ಬೆಂಗಳೂರು : ನಾಳೆಯಿಂದ ದೀಪಾವಳಿ ಹಬ್ಬ ಆಚರಣೆ.. ಹೀಗಿರುವಾಗ ಹಬ್ಬದ ಖರೀದಿಗೆಂದು ಜನ ಮಾರುಕಟ್ಟೆಗೆ ಹೋಗುತ್ತಾರೆ. ಅದ್ರಲ್ಲೂ ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವಾಗ ಜನರು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮರೆತ್ತಿದ್ದಾರೆ. ಹೀಗಾಗಿ ಬಗ್ಗೆ ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಹಲವು ಸ್ಪಷ್ಟನೆಗಳನ್ನ ನೀಡಿದ್ದಾರೆ.
ಇನ್ನು ಬಿಬಿಎಂಪಿ ವತಿಯಿಂದ ದೀಪಾವಳಿ ಹಬ್ಬಕ್ಕೆ ನಿಯಗಳನ್ನ ಮಾಡಿರುವುದರ ಬಗ್ಗೆ ಗೌರವ್ ಗುಪ್ತಾ ಮಾತನಾಡಿ, ದೀಪಾವಳಿ ಹಬ್ಬದ ಬಗ್ಗೆ ನಿರ್ದಿಷ್ಟವಾಗಿ ಯಾವುದೇ ನಿಯಮಗಳನ್ನ ತೆಗೆದುಕೊಂಡಿಲ್ಲ. ಈಗಾಗಲೇ ರಾಜ್ಯ ಸರ್ಕಾರದ ಮಟ್ಟದಲ್ಲಿ ಕೆಲವು ನಿಯಮಗಳನ್ನ ನೀಡಲಾಗಿದೆ. ಅದನ್ನೆ ಅನ್ವಯ ಮಾಡಲಾಗುವುದು ಎಂದು ಹೇಳಿದರು.
ದೀಪಾವಳಿ ಹಬ್ಬದ ಖರೀದಿಗೆ ಹೋಗುವ ಗ್ರಾಹಕರಿಗೆ ಕಿವಿ ಮಾತು ಹೇಳಿದ್ದಾರೆ. ಕೋವಿಡ್ ರೋಗ ನಮ್ಮಲ್ಲಿ ಈಗಲೂ ಇದೆ. ದಿನೇ ದಿನೇ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದೆ. ಆದ್ರೂ ಕೂಡ ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲರು ಖರೀದಿಗೆ ಅಂತ ಹೋದಾಗ ಕಡ್ಡಾಯವಾಗಿ ಮಾಸ್ಕ್ ಬಳಸಬೇಕು. ಮೊದಲನೇ ಹಾಗೂ ಎರಡನೇ ಡೋಸ್ ಲಸಿಕೆ ಆಗಿಲ್ಲ ಅಂತಹವರು ಎಚ್ಚರಿಕೆ ವಹಿಸಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಬಳಸಬೇಕಾಗಿದೆ. ವ್ಯಾಕ್ಸಿನ್ ಆಗಿದೆ ಹೀಗಾಗಿ ಮಾಸ್ಕ್ ಬಳಸದಿದ್ದರೂ ನಡೆಯುತ್ತೆ ಅನ್ನೊ ಬೇಜವಬ್ದಾರಿ ಬೇಡ ಎಂದು ಹೇಳಿದ್ದಾರೆ.
ಇನ್ನು ಹಬ್ಬಕ್ಕೆ ಪಟಾಕಿಗಳನ್ನ ಸಿಡಿಸುವುದರ ಕುರಿತು ಮಾತನಾಡಿದ ಆಯುಕ್ತ, ದೀಪಾವಳಿ ಬೆಳಕಿನ ಹಬ್ಬ. ಈ ಹಬ್ಬವನ್ನ ಸಂಭ್ರಮದಿಂದ ಆಚರಿಸಬೇಕು. ಪಟಾಕಿಗಳನ್ನ ಸಿಡಿಸುವ ಹುಮ್ಮಸ್ಸಿನಲ್ಲಿ ಅನಾಹುತಗಳು ಸಂಭವಿಸದಂತೆ ಜಾಗೃತಿ ವಹಿಸಬೇಕು. ಅಲ್ಲದೆ ಪರಿಸರಕ್ಕೆ ಹಾನಿಯಾಗದಂತೆ ಎಚ್ಚರವಹಿಸಿ ಆಚರಿಸಬೇಕು. ಹೀಗಾಗಿ ಜವಬ್ದಾರಿಯಿಂದಾಗಿ ಹಬ್ಬವನ್ನ ಸಾರ್ವಜನಿಕರು ಆಚರಿಸಬೇಕು ಎಂದು ಹೇಳಿದರು.
ಕೊನೆಯಲ್ಲಿ ಮಕ್ಕಳಿಗೆ ವ್ಯಾಕ್ಸಿನ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಮಕ್ಕಳಿಗೆ ಇರುವಂತಹ ವ್ಯಾಕ್ಸಿನ್ ಬಗ್ಗೆ ಈಗಲು ಕೂಡ ಸೂಕ್ತ ಮಾಹಿತಿ ಬಂದಿಲ್ಲ. ಕೆಲವು ವ್ಯಾಕ್ಸಿನ್‌ಗಳಿಕೆ ಎಮರ್ಜೆನ್ಸಿ ಅಧಿಕಾರದ ಬಗ್ಗೆ ಇನ್ನು ಸರ್ಕಾರ ನೀಡಿಲ್ಲ. ಜೊತೆಗೆ ಮಕ್ಕಳಿಗೆ ಇನ್ನು ಎಷ್ಟು ಡೋಸ್ ಕೊಡಬೇಕು. ಎಲ್ಲಿ ಕೊಡಬೇಕು, ಎಷ್ಟು ಪ್ರಮಾಣದಲ್ಲಿ ಕೊಡಬೇಕು. ಮನೆಯಲ್ಲೇ ಕೊಡಬೇಕಾ ಇಲ್ಲ, ಶಾಲೆಗಳಿಗೆ ಹೋಗಿ ಕೊಡಬೇಕಾ ಅನ್ನೊದು ಚರ್ಚೆ ಮಾಡಬೇಕಿದೆ ಎಂದು ಹೇಳಿದರು.