ETV Bharat / state

ತಾಂತ್ರಿಕ ಸೌಲಭ್ಯವುಳ್ಳ ಮಕ್ಕಳ ಕುರಿತು ಶಾಲಾವಾರು ವಿವರ ಸಲ್ಲಿಸಿ: ಹೈಕೋರ್ಟ್ ನಿರ್ದೇಶನ - ಮಕ್ಕಳ ಕುರಿತು ಶಾಲಾವಾರು ವಿವರ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಂತ್ರಜ್ಞಾನದ ಲಭ್ಯತೆ ಹೇಗಿದೆ. ಟಿವಿ ಸೇರಿದಂತೆ ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಜೊತೆಗೆ ಇಂಟರ್ನೆಟ್ ಸೌಲಭ್ಯ ಹೊಂದಿರುವ ಮಕ್ಕಳ ಸಂಖ್ಯೆ ಎಷ್ಟು ಎಂಬ ನಿಖರ ಮಾಹಿತಿ ಸಂಗ್ರಹಿಸಬೇಕು. ಈ ಬಗ್ಗೆ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಅವರ ಪೋಷಕರಿಂದ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು. ಶಿಕ್ಷಣ ಇಲಾಖೆ ಅಯುಕ್ತರು ಈ ವರದಿಯನ್ನು ಜುಲೈ 1ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದೇಶಿಸಿ, ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿತು.

ಮಕ್ಕಳು
ಮಕ್ಕಳು
author img

By

Published : Jun 8, 2021, 7:46 PM IST

Updated : Jun 8, 2021, 8:15 PM IST

ಬೆಂಗಳೂರು: ರಾಜ್ಯದ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್, ಟ್ಯಾಬ್, ಇಂಟರ್ನೆಟ್ ಸೇರಿದಂತೆ ತಾಂತ್ರಿಕ ಸೌಲಭ್ಯ ಹೊಂದಿರುವ ಮಕ್ಕಳ ಸಂಖ್ಯೆ ಎಷ್ಟಿದೆ ಎಂಬ ಬಗ್ಗೆ ಶಾಲಾವಾರು ವಿವರ ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಈ ಕುರಿತು ಎ.ಎ. ಸಂಜೀವ್ ನಾರಾಯಣ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿರಿಯ ನ್ಯಾಯಮೂರ್ತಿ ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಕೋವಿಡ್ ಸೋಂಕಿನ ಪರಿಣಾಮ ಶಾಲೆಗಳನ್ನು ಪ್ರಾರಂಭಿಸುವ ಕುರಿತು ಅನಿಶ್ಚಿತತೆ ಮುಂದುವರಿದೆ. ಆದರೆ, ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು. ಸರ್ಕಾರ ಆನ್ಲೈನ್ ಶಿಕ್ಷಣ ಜಾರಿಗೆ ಪ್ರಯತ್ನಿಸುತ್ತಿದೆ. ಆದರೆ, ಈ ಕ್ರಮ ಸಫಲವಾಗಬೇಕಿದ್ದರೆ ಮಕ್ಕಳ ಬಳಿ ಇರುವ ತಾಂತ್ರಿಕ ಸೌಲಭ್ಯಗಳ ಸ್ಪಷ್ಟ ಮಾಹಿತಿ ಇರಬೇಕಾಗುತ್ತದೆ.

submit-school-details-of-children-with-technical-facilities-high-court-direction
ಹೈಕೋರ್ಟ್

ಹಾಗಾಗಿ, ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ತಂತ್ರಜ್ಞಾನದ ಲಭ್ಯತೆ ಹೇಗಿದೆ. ಟಿವಿ ಸೇರಿದಂತೆ ಕಂಪ್ಯೂಟರ್, ಲ್ಯಾಪ್ ಟಾಪ್, ಸ್ಮಾರ್ಟ್ ಫೋನ್ ಜೊತೆಗೆ ಇಂಟರ್ನೆಟ್ ಸೌಲಭ್ಯ ಹೊಂದಿರುವ ಮಕ್ಕಳ ಸಂಖ್ಯೆ ಎಷ್ಟು ಎಂಬ ನಿಖರ ಮಾಹಿತಿ ಸಂಗ್ರಹಿಸಬೇಕು. ಈ ಬಗ್ಗೆ ಶಾಲಾ ಶಿಕ್ಷಕರು, ಮಕ್ಕಳು ಹಾಗೂ ಅವರ ಪೋಷಕರಿಂದ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳಿಗೆ ರವಾನಿಸಬೇಕು. ಶಿಕ್ಷಣ ಇಲಾಖೆ ಅಯುಕ್ತರು ಈ ವರದಿಯನ್ನು ಜುಲೈ 1ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಅದೇಶಿಸಿ, ವಿಚಾರಣೆಯನ್ನು ಜುಲೈ 12ಕ್ಕೆ ಮುಂದೂಡಿತು.

ಇದಕ್ಕೂ ಮೊದಲು ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, 2021-22ನೇ ಶೈಕ್ಷಣಿಕ ವರ್ಷ ಆರಂಭಿಸಲು ಕಾರ್ಯಯೋಜನೆ ರೂಪಿಸಲಾಗಿದೆ. 2021ರ ಜುಲೈ 1ರಿಂದ ಶಾಲೆಗಳನ್ನು ಪುನರ್ ಆರಂಭಿಸಲಾಗುತ್ತಿದೆ. ಲಾಕ್​ಡೌನ್ ನಿಂದಾಗಿ ಪಠ್ಯ ಪುಸ್ತಕಗಳ ಮುದ್ರಣ ವಿಳಂಬವಾಗಿದ್ದು ಆಗಸ್ಟ್​ನಲ್ಲಿ ಪಠ್ಯ ಪುಸ್ತಕಗಳನ್ನು ಪೂರೈಸಲಾಗುವುದು. ದೂರದರ್ಶನ-ಚಂದನದಲ್ಲಿ ಸಂವಾದ ಕ್ಲಾಸ್ ಆರಂಭಿಸಲಾಗುತ್ತಿದೆ. ಮಕ್ಕಳವಾಣಿ ಹೆಸರಲ್ಲಿ ಯೂಟ್ಯೂಬ್ ಚಾನಲ್ ಪ್ರಾರಂಭಿಸಲಾಗಿದೆ. ದೀಕ್ಷಾ ಹೆಸರಲ್ಲಿ ಆನ್ಲೈನ್ ಪೋರ್ಟಲ್ ರಚಿಸಲಾಗಿದೆ. ಶಿಕ್ಷಕರಿಗಾಗಿ ತಂತ್ರಜ್ಞಾನ ಆಧಾರಿತ ಕಲಿಕಾ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಬುಕ್ ಬ್ಯಾಂಕ್​ಗಳನ್ನು ಆರಂಭಿಸಲಾಗಿದೆ ಎಂದರು.

ಅರ್ಜಿದಾರರ ಪರ ವಕೀಲರು ವಾದಿಸಿ, ನ್ಯಾಷನಲ್ ಸ್ಯಾಂಪಲ್ ಸರ್ವೇ ವರದಿಯಂತೆ ರಾಜ್ಯದ ಗ್ರಾಮೀಣ ಭಾಗದ ಶೇ.2ರಷ್ಟು ಮಕ್ಕಳ ಬಳಿ ಮಾತ್ರ ಕಂಪ್ಯೂಟರ್ ಇದೆ. ಶೇ.8ರಷ್ಟು ಮಕ್ಕಳಿಗೆ ಮಾತ್ರ ಇಂಟರ್ನೆಟ್ ಸೌಲಭ್ಯವಿದೆ. ಆದರೆ, ಶೇ.20ರಷ್ಟು ಮಕ್ಕಳು ತಂತ್ರಜ್ಞಾನ ಸೌಲಭ್ಯಗಳಿಂದ ದೂರ ಇದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಇದು ಸರಿಯಾದ ಮಾಹಿತಿಯಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ತಾಂತ್ರಿಕ ಸೌಲಭ್ಯಗಳೇ ಇಲ್ಲದೆ ಮಕ್ಕಳ ಕಲಿಕೆ ಹೇಗೆ. ಹಳ್ಳಿಗಳಲ್ಲಿ ವಿದ್ಯುತ್ ಅಭಾವ ಹೆಚ್ಚಾಗಿ ಇರುತ್ತದೆ, ಇಂಟರ್ ನೆಟ್ -ವೈಫೈ ಸೌಲಭ್ಯವೂ ವಿರಳ. ತಂತ್ರಜ್ಞಾನ ಬಳಸುವ ಸಾಮರ್ಥ್ಯ ಮತ್ತು ಅನುಭವ ಮಕ್ಕಳಿಗಿದೆ. ಈ ಎಲ್ಲ ಅಂಶಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಸೂಚಿಸಿತು.

Last Updated : Jun 8, 2021, 8:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.