ETV Bharat / state

ಬೆಂಗಳೂರಲ್ಲಿ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ.. ಕಾರಣ ನಿಗೂಢ - ಈಟಿವಿ ಭಾರತ ಕನ್ನಡ

ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿ ಸಾವು- ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ- ಯುಡಿಆರ್ ಪ್ರಕರಣ ದಾಖಲಿಸಿದ ಪೊಲೀಸರು

student died
ವಿದ್ಯಾರ್ಥಿ ಸಾವು
author img

By

Published : Dec 29, 2022, 10:58 AM IST

ಬೆಂಗಳೂರು: ನಗರದಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಬ್ರಮಣ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಎಎಸ್​ಸಿ ಕಾಲೇಜಿನ ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಥಿ ಪವನ್(19)ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿ.

ಕಾಲೇಜು ಮುಗಿಸಿ ಬಂದ ಪವನ್​ ಹೆಗ್ಗನಹಳ್ಳಿಯಲ್ಲಿರುವ ತನ್ನ ಮನೆಗೆ ಹೋಗಿದ್ದ. ನಿನ್ನೆ ಸಂಜೆ ಸುಬ್ರಮಣ್ಯನಗರದ ಮಿಲ್ಕ್ ಕಾಲೋನಿ ಮೈದಾನಕ್ಕೆ ಬಂದಿದ್ದು, ಅಲ್ಲಿನ ಕಟ್ಟಡವೊಂದರ ವ್ಯಾಪ್ತಿಯಲ್ಲಿ ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿರುವ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

'ನಿನ್ನೆ ರಾತ್ರಿ 10.30ರ ಹೊತ್ತಿಗೆ ಏನೋ ಬಿದ್ದ ಹಾಗೆ ಶಬ್ದ ಕೇಳಿಸಿತು. ಏನು ಅಂತಾ ನೋಡಿದ್ರೆ ಯಾವುದೋ ವ್ಯಕ್ತಿ ರೋಡಲ್ಲಿ ಬಿದ್ದಿದ್ದ. ಒಂದು ಕಾಲು ಪೂರ್ತಿ ಗಾಯ ಮತ್ತು ತಲೆಗೆ ಪೆಟ್ಟಾಗಿತ್ತು. ಕೆಲವರು ಆತ ಕಟ್ಟಡದ ಮೇಲಿನಿಂದ ಬಿದ್ದಿದ್ದಾನೆ ಅಂತಿದ್ದಾರೆ. ಆದರೆ ಇಲ್ಲಿ ಅಷ್ಟೊಂದು ರಕ್ತವೂ ಇರಲಿಲ್ಲ. ಮತ್ತೆ ಆ ಹುಡುಗ ಈ ಏರಿಯಾದವನೂ ಅಲ್ಲ' ಎಂದು ಸ್ಥಳೀಯ ಯುವಕ ಮಿಥುನ್ ಎಂಬುವರು​ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಕೀಲನ ಮೇಲೆ ಹಲ್ಲೆ ಆರೋಪ.. ಹಾನಗಲ್ ಠಾಣೆ ಪಿಎಸ್​ಐ ಅಮಾನತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.