಮ ಕುಂದುಕೊರತೆಗಳನ್ನು ಪರಿಹರಿಸಲು ಸಮರ್ಥ ಅಧಿಕಾರಿ (CO) ಮುಂದೆ ಮನವಿಯನ್ನು ಸಲ್ಲಿಸಬಹುದು. ಸಕ್ಷಮ ಅಧಿಕಾರಿಯು ಮೇಲ್ಮನವಿಯನ್ನು ಆಲಿಸಿ ನಿಗದಿತ ಸಮಯದೊಳಗೆ ಕುಂದುಕೊರತೆಗಳನ್ನು ಪರಿಹರಿಸುತ್ತಾರೆ. ನಾಗರಿಕರು ಪರಿಹಾರದ ವೆಚ್ಚವನ್ನು ನಗದು ರೂಪದಲ್ಲಿ ಕ್ಲೈಮ್ ಮಾಡಬಹುದು. ವಿಳಂಬಿತ ಅವಧಿಗೆ ದಿನಕ್ಕೆ 20 ಗರಿಷ್ಠ ರೂ. CO ನಿಂದ 500, ಮುಂಗಡ. 30 ದಿನಗಳ ಕಾಲ ಬರೆಯಲಾದ ವಿಳಂಬ ಅಥವಾ ಡೀಫಾಲ್ಟ್‌ಗೆ ಜವಾಬ್ದಾರರಾಗಿರುವ ಗೊತ್ತುಪಡಿಸಿದ ಅಧಿಕಾರಿ ಅಥವಾ ಅವರ ಅಧೀನದ ಸಂಬಳದಿಂದ ಕಡಿತಗೊಳಿಸಲಾಗುತ್ತದೆ.

ಇದನ್ನೂ ಓದಿ: Electricity Bill: ಹೊಸ ಮನೆ, ಹೊಸ ಬಾಡಿಗೆದಾರರಿಗೆ ಸರಾಸರಿ ವಿದ್ಯುತ್ ಬಳಕೆ 53 ಯೂನಿಟ್ ಎಂದು ಪರಿಗಣನೆ: ಸಚಿವ ಕೆ ಜೆ ಜಾರ್ಜ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.