ಬೆಂಗಳೂರು: ಆಡಳಿತ ಪಕ್ಷ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ಮಧ್ಯೆ ಬಿಟ್ ಕಾಯಿನ್(Bitcoin Case) ನಡುವಿನ ಸಮರ ದಿನೇ ದಿನೇ ತಾರಕಕ್ಕೇರುತ್ತಿದೆ. ಬಿಟ್ ಕಾಯಿನ್ ಸಂಬಂಧ ರಾಜ್ಯ ಬಿಜೆಪಿ ಸರ್ಕಾರಕ್ಕೆ ಆರು ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ ಸುರ್ಜೇವಾಲಗೆ(Randeep Surjewala) ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ಈ ಸಂಬಂಧ ಸುದೀರ್ಘ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಮೂಲಕ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದೆ. ಬಿಟ್ ಕಾಯಿನ್((Bitcoin Case) ಪ್ರಕರಣ ಕಾಂಗ್ರೆಸ್ ವಿಕೃತಿ ಮೆರೆಯುತ್ತಿದ್ದು, ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ವಿಷಯವನ್ನು ತಿರುಚಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕೀಳು, ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಜನ ಸತತವಾಗಿ ತಿರುಚಿದ ಪಕ್ಷಪಾತಿ ಮಾಹಿತಿಗಳನ್ನು ಬಿಡುಗಡೆ ಮಾಡಿ ತೇಜೋವಧೆ ಅಭಿಯಾನದಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಎತ್ತಿದ ಆರು ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ಪಾಯಿಂಟ್ ಟು ಪಾಯಿಂಟ್ ಪ್ರತ್ಯುತ್ತರ ನೀಡಿದೆ.
1.ಬಿಟ್ ಕಾಯಿನ್ ಮುಚ್ಚಿಹಾಕುವ ಪ್ರಹಸನದಲ್ಲಿ ಪಾತ್ರಧಾರಿಗಳು ಯಾರು ?
ಇಲ್ಲಿ ಯಾವುದೇ ಹಗರಣದ ಆಯಾಮ ಕಿಂಚಿತ್ತು ಇಲ್ಲ ಆದ್ದರಿಂದ ಈ ಹಗರಣದಲ್ಲಿ ಯಾವುದೇ ಪಾತ್ರಧಾರಿಗಳು ಇರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅದೊಂದು ವಿಕೃತಿ ಅಷ್ಟೇ. ಆದರೆ ಈ ಪ್ರಹಸನದಲ್ಲಿ ಹೊಸ ಹೊಸ ಪಾತ್ರದಾರಿಗಳು ಹೊರಹೊಮ್ಮಿದ್ದು ಸಣ್ಣ ಕಡ್ಡಿಯನ್ನು ಗುಡ್ಡದಂತೆ ಬಿಂಬಿಸುತ್ತಿದ್ದಾರೆ. ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ ವಿಷಯವನ್ನು ತಿರುಚಿ ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಕೀಳು, ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಜನ ಸತತವಾಗಿ ತಿರುಚಿದ ಪಕ್ಷಪಾತಿ ಮಾಹಿತಿಗಳನ್ನು ಬಿಡುಗಡೆ ಮಾಡಿ ತೇಜೋವಧೆ ಅಭಿಯಾನದಲ್ಲಿ ತೊಡಗಿದ್ದಾರೆ. ನ್ಯಾಯಾಲಯ ವಿಚಾರಣೆ ಇನ್ನೂ ನಡೆಯುತ್ತಿದ್ದರು ಲೆಕ್ಕಿಸದೆ ತಮ್ಮ ದುರುದ್ದೇಶಿತ ಅಭಿಯಾನ ಮುಂದುವರಿಸಿದ್ದಾರೆ.
2.ಕಳುವಾದ ಬಿಟ್-ಕಾಯಿನ್ಗಳನ್ನು ಹ್ಯಾಕರ್ ಶ್ರೀಕೃಷ್ಣ ಅವರ ವ್ಯಾಲೆಟ್ನಿಂದ ರವಾನಿಸಲಾಗಿತ್ತೆ? ಆಗಿದ್ದರೆ ಎಷ್ಟು ಹಾಗೂ ಅವುಗಳ ಮೊತ್ತವೆಷ್ಟು? ಬೆಂಗಳೂರು ಪೊಲೀಸ್ ಪಂಚನಾಮೆಯಲ್ಲಿ (ಜನವರಿ 22, 2020) ರಂದು 31 ಮತ್ತು 180 ಬಿಟ್-ಕಾಯಿನ್ ಗಳನ್ನು ವರ್ಗಾಯಿಸಲಾಗಿದೆ ಆದರೆ ನಂತರ ಅದು ಕಳವಾಗಿದೆ ಅಥವಾ ನಕಲಿ ವ್ಯವಹಾರ (Transaction) ಆಗಿತ್ತು ಎಂದು ಯಾವ ಆಧಾರದಲ್ಲಿ ತಿಳಿಸಲಾಗಿದೆ?
