ETV Bharat / state

ದಲಿತ ವಿರೋಧಿ ಸಿದ್ದರಾಮಯ್ಯರಿಂದ ಈಗ ‘ಹಿಟ್&ರನ್’ Politics: ಸರಣಿ ಟ್ವೀಟ್​ನಲ್ಲಿ ಬಿಜೆಪಿ ವಾಗ್ದಾಳಿ - State bjp-slams-opposition-leaders-in-series-of-tweet

ಬಿಟ್​​​​ ಕಾಯಿನ್ ವಿವಾದದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ನಡುವೆ ವಾಗ್ವಾದ ತಾರಕಕ್ಕೇರಿದೆ. ಇದೀಗ ಕೈ ನಾಯಕರ ವಿರುದ್ಧ ಬಿಜೆಪಿ ಸರಣಿ ಟ್ವೀಟ್​​​ನಲ್ಲಿ ವಾಗ್ದಾಳಿ ನಡೆಸಿದೆ.

State bjp-slams-opposition-leaders-in-series-of-tweet
ಸರಣಿ ಟ್ವೀಟ್​ನಲ್ಲಿ ಬಿಜೆಪಿ ವಾಗ್ದಾಳಿ
author img

By

Published : Nov 13, 2021, 9:24 AM IST

ಬೆಂಗಳೂರು: ಬಿಟ್ ಕಾಯಿನ್ (Bitcoin) ವಿವಾದದಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ನಾಯಕರು ಮಾಡುತ್ತಿರುವ ಕಪೋಲಕಲ್ಪಿತ ಆರೋಪಗಳಿಗೆ ಮತ್ತೆ ಮತ್ತೆ ಉತ್ತರಿಸುವ ಅಗತ್ಯವಿಲ್ಲ ಎಂದು ರಾಜ್ಯ ಬಿಜೆಪಿ ಕೈ ನಾಯಕರ ವಿರುದ್ಧ ಮತ್ತೆ ಕಿಡಿಕಾರಿದೆ.

ಈ ಬಗ್ಗೆ ಟ್ವೀಟ್ (BJP Tweet) ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರೇ (Opposition Leader Siddaramaiah) ಟಿಪ್ಪು (Tipu Sulthan Jayanti) ಕುರಿತಾದ ಸುಳ್ಳು ಇತಿಹಾಸ ಓದುವ ಬದಲು ಬಿಟ್ ಕಾಯಿನ್ (Bit coin Row) ಕುರಿತಾದ ಚಾರ್ಜ್ ಶೀಟ್ ತರಿಸಿಕೊಂಡು‌ ಮೊದಲು ಓದಿ. ಆಗ ನಿಮ್ಮ ಪಕ್ಷದ ನಾಯಕರು ಈ ಹಗರಣದಲ್ಲಿ ಹೇಗೆ ಭಾಗಿಯಾಗಿದ್ದರೆ ಎಂಬುದು ಅರ್ಥವಾಗುತ್ತದೆ. ಈ‌ ಹಗರಣಕ್ಕೆ ನೀವೇ ಪರೋಕ್ಷ ಬೆಂಬಲ ನೀಡಿರಬಹುದೆಂಬ ಶಂಕೆ ರಾಜ್ಯದ ಜನರನ್ನು ಕಾಡುತ್ತಿದೆ ಎಂದು ಆರೋಪಿಸಿದೆ.

ಶ್ರೀಕಿ ಜತೆ ಕಾಂಗ್ರೆಸ್​​ ನಾಯಕರ ಮಕ್ಕಳ ಸಂಪರ್ಕ

ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದಾರೆ. ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು ಕಾಯಿನ್ ವಿಚಾರ ತೇಲಿ ಬಿಟ್ಟಿದ್ದಾರೆ.

ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ.‌ ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸುವ ಸಿದ್ದರಾಮಯ್ಯ ಅವರೇ, ದಾಖಲೆ ಬಿಡುಗಡೆ ಮಾಡಲು ಭಯವೇಕೆ? ಈ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ? ಆರೋಪಿ ಶ್ರೀಕಿ (Bit coin case accused Sriki) ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು? ಎಂದು ಪ್ರಶ್ನಿಸಿದೆ‌.

  • ಬಿಟ್ ಕಾಯಿನ್ ಹಗರಣದಲ್ಲಿ ಪ್ರಭಾವಿಗಳು ಭಾಗಿಯಾಗಿದ್ದಾರೆಂದು ಆರೋಪಿಸುವ @siddaramaiah ಅವರೇ, ದಾಖಲೆ ಬಿಡುಗಡೆ ಮಾಡಲು ಭಯವೇಕೆ?

    ಈ ಹಗರಣದ ಬೇರುಗಳು ನಿಮ್ಮ ನಾಯಕರ ಬುಡ ಸುತ್ತಿಕೊಳ್ಳಬಹುದೆಂಬ ಭಯವೇ?

    ಆರೋಪಿ ಶ್ರೀಕಿ ಕಾಂಗ್ರೆಸ್ ನಾಯಕರ ಪುತ್ರರತ್ನರ ಜೊತೆಗಲ್ಲವೇ ಸಂಪರ್ಕ ಹೊಂದಿರುವುದು?#ಕಮಿಷನ್‌ಕಾಂಗ್ರೆಸ್

    — BJP Karnataka (@BJP4Karnataka) November 12, 2021 " class="align-text-top noRightClick twitterSection" data=" ">

ಬಿಟ್ ಕಾಯಿನ್ (Bit coin case enquiry) ವಿಚಾರದಲ್ಲಿ ಈಗಾಗಲೇ ತನಿಖೆ ನಡೆಯುತ್ತಿದೆ. ಈ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆಯೂ ಸ್ಪಷ್ಟನೆ ನೀಡಲಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ಮಂಡಿಸಿ ಎಂದು ಈಗಾಗಲೇ ಹೇಳಿದ್ದೇನೆ.

ಬಿಟ್ ಕಾಯಿನ್ ಹಗರಣದಲ್ಲಿ ಕಾಂಗ್ರೆಸ್ ನಾಯಕರು ಇದ್ದಾರೆ (Congress Leaders names in Bitcoin case) ಎಂದು ಈಗಾಗಲೇ ಹೇಳಿದ್ದೇನೆ. ಕಾಂಗ್ರೆಸ್‌ ನಾಯಕರ ಕಪೋಲಕಲ್ಪಿತ ಆರೋಪಗಳಿಗೆ ಮತ್ತೆ ಮತ್ತೆ ಉತ್ತರಿಸುವ ಅಗತ್ಯವಿಲ್ಲ ಎಂದಿದೆ.

  • ದಲಿತ ವಿರೋಧಿ ಸಿದ್ದರಾಮಯ್ಯ ಈಗ "ಹಿಟ್ & ರನ್ " ರಾಜಕೀಯ ಆರಂಭಿಸಿದ್ದಾರೆ.

    ದಲಿತ ವಿರೋಧಿ ಹೇಳಿಕೆ ನೀಡಿರುವ ಸಿದ್ದರಾಮಯ್ಯ ಆ ಆಕ್ರೋಶದ ಬೆಂಕಿಯಿಂದ ಪಾರಾಗಲು #BitCoin ವಿಚಾರ ತೇಲಿ ಬಿಟ್ಟಿದ್ದಾರೆ.

    ಈ ದಲಿತ ವಿರೋಧಿಗೆ ತಕ್ಕ ಪಾಠ ಕಲಿಸಲು ಈಗ ಕಾಲ ಪಕ್ವವಾಗಿದೆ.#ಕಮಿಷನ್‌ಕಾಂಗ್ರೆಸ್

‘ನೀವು ಬಲಿ ಕಾ ಬಕ್ರಾ’

ಸಿದ್ದರಾಮಯ್ಯ ಅವರು ದಲಿತ ಶಬ್ದ ಬಳಸಿಯೇ ಇಲ್ಲ (Dalit Controversy by Siddaramaiah) ಎಂದು ವಾದಿಸುವ ಎಂಬಿ ಪಾಟೀಲ್ (MB Patil) ಅವರೇ, ಇದು ನಿಮ್ಮ ನಾಯಕ ಸಿದ್ದರಾಮಯ್ಯ ಅವರ ಭಾಷಣ, ಸರಿಯಾಗಿ ಕೇಳಿಸಿಕೊಳ್ಳಿ. ಇಲ್ಲಿ ದಲಿತ ನಾಯಕರ ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು ಅರ್ಥವಾಗುತ್ತವೆ. ದಲಿತ ನಾಯಕರ ವಿರುದ್ಧ ಸಿದ್ದರಾಮಯ್ಯ ಆಡಿರುವ ಮಾತುಗಳು ದಲಿತ ಸಮುದಾಯದ ಭಾವನೆಯನ್ನು ಕೆರಳಿಸಿದೆ. ಇದರಿಂದ ಬಚಾವ್ ಆಗುವುದಕ್ಕೆ ಸಿದ್ದರಾಮಯ್ಯ ಬಿಟ್ ಕಾಯಿನ್ ವಿಚಾರ ಪ್ರಸ್ತಾಪಿಸುತ್ತಿದ್ದಾರೆ ಎಂದಿದೆ.

ಎಂ.ಬಿ. ಪಾಟೀಲರೇ, ಎಷ್ಟು ದಿನ ಸಿದ್ದರಾಮಯ್ಯಗೆ ರಾಜಕೀಯ ದಾಳವಾಗುತ್ತೀರಿ? ಧರ್ಮ ವಿಭಜನೆಗೆ ಸಿದ್ದರಾಮಯ್ಯ ನಿಮ್ಮನ್ನು ದಾಳವಾಗಿ ಬಳಸಿಕೊಂಡರು, ಪರಿಣಾಮವಾಗಿ ಕಾಂಗ್ರೆಸ್ ಸರ್ವನಾಶವಾಯಿತು. ನಾನೂ ದಲಿತ ಎನ್ನುತ್ತಲೇ ದಲಿತ ನಾಯಕರನ್ನು ಹತ್ತಿಕ್ಕಿ, ದಲಿತರನ್ನೇ ಅವಮಾನ ಮಾಡಿದರು. ಸಿದ್ದರಾಮಯ್ಯ ಸಮರ್ಥಿಸಿಕೊಂಡು, ನೀವು ಬಲಿ ಕಾ ಬಕ್ರಾ ಆಗಲು ಹೊರಟಿದ್ದೀರಾ.?

ಡಿಕೆಶಿಗೆ ಅಕ್ರಮಗಳ ಸರದಾರ ಎಂದ ಬಿಜೆಪಿ

ಡಿಕೆ‌ ಶಿವಕುಮಾರ್ (KPCC President DK Shivakumar) ಅವರೇ, ಅಂದು ಕೇಂದ್ರೀಯ ತನಿಖಾ ಸಂಸ್ಥೆಗಳು (CBI Enquiry in Bitcion row) ಅಕ್ರಮ ಆದಾಯ ಸಂಬಂಧಿತವಾಗಿ ನಿಮ್ಮ ಮೇಲೆ ದಾಳಿ ನಡೆಸಿದಾಗ ಈ ಲೋಕಜ್ಞಾನ ಎಲ್ಲಿ ಹೋಗಿತ್ತು.? ಅಕ್ರಮಗಳ ಸರದಾರರಾದ ನೀವು ಬಿಟ್ ಕಾಯಿನ್ ಹಗರಣದಲ್ಲೂ ಬೆಂಬಲಿಗರ ಮೂಲಕ ಪಾಲು ಪಡೆದಿರುವ ಬಗ್ಗೆ ರಾಜ್ಯದ ಜನತೆಗೆ ಅನುಮಾನವಿದೆ, ನಿಜವೇ? ಎಂದು ಕೆಪಿಸಿಸಿ ಅಧ್ಯಕ್ಷರಿಗೂ ಬಿಜೆಪಿ ಟಾಂಗ್ ನೀಡಿದೆ.

  • ದಲಿತ ನಾಯಕರ ವಿರುದ್ಧ @siddaramaiah ಅವರು ಆಡಿರುವ ಮಾತುಗಳು ದಲಿತ ಸಮುದಾಯದ ಭಾವನೆಯನ್ನು ಕೆರಳಿಸಿದೆ.

    ಇದರಿಂದ ಬಚಾವ್ ಆಗುವುದಕ್ಕೆ ಸಿದ್ದರಾಮಯ್ಯ ಅವರು #Bitcoin ವಿಚಾರ ಪ್ರಸ್ತಾಪಿಸುತ್ತಿದ್ದಾರೆ.

    ಎಂ.ಬಿ. ಪಾಟೀಲರೇ, ಎಷ್ಟು ದಿನ ಸಿದ್ದರಾಮಯ್ಯನವರಿಗೆ ರಾಜಕೀಯ ದಾಳವಾಗುತ್ತೀರಿ?#ದಲಿತವಿರೋಧಿಸಿದ್ದರಾಮಯ್ಯ

ಇದನ್ನೂ ಓದಿ: ನಕಲಿ ಬಂಗಾರ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.