ಬೆಂಗಳೂರು : ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಘೋಷಣೆ ಮಾಡಿದ್ದಾರೆ.
ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಮಾತನಾಡಿದ ಅವರು, ತಾವು ಯಾರೂ ಅನ್ಯತಾ ಭಾವಿಸಬಾರದು, ನಾನು ನಿಮ್ಮೆಲ್ಲರ ಅಪ್ಪಣೆ ಪಡೆದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿದ್ದೇನೆ. 75 ವರ್ಷ ದಾಟಿದ ಬಳಿವೂ ನನಗೆ ಎರಡು ವರ್ಷ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ ಪ್ರಧಾನಿ ಮೋದಿ, ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರಿಗೆ ಶಬ್ದಗಳಲ್ಲಿ ಧನ್ಯವಾದ ಹೇಳಲು ಆಗುವುದಿಲ್ಲ ಎಂದರು.
ಸಿಎಂ ಭಾಷಣದ ಮುಖ್ಯಾಂಶಗಳು:
- ತಮ್ಮಲ್ಲೆರ ಅಪ್ಪಣೆ ಪಡೆದು ರಾಜೀನಾಮೆ ನೀಡಲು ನಿರ್ಧಾರ
- ಊಟದ ಬಳಿಕ ರಾಜಭವನಕ್ಕೆ ತೆರಳಿ ರಾಜೀನಾಮೆ ನೀಡುತ್ತೇನೆ
- ಭಾವುಕರಾಗಿ ರಾಜೀನಾಮೆ ಘೋಷಣೆ ಮಾಡಿದ ಸಿಎಂ
- ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ. ಖುಷಿಯಿಂದ ರಾಜೀನಾಮೆ ನೀಡುತ್ತಿದ್ದೇನೆ
- ಅವಕಾಶ ನೀಡಿದ ಮೋದಿ, ಅಮಿತ್ ಶಾ, ನಡ್ಡಾಗೆ ಧನ್ಯವಾದ
- ರಾಜ್ಯ ಸರ್ಕಾರ ಎರಡು ವರ್ಷದ ಆಡಳಿತಾವಧಿ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಸಾಧನಾ ಸಮಾಶವೇಶದಲ್ಲಿ ಭಾವುಕರಾದ ಸಿಎಂ
- ಬಿಜೆಪಿ ಪಕ್ಷದಲ್ಲಿ 75 ವರ್ಷ ದಾಟಿದ ಯಾರಿಗೂ ಅಧಿಕಾರ ನಡೆಸಲು ಅವಕಾಶ ಇಲ್ಲ. ಆದರೂ, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರು ನನ್ನ ಮೇಲಿನ ಪ್ರೀತಿ, ವಾತ್ಸಲ್ಯದಿಂದ ಸಿಎಂ ಆಗಿ ಮುಂದುವರೆಯಲು ಅವಕಾಶ ನೀಡಿದ್ದಾರೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
- ರಾಜ್ಯದಲ್ಲಿ ಬಿಜೆಪಿಗೆ ಅಸ್ತಿತ್ವ ಇಲ್ಲದ ಸಮಯದಲ್ಲಿ ನಾನು ಏಕಾಂಗಿ ಹೋರಾಟ ಮಾಡಿ ಪಕ್ಷ ಸಂಘಟನೆ ಮಾಡಿದೆ. ನಾನು ಮತ್ತು ಬೆಳ್ತಂಗಡಿಯ ವಸಂತ ಬಂಗೇರ ಅವರು ವಿಧಾನಸಭೆಗೆ ಆಯ್ಕೆಯಾದಾಗ, ವಸಂತ ಬಂಗೇರ ಅವರು ಹಠಾತ್ ಪಕ್ಷಕ್ಕೆ ಕೈಕೊಟ್ಟು ಹೊರ ಹೋದರು. ಆ ವೇಳೆ ನಾನು ಎದೆಗುಂದಲಿಲ್ಲ. ಹಿಂದಿರುಗಿ ನೋಡದೆ, ಒಬ್ಬನೇ ಎಂಬುವುದರ ಬಗ್ಗೆ ತಲೆ ಕೆಡಿಸಿಕೊಳ್ಳದೇ ಏಕಾಂಗಿ ಹೋರಾಟ ಮಾಡಿದೆ. ಆ ಮೂಲಕ ಇಂದು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಸಫಲನಾದೆ ಎಂದು ಸಿಎಂ ಹೇಳಿದರು.
