ETV Bharat / state

ಲಾಕ್​​​ಡೌನ್ ಸದ್ಭಳಕೆ ಮಾಡಿಕೊಳ್ಳುವಲ್ಲಿ ಸರ್ಕಾರ ವಿಫಲ: ರಾಧಾಕೃಷ್ಣ ಹೊಳ್ಳ ಆರೋಪ - ರಾಧಾಕೃಷ್ಣ ಹೊಳ್ಳ ಆರೋಪ

ರಾಜ್ಯ ಸರ್ಕಾರ ಲಾಕ್​ಡೌನ್ ಅವಧಿ ಸದ್ಭಳಕೆ ಮಾಡಿಕೊಳ್ಳುವಲ್ಲಿ ಮತ್ತೊಮ್ಮೆ ವಿಫಲವಾಗಿದೆ ಎಂದು ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಆರೋಪಿಸಿದ್ದಾರೆ.

Radhakrishna Holla
ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ
author img

By

Published : Jul 22, 2020, 11:11 AM IST

ಬೆಂಗಳೂರು: ರಾಜ್ಯ ಸರ್ಕಾರ ಮತ್ತೆ ಮತ್ತೆ ಕೊರೊನಾ ಸಂದರ್ಭದಲ್ಲಿ ಹೊರ ರಾಜ್ಯದಿಂದ ಮತ್ತು ಹೊರ ನಗರಗಳಿಂದ ಬರುವ ಜನರನ್ನು ಸಾಂಕ್ರಾಮಿಕ ರೋಗ ಕಾನೂನು ಅಡಿ ಪರೀಕ್ಷಿಸಿ ನಿಗಾದಲ್ಲಿ ಇಡುವ ಕೆಲಸದಲ್ಲಿ ಎಡವಿದೆ ಎಂದು ರಾಜ್ಯ ಟ್ರಾವೆಲ್ ಆಪರೇಟರ್ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜ್ಯ ಸರ್ಕಾರ ಲಾಕ್​ಡೌನ್ ಅವಧಿ ಸದ್ಭಳಕೆ ಮಾಡಿಕೊಳ್ಳುವಲ್ಲಿ ಮತ್ತೊಮ್ಮೆ ವಿಫಲವಾಗಿದೆ ಎಂದು ಆರೋಪಿಸಿರುವ ಅವರು, ಇದರಿಂದಾಗಿ ಹೊರ ರಾಜ್ಯದಿಂದ ಮತ್ತು ಬೇರೆ ನಗರಗಳಿಂದ ಬರಲು ಅವಕಾಶ ಕೊಟ್ಟು ಲಾಕ್​ಡೌನ್ ಸಂದರ್ಭದಲ್ಲಿ ಮಾಡಬೇಕಾದ ಬಹು ಮುಖ್ಯ ಭಾಗವಾಗಿ ಟ್ರೇಸ್, ಟೆಸ್ಟ್, ಟ್ರೀಟ್ ಮೂರರಲ್ಲೂ ಎಡವಿದೆ. ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿ ಸರ್ಕಾರ ಎಡವಿದೆ. ಸಾರ್ವಜನಿಕರ ಸಮಯವನ್ನು ಅಮಾನವೀಯ ರೀತಿಯಲ್ಲಿ ಹಾಳು ಮಾಡಿದೆ. ಆದೇಶಗಳನ್ನೂ ಅನುಷ್ಠಾನಗೊಳಿಸಲು ವಿಫಲವಾಗಿದೆ. ಮುಂದಿನ ದಿನಗಳಲ್ಲಿ ಇದರ ಜವಾಬ್ದಾರಿಯನ್ನು ಸರ್ಕಾರ ವಹಿಸಬೇಕಾಗುತ್ತದೆ. ಜನರ ಸಮಯ ಮತ್ತು ಆರೋಗ್ಯ ಎರಡರ ಮುಂದೆ ಚೆಲ್ಲಾಟ ಆಡಿದೆ ಎಂದು ಅವರು ಆರೋಪಿಸಿದ್ದಾರೆ.

ನಿತ್ಯ ಕೆಲಸದಲ್ಲಿ ಭಾಗಿ: ನಾಳೆಯಿಂದ ಲಾಕ್​​​ಡೌನ್​ನಿಂದ ಹೊರಬಂದು ನಿತ್ಯದ ಕೆಲಸಗಳಲ್ಲಿ ಭಾಗಿಯಾಗಬೇಕು ಎಂದು ಮುಖ್ಯಮಂತ್ರಿಗಳು ಜನರಿಗೆ ಕರೆ ಕೊಟ್ಟಿದ್ದಾರೆ. ಕಾರ್ಪೋರೇಟ್ ಕಂಪನಿಗಳು ಮನೆಯಿಂದಲೇ ಬಹುಭಾಗದ ಕೆಲಸಗಳನ್ನು ನಿರ್ವಹಣೆ ಮಾಡುವಂತೆ ವ್ಯವಸ್ಥೆ ಮಾಡಿರುವುದರಿಂದ ಖಾಸಗಿ ಸಾರಿಗೆ ಉದ್ಯಮ ನಶಿಸಿ ಹೋಗಿದೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ತೆರಿಗೆ ವಿನಾಯಿತಿಗಳ ಬಗ್ಗೆ ಮತ್ತು ಸಾಲದ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಆಗಸ್ಟ್​ ತಿಂಗಳ ಅಂತ್ಯದಿಂದಲೇ ವಾಹನ ಮಾಲೀಕರು ಸಾಲ ಮರುಪಾವತಿಗೆ ತೊಡಗಬೇಕಾಗುತ್ತದೆ ಎಂದು ಅಳಲನ್ನು ತೋಡಿಕೊಂಡಿದ್ದಾರೆ.

ವಾಹನ ತೆರಿಗೆ ವಿನಾಯಿತಿಯನ್ನು ಎರಡು ತಿಂಗಳು ಮಾತ್ರ ನೀಡಲಾಗಿದೆ. ಆದರೆ, ಕಳೆದ ನಾಲ್ಕು ತಿಂಗಳಿಂದ ಸಾರಿಗೆ ಉದ್ಯಮ ನಿಂತ ನೀರಾಗಿದ್ದು, ಇನ್ನೂ 6 ತಿಂಗಳು ಪ್ರವಾಸೋದ್ಯಮ ಮತ್ತು ಸಾರಿಗೆ ಕ್ಷೇತ್ರ ಉತ್ತೇಜನ ಕಾಣುವುದು ಕಷ್ಟ. ಅದೇ ರೀತಿ ಶಾಲೆ, ಕಾಲೇಜುಗಳು ಇನ್ನೂ ಯಾವಾಗ ಪುನರ್ ಆರಂಭ ಆಗುತ್ತದೆ ಎನ್ನುವುದು ಇನ್ನೂ ಮಾಹಿತಿ ಇಲ್ಲ. ಸಾರಿಗೆ ಉದ್ಯಮವನ್ನೇ ನಂಬಿಕೊಂಡಿರುವ ಟ್ಯಾಕ್ಸಿ, ಕ್ಯಾಬ್, ಬಸ್, ಸ್ಕೂಲ್ ಬಸ್, ಸಗಟು ಸೇವೆ ಒದಗಿಸುತ್ತಿರುವ ವಾಹನಗಳು ಮತ್ತು ಉದ್ಯಮವನ್ನು ನಂಬಿ ಕೊಂಡಿರುವ ಸುಮಾರು ಹತ್ತು ಲಕ್ಷ ಚಾಲಕರು ಮತ್ತು ಸಾರಿಗೆ ಸಂಸ್ಥೆಗಳು ಸರ್ಕಾರದ ಪ್ಯಾಕೇಜ್ ಅವಲಂಬಿಸಿದ್ದಾರೆ. ಉತ್ತರದ ಕೆಲವೊಂದು ರಾಜ್ಯಗಳಲ್ಲಿ ತೆರಿಗೆಯ ವಿನಾಯಿತಿಯನ್ನು ಡಿಸೆಂಬರ್​ವರೆಗೆ ವಿಸ್ತರಿಸಿದೆ. ಅದೇ ರೀತಿ, ಕೇಂದ್ರ ಸರ್ಕಾರದ ದರ ಬದಲಾವಣೆ ಮಾಡಲು ಇರುವ ಅವಕಾಶಗಳನ್ನು, ಸಾರಿಗೆ ಇಲಾಖೆಗಳಿಗೆ ಸೂಚನೆ ನೀಡಿದೆ.

ಆದರೆ, ರಾಜ್ಯ ಸರ್ಕಾರವು ಕೊರೊನಾ ಹೆಸರಲ್ಲಿ ವಾಹನ ಮಾಲೀಕರನ್ನು ಕಡೆಗಣಿಸಿದೆ. ಇದರಿಂದ ಉದ್ಯಮ ಅವಲಂಬಿತರಾಗಿರುವ 40 ಲಕ್ಷ ಜನರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಐಟಿ ಬಿಟಿ ಸಂಸ್ಥೆಗಳು, ಪ್ರವಾಸೋದ್ಯಮ, ಯಾತ್ರೆಗಳು ಮುಂದಿನ ವರ್ಷದ ವರೆಗೆ ಪ್ರಗತಿ ಕಾಣುವ ಸಂಭವ ಇಲ್ಲವಾಗಿದೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ಲಾಕ್ ಡೌನ್​ನಿಂದ ಮುಕ್ತಿ ಇಲ್ಲ ಎನ್ನುವುದು ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಕೊಂಡ ಉದ್ಯಮಿಗಳ ಅಳಲಾಗಿದೆ ಎಂದು ಅವರು ವಿವರಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.