ಉತ್ತರ: ಈ ಮೂಲಕ ಬಲವಾಗಿ ಸ್ಪಷ್ಟಪಡಿಸುವುದು ಏನೆಂದರೆ ಹ್ಯಾಕರ್ ಶ್ರೀಕೃಷ್ಣನ ಖಾತೆಯಿಂದ ಯಾವುದೇ ಬಿಟ್-ಕಾಯಿನ್ಗಳನ್ನು ವರ್ಗಾಯಿಸಿಲ್ಲ, ಯಾವುದೇ ಬಿಟ್-ಕಾಯಿನ್ ಕಳುವು ಆಗಿಲ್ಲ, ಕ್ರಿಪ್ಟೋಕರೆನ್ಸಿ ಪ್ರಕರಣ ತನಿಖೆಗಾಗಿ ಬಿಟ್ ಕಾಯಿನ್ ಖಾತೆ ತೆರೆಯಬೇಕೆಂದು ಪರಿಗಣಿಸಲಾಯಿತು. ಅದರಂತೆ ಸರ್ಕಾರ 8.12.2020 ರಂದು ಬಿಟ್ ಕಾಯಿನ್ ಖಾತೆ ತೆರೆಯಲು ಅಧಿಸೂಚನೆ ಹೊರಡಿಸಿತ್ತು. ಬಿಟ್ ಕಾಯಿನ್ ಗುರುತಿಸುವಿಕೆ ಮತ್ತು ಜಪ್ತಿ ಪ್ರಕ್ರಿಯೆ ಸಂದರ್ಭದಲ್ಲಿ ಆರೋಪಿ ಶ್ರೀಕೃಷ್ಣ BTC ವ್ಯಾಲೇಟ್ ತೋರಿಸಿದರು. ಅದರಲ್ಲಿ 31.8 ಬಿಟ್ ಕಾಯಿನ್ಗಳಿದ್ದವು. ಸೈಬರ್ ತಜ್ಞರು ಸರಕಾರಿ ಪಂಚರ ಉಪಸ್ಥಿತಿಯಲ್ಲಿ ವ್ಯಾಲೆಟ್ನ ಪಾಸ್ವರ್ಡ್ ಬದಲಿಸಲಾಯಿತು. ಈ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ತದನಂತರ ಈ ಬಿಟ್ ಕಾಯಿನ್ಗಳನ್ನು ಪೊಲೀಸ್ ವ್ಯಾಲೆಟ್ ಖಾತೆಗೆ ವರ್ಗಾಯಿಸಲು ನ್ಯಾಯಾಲಯದ ಅನುಮತಿ ಪಡೆಯಲಾಯಿತು. ಶ್ರೀಕೃಷ್ಣ ತೋರಿಸಿದ ವ್ಯಾಲೆಟ್ ತೆರೆದಾಗ 186. 811 ಬಿಟ್ ಕಾಯಿನ್‌ಗಳು ಕಂಡುಬಂದುವು. ಸೈಬರ್ ತಜ್ಞರ ಪ್ರಕಾರ ಇವು ಆರೋಪಿಯ ವೈಯಕ್ತಿಕ ಖಾತೆಯಲ್ಲ ಬದಲಿಗೆ ಇದೊಂದು ಬಿಟ್-ಕಾಯಿನ್ ವಿನಿಮಯ ಕೇಂದ್ರದ ವ್ಯಾಲೇಟ್ ಆಗಿತ್ತು. ಆದ್ದರಿಂದ ಈ ಖಾತೆಯನ್ನು ಮುಟ್ಟಲಿಲ್ಲ ಯಾವುದೇ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾಯಿಸಿಲ್ಲ. ಈ ಅಂಶಗಳು ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
3. ಶ್ರೀಕೃಷ್ಣ ಅವರು ಪೊಲೀಸ್ ವಶದಲ್ಲಿದ್ದಾಗ ಡಿಸೆಂಬರ್ 1, 2020 ಮತ್ತು ಏಪ್ರಿಲ್ 14, 2021 ರಂದು ರೂ.5240 ಮೊತ್ತದ 14682 ಬಿಟ್ ಕಾಯಿನ್‌ಗಳು ವರ್ಗಾವಣೆ ಬಗ್ಗೆ “ವೇಲ್ ಅಲರ್ಟ್” ನೀಡಿತ್ತೆನ್ನಲಾಗಿದ್ದು, ಈ ಎರಡು ವ್ಯವಹಾರಗಳು ಒಂದಕ್ಕೊಂದು ಸಂಬಂಧಿಸಿತ್ತೆ? ವರ್ಗಾವಣೆ ಯಾದ ಕೆಲ ಬಿಟ್‌ಕಾಯಿನ್‌ಗಳು ಶ್ರೀಕೃಷ್ಣ ಸೇರಿತ್ತೆ? ಎಂಬ ಬಗ್ಗೆ ತನಿಖೆ ನಡೆಸಲಾಯಿತೆ?
ಉತ್ತರ: ಕಾನೂನು ಜಾರಿ/ ತನಿಖಾ ