ETV Bharat / state

ಶಕ್ತಿ ಯೋಜನೆ ಸಕ್ಸಸ್.. ತಿಂಗಳಲ್ಲೇ 16.73 ಕೋಟಿ ಮಹಿಳೆಯರು ಪ್ರಯಾಣ: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹರ್ಷ - ಕೆಎಸ್ಆರ್ಟಿಸಿ

ಶಕ್ತಿ ಯೋಜನೆ ತಿಂಗಳ ಪ್ರಗತಿ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದರು. ಇದೇ ವೇಳೆ ಯೋಜನೆ ಯಶಸ್ಚಿಗೊಳಿಸಿದ ನಾಲ್ಕು ಸಾರಿಗೆ ಸಂಸ್ಥೆಗಳ ಎಲ್ಲಾ ಅಧಿಕಾರಿ,ಸಿಬ್ಬಂದಿ ಕಾರ್ಯಕ್ಕೆ ಮಚ್ಚುಗೆ ವ್ಯಕ್ತಪಡಿಸಿದ್ದಾರೆ.

Transport Minister Ramalinga Reddy
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹರ್ಷ
author img

By

Published : Jul 11, 2023, 11:00 PM IST

ಬೆಂಗಳೂರು: ಕಾಂಗ್ರೆಸ್​ನ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಜಾರಿಯಾಗಿ ತಿಂಗಳು ಕಳೆದಿದ್ದು, ತಿಂಗಳ ಪ್ರಗತಿ ವರದಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಡುಗಡೆ ಮಾಡಿದ್ದಾರೆ. ಈ ವರೆಗೂ 16.73 ಕೋಟಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಟಿಕೆಟ್ ಮೌಲ್ಯ 401.94 ಕೋಟಿಯಾಗಿದೆ ಎಂಬ ಮಾಹಿತಿ ಹಂಚಿಕೊಂಡ ಸಚಿವರು ಯೋಜನೆ ಯಶಸ್ವಿಗೆ ಸಹಕರಿಸಿದ ಪ್ರಯಾಣಿಕರು ಮತ್ತು ಸಿಬ್ಬಂದಿ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ಜೂನ್ 11 ರಂದು ಚಾಲನೆಗೊಂಡ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ "ಶಕ್ತಿ" ಯೋಜನೆಯು ಇಂದಿಗೆ ಒಂದು ತಿಂಗಳು ಪೂರೈಸಿದ್ದು, ಸಾರಿಗೆ ಸಂಸ್ಥೆಗಳಲ್ಲಿ ಮಹತ್ತರವಾದ ಬದಲಾವಣೆಗೆ ಕಾರಣವಾಗಿ, ಮಹಿಳಾ ಪ್ರಯಾಣಿಕರಿಂದ ಅಭೂತಪೂರ್ವ ಯಶಸ್ಸನ್ನುಗಳಿಸಿದೆ.

ಈ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಸಹಕರಿಸಿದ ನಾಲ್ಕು ಸಾರಿಗೆ ಸಂಸ್ಥೆಗಳ ಎಲ್ಲ ಅಧಿಕಾರಿ/ಸಿಬ್ಬಂದಿಗಳಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಸಾರ್ವಜನಿಕ ಪ್ರಯಾಣಿಕರು, ಅದರಲ್ಲಿಯೂ ಮಹಿಳಾ ಪುಯಾಣಿಕರು ಸಾರಿಗೆ ಸಂಸ್ಥೆಯ ಬಸ್​ಗಳಲ್ಲಿ ಪ್ರತಿದಿನ ಪ್ರಯಾಣಿಸಿ 'ಸಾರಿಗೆ ಬಸ್​ಗಳು ಜನರ ಜೀವನಾಡಿಯೂ ಹೌದು ಹಾಗೂ ಮಹಿಳೆಯರ ಪಯಣದ ಸಾರಥಿಯೂ ಹೌದು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಸಾರಿಗೆ ಸಚಿವರು ಹರ್ಷ ವ್ಯಕ್ತಪಡಿಸಿದ್ದಾರೆ.

ತಿಂಗಳ ವರದಿ ರಿಲೀಸ್: ಜೂನ್ 11 ರಿಂದ ಜುಲೈ 10ರ ವರೆಗೆ ನಾಲ್ಕು ಸಾರಿಗೆ ನಿಗಮಗಳ ಬಸ್​ಗಳಲ್ಲಿ 16.73 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣಿಸಿದ್ದು ಒಟ್ಟು ಪ್ರಯಾಣಿಕರಲ್ಲಿ ಶೇ.50.52 ರಷ್ಟು ಮಹಿಳೆಯರ ಪ್ರಮಾಣ ದಾಖಲಾಗಿದೆ ಇವರ ಟಿಕೆಟ್ ಮೌಲ್ಯ 401.94 ಕೋಟಿಗಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್​​ಗಳಲ್ಲಿ 5.09 ಕೋಟಿ ಮಹಿಳಾ ಪ್ರಯಾಣಿಕರು, ಬಿಎಂಟಿಸಿಯಲ್ಲಿ 5.38 ಕೋಟಿ ಮಹಿಳಾ ಪ್ರಯಾಣಿಕರು, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ 4.02 ಕೋಟಿ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 2.23 ಕೋಟಿ ಪ್ರಯಾಣಿಕರು ಕಳೆದ ಒಂದು ತಿಂಗಳ ಅವಧಿಯಲ್ಲಿ ಪ್ರಯಾಣಿಸಿದ್ದಾರೆ. ಈ ಅವಧಿಯಲ್ಲಿ ಒಟ್ಟು ನಾಲ್ಕು ನಿಗಮಗಳ ಬಸ್​ಗಳಲ್ಲಿ 32.89 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದು ಇದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 16.73 ಕೋಟಿಯಾಗಿದೆ. ಶೇ.50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರೇ ಪ್ರಯಾಣಿಸಿದ್ದಾರೆ. ಇದು ಶಕ್ತಿ ಯೋಜನೆಯ ಯಶಸ್ಸಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಂತಸ ವ್ಯಕ್ತಪಡಿಸಿದರು.

ಮಹಿಳಾ ಪ್ರಯಾಣಿಕರ ತಿಂಗಳ ಟಿಕೆಟ್ ಮೌಲ್ಯ: ಶಕ್ತಿ ಯೋಜನೆಯಡಿ ಕಳೆದ ಒಂದು ತಿಂಗಳು ಮಹಿಳೆಯರು ಉಚಿತ ಪ್ರಯಾಣ ಸೌಲಭ್ಯ ಪಡೆದ ಟಿಕೆಟ್ ಮೌಲ್ಯ 401.94 ಕೋಟಿ ರೂ.ಗಳಾಗಿದೆ. ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ ಟಿಕೆಟ್ ಮೌಲ್ಯ 151.25 ಕೋಟಿಯಾಗಿದೆ. ಬಿಎಂಟಿಸಿ 69.56 ಕೋಟಿ, ವಾಯುವ್ಯ ಸಾರಿಗೆ 103.51 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ 77.62 ಕೋಟಿ ರೂ.ಗಳಾಗಿದೆ ಒಟ್ಟು ನಾಲ್ಕು ನಿಗಮಗಳಿಂದ 401.94 ಕೋಟಿ ರೂ.ಗಳ ಟಿಕೆಟ್ ಮೌಲ್ಯದ ಉಚಿತ ಪ್ರಯಾಣ ಸೇವೆಯನ್ನು ರಾಜ್ಯದ ಮಹಿಳೆಯರು ಪಡೆದಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಇನ್ನು ಶಕ್ತಿ ಯೋಜನೆಯಿಂದಾಗಿ ಬಸ್ ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ನಾಲ್ಕು ನಿಗಮಗಳು ಹೆಚ್ಚುವರಿ ಟ್ರಿಪ್ ಗಳಿಗೆ ವ್ಯವಸ್ಥೆ ಮಾಡಿವೆ. ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಕಳೆದ ಒಂದು ತಿಂಗಳಲ್ಲಿ ನಾಲ್ಕು ನಿಗಮಗಳಿಂದ 3147 ಹೆಚ್ಚುವರಿ ಟ್ರಿಪ್ ಗಳ್ನು ಬಸ್ ಗಳು ಸಂಚರಿಸಿವೆ. ಕೆಎಸ್ಆರ್ಟಿಸಿ 423 ಟ್ರಿಪ್, ಬಿಎಂಟಿಸಿ 238 ಟ್ರಿಪ್, ವಾಯುವ್ಯ ಸಾರಿಗೆ 986 ಟ್ರಿಪ್, ಕಲ್ಯಾಣ ಕರ್ನಾಟಕ ಸಾರಿಗೆ 1500 ಹೆಚ್ಚುವರಿ ಟ್ರಿಪ್ ಗಳ ಕಾರ್ಯಾಚರಣೆ ನಡೆಸಿ ಶಕ್ತಿ ಯೋಜನೆಗೆ ಅಗತ್ಯ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಾಗಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಪ್ರತಿದಿನದ ಸರಾಸರಿ ಮಹಿಳಾ ಪ್ರಯಾಣಿಕರು: ಪ್ರತಿ ದಿನ 55.77 ಲಕ್ಷ ಮಹಿಳಾ ಪ್ರಯಾಣಿಕರು ಶಕ್ತಿ ಯೋಜನೆಯಡಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಕೆಎಸ್ಆರ್ಟಿಸಿಯಲ್ಲಿ 16.97 ಲಕ್ಷ ,ಬಿಎಂಟಿಸಿಯಲ್ಲಿ 17.95 ಲಕ್ಷ, ವಾಯುವ್ಯ ಸಾರಿಗೆಯಲ್ಲಿ 13.42 ಲಕ್ಷ ಹಾಗು ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 7.43 ಲಕ್ಷ ಪ್ರಯಾಣಿಕರು ಪ್ರತಿ ದಿನ ಸರಾಸರಿಯಾಗಿ ಪ್ರಯಾಣಿಸುತ್ತಿದ್ದಾರೆ.

ಅದೆಡ ರೀತಿ ಪ್ರತಿ ದಿನ ಮಹಿಳಾ ಪ್ರಯಾಣಿಕರ ಸರಾಸರಿ ಟಿಕೆಟ್ ಮೌಲ್ಯ 13.40 ಕೋಟಿ ರೂ.ಗಳಾಗಿದೆ. ಕೆಎಸ್ಆರ್ಟಿಸಿಯಲ್ಲಿ 5.04, ಬಿಎಂಟಿಸಿಯಲ್ಲಿ 2.32 ಕೋಟಿ, ವಾಯುವ್ಯ ಸಾರಿಗೆಯಲ್ಲಿ 3.45 ಕೊಟಿ, ಕಲ್ಯಾಣ ಕರ್ನಾಟಕ ಸಾರಿಗೆಯಲ್ಲಿ 2.59 ಕೋಟಿ ರೂ.ಗಳ ಉಚಿತ ಟಿಕೆಟ್ ಮೌಲ್ಯ ವರದಿಯಾಗಿದೆ ಎಂದು ಸಚಿವರು ವಿವರಿಸಿದರು.

ಶಕ್ತಿ ಯೋಜನೆಯ ಒಂದು ತಿಂಗಳ ಅವಧಿಯಲ್ಲಿ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸಿದ್ದು ಜುಲೈ 7 ರಂದು, ಅಂದು ನಾಲ್ಕು ನಿಗಮಗಳಲ್ಲಿ ಒಟ್ಟು 1,20,04,725 ಪ್ರಯಾಣಿಕರು ಸಂಚರಿಸಿರುವರು. ಈ ಪೈಕಿ ದಾಖಲೆ ಪ್ರಮಾಣದಲ್ಲಿ ಅಂದರೆ 70,15,397 ಮಹಿಳಾ ಪ್ರಯಾಣಿಕರು ಶೇ.58.43 ಪ್ರಮಾಣದಲ್ಲಿ ಸಂಚರಿಸಿರುತ್ತಾರೆ ಎಂದು ಸಚಿವರು ತಿಳಿಸಿದ್ದಾರೆ.

ಒಟ್ಟಿನಲ್ಲಿ ಕೆಲವೊಂದು ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಸಂಪೂರ್ಣ ಸಾಫಲ್ಯತೆಯನ್ನು ಕಂಡಿದೆ. ಮಹಿಳಾ ಸಬಲೀಕರಣದತ್ತ ದಿಟ್ಟ ಹೆಜ್ಜೆಗೆ ಇದು ನಾಂದಿ ಹಾಡಿದೆ ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಇದನ್ನೂಓದಿ:ರೈತರು, ಕೈಗಾರಿಕೆಗಳು, ಜನಸಾಮಾನ್ಯರಿಗೆ ಹೊಡೆತ ನೀಡಿದ ಕಾಂಗ್ರೆಸ್ ಸರ್ಕಾರ: ಈರಣ್ಣ ಕಡಾಡಿ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.