ETV Bharat / state

ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ​​ ಮತ ಎಣಿಕೆ : 35 ನಿರ್ದೇಶಕ ಸ್ಥಾನಗಳ ಫಲಿತಾಂಶಕ್ಕೆ ಕ್ಷಣಗಣನೆ - State Okkaliga Association Election Counting

ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಒಟ್ಟು 35 ನಿರ್ದೇಶಕರ ಸ್ಥಾನಗಳ ಚುನಾವಣೆ ಫಲಿತಾಂಶ ಇಂದು ಹೊರಬೀಳಲಿದೆ. ಈಗಾಗಲೇ ಮತ ಎಣಿಕೆ ಆರಂಭವಾಗಿದೆ.

okkaliga association election
ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ​​ ಮತ ಎಣಿಕೆ
author img

By

Published : Dec 15, 2021, 10:34 AM IST

ಬೆಂಗಳೂರು: ಭಾನುವಾರ ನಡೆದ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದೆ. ಸಂಘದ ಕಾರ್ಯಕಾರಿ ಸಮಿತಿಯ ಒಟ್ಟು 35 ನಿರ್ದೇಶಕರ ಸ್ಥಾನಗಳ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಆಯಾ ಜಿಲ್ಲೆಯ ಮತ ಎಣಿಕೆ ಕೇಂದ್ರಗಳಲ್ಲಿ ಮತಗಳ ಎಣಿಕೆ ಶುರುವಾಗಿದೆ. ರಾಜ್ಯಾದ್ಯಂತ 35 ನಿರ್ದೇಶಕರ ಸ್ಥಾನಕ್ಕೆ 221 ಅಭ್ಯರ್ಥಿಗಳು ಕಣದಲ್ಲಿದ್ದರು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಿಂದ 15, ಮೈಸೂರು 3, ಮಂಡ್ಯ 4, ಹಾಸನ 3, ತುಮಕೂರು 2, ಚಿತ್ರದುರ್ಗ 1, ಕೋಲಾರ-ಚಿಕ್ಕಬಳ್ಳಾಪುರ 3, ದಕ್ಷಿಣ ಕನ್ನಡ-ಉಡುಪಿ 1, ಕೊಡಗು 1, ಶಿವಮೊಗ್ಗ- ಉತ್ತರ ಕನ್ನಡ 1, ಚಿಕ್ಕಮಗಳೂರು 1 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ. ಒಟ್ಟು 1,049 ಮತ ಕೇಂದ್ರಗಳಲ್ಲಿ 5,20,721 ಲಕ್ಷ ಮತದಾರರಿದ್ದರು.

ಒಟ್ಟು ಜಿಲ್ಲೆಗಳು ಸೇರಿ 11 ಜಿಲ್ಲಾ ಕೇಂದ್ರಗಳಲ್ಲಿ ಮತದಾನ ನಡೆದಿತ್ತು. ಬೆಂಗಳೂರು ನಗರದಲ್ಲಿ ಆಯ್ಕೆಯಾಗಬೇಕಿರುವ 15 ಸ್ಥಾನಗಳಿಗೆ 141 ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ.‌ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಇದನ್ನೂ ಓದಿ: ಪಿಎಫ್​​ಐ ಪ್ರತಿಭಟನೆ ವೇಳೆ ಲಾಠಿ ಚಾರ್ಜ್.. ಹಲವರಿಗೆ ಗಾಯ, ಉಪ್ಪಿನಂಗಡಿಯಲ್ಲಿ 144 ಸೆಕ್ಷನ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.