- ನನ್ನ ಪಕ್ಷದ ಸೇವೆ ಗಮನಿಸಿದ ಅಟಲ್ ಬಿಹಾರಿ ವಾಜಪೇಯಿ ಅವರು ಕೇಂದ್ರದಲ್ಲಿ ಸಚಿವನಾಗು ಅಂದಿದ್ದರು. ಆದರೆ, ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು ಎಂದು ಅದನ್ನು ನಿರಾಕರಿಸಿದೆ ಎಂದು ಸಿಎಂ ಭಾವುಕರಾದರು.
- ಇಂದು ಬಹಳ ಕಾತುರತೆಯಿಂದ ಜನ ನೋಡುತ್ತಿರುವ ಸಂದರ್ಭವಾಗಿದೆ
- ಬಸವಕಲ್ಯಾಣದಿಂದ, ಶಿಕಾರಿಪುರದಿಂದ ಯಾತ್ರೆ ಮಾಡುವ ಮೂಲಕ ಪಕ್ಷ ಬಲಪಡಿಸುವ ಪ್ರಾಮಾಣಿಕ ಯತ್ನವನ್ನು ಮಾಡಿದ್ದೆವು
- ಅಂದು ಶಾಸನಸಭೆಯಲ್ಲಿ ಯಾರೂ ಇರಲಿಲ್ಲ. ನಾನೊಬ್ಬನೇ ವಿಧಾನಸೌಧ ಒಳಗಡೆ ಹೋರಾಟ ಮಾಡಬೇಕಾಗಿ ಬಂತು
- ನಾನು ಎಂದೂ ಹಿಂದೆ ತಿರುಗಿ ನೋಡಿಲ್ಲ. ನನ್ನ ಕರ್ತವ್ಯ ಜನಮೆಚ್ಚುವ ರೀತಿಯಲ್ಲಿ ನಿರ್ವಹಿಸಿದ್ದೇನೆ ಎಂಬ ತೃಪ್ತಿ ನನಗಿದೆ
- ಮನೆಯಿಂದ ಕಚೇರಿಗೆ ಹೋಗುವಾಗ ನನ್ನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿತ್ತು. ನಾನು ಬದುಕಿದ್ದರೆ ಈ ನಾಡಿನ ಜನರಿಗೆ ಮುಡಿಪಗಿಟ್ಟಾಗುತ್ತೇನೆ ಎಂದು ನನ್ನ ಹೆಂಡತಿ ಮಕ್ಕಳಿಗೆ ತಿಳಿಸಿದ್ದೆ. ಅದರಂತೆ ನಾನು ನಡೆದಿದ್ದೇನೆ
- ಅಂದು ಅಟಲ್ ಬಿಹಾರಿ ವಾಜಪೇಯಿ ಕೇಂದ್ರದಲ್ಲಿ ನೀವು ಸಚಿವನಾಗಬೇಕು ಎಂದಿದ್ದರು. ಆಗ ನಾನು ಕರ್ನಾಟಕದಲ್ಲಿ ಪಕ್ಷ ಕಟ್ಟಬೇಕಾಗಿದೆ. ಯಾವುದೇ ಕಾರಣಕ್ಕೂ ನಾನು ದೆಹಲಿಗೆ ಬರಲ್ಲ ಎಂದಿದ್ದರು. ನನಗೆ ಪಕ್ಷ ಕಟ್ಟಲು ಬಿಡಿ ಎಂದು ಭಾವನಾತ್ಮಕವಾಗಿ ಮೆಲುಕು ಹಾಕಿದ ಬಿಎವ್ವೈ
- ಜಾತಿ, ಹಣ ಬಲದ ಹೊರತಾಗಿಯೂ ಜನ ನಮ್ಮ ಕೈ ಬಿಟ್ಟಿಲ್ಲ. ನಾವು ಇಲ್ಲಿರಲು ಕಾರಣ ಲಕ್ಷಾಂತರ ಕಾರ್ಯಕರ್ತರು
- 75 ವರ್ಷ ಮೇಲ್ಪಟ್ಟವರಿಗೆ ಯಾವುದೇ ಸ್ಥಾನಮಾನ ನೀಡಿದಿರಲು ಹೈಕಮಾಂಡ್ ತೀರ್ಮಾನ ಮಾಡಿತ್ತು. ಆದರೂ ಹೈ ಕಮಾಂಡ್ ನನ್ನ ಮೇಲೆ ಪ್ರೀತಿಯಿಂದ ನನಗೆ ಅವಕಾಶ ನೀಡಿದರು.
- ಮೋದಿ ಮತ್ತೆ ಗೆದ್ದು ಬರಬೇಕು. ಆಗ ಮಾತ್ರ ಭಾರತ ಪ್ರಪಂಚದಲ್ಲಿ ಪ್ರಬಲ ದೇಶವಾಗಿ ಬೆಳೆಯುತ್ತದೆ. ಇದು ನನ್ನ ಪ್ರಾರ್ಥನೆ
- ಮೋದಿ-ಶಾ ಜೋಡಿ ಮತ್ತೆ ಗೆದ್ದು ಬರಬೇಕು ಎಂಬುದು ನನ್ನ ದೇವರಲ್ಲಿ ಪ್ರಾರ್ಥನೆ
- ಶಿವಮೊಗ್ಗದಲ್ಲಿ ಕಾರು ಇಲ್ಲದ ಕಾಲದಲ್ಲಿ ಸೈಕಲ್‌ನಲ್ಲಿ ಹೋಗಿ ಓಡಾಟ ಮಾಡಿದ್ದೆವು. ಯಾರೂ ಇಲ್ಲದಿದ್ದಾಗ ಪಕ್ಷ ಕಟ್ಟಿದ್ದೇವೆ
- ಅನಿವಾರ್ಯತೆ ಕಾರಣದಿಂದ ಜೆಡಿಎಸ್ ಜೊತೆ ಸೇರಿ ಮೈತ್ರಿ ಸರ್ಕಾರ ಮಾಡಿದೆವು
- ರಾಜ್ಯಾದ್ಯಂತ ಓಡಾಡಿ ಪಕ್ಷವನ್ನು ಬಲಪಡಿಸಿದ್ದೇನೆ. ಮುಂದಿನ ಚುನಾವಣೆಯಲ್ಲಿ 120 ಸ್ಥಾನ ಗೆಲ್ಲಿಸುವ ಗುರಿ ನನ್ನದು
- ಎಲ್ಲಾ ಸಂದರ್ಭದಲ್ಲೂ ಅಗ್ನಿ ಪರೀಕ್ಷೆ ಎದುರಿಸಿದೆ
- ಕೋವಿಡ್ ಮಹಾಮಾರಿ ಸವಾಲು ಎದುರಾಯಿತು. ನಾವೆಲ್ಲ ಶಕ್ತಿಮೀರಿ ಶ್ರಮವಹಿಸಿ ಕೋವಿಡ್ ನಿಯಂತ್ರಣ ಮಾಡಿದೆವು. ಹಂತ ಹಂತದಲ್ಲಿ ಅಗ್ನಿಪರೀಕ್ಷೆ ಎದುರಾಯಿತು
- ದೇವರ ದಯೆಯಿಂದ ಎಲ್ಲರ ಸಹಕಾರದಿಂದ ಒಂದು ಬದಲಾವಣೆ ತರಲು ಸಾಧ್ಯವಾಯಿತು. ಮುಂದಿನ ದಿನಗಳಲ್ಲಿ ರಾಜ್ಯವನ್ನು ಮುನ್ನಡೆಸುವ ಪ್ರಾಮಾಣಿಕ ಕೆಲಸ ಮಾಡಬೇಕಾಗಿದೆ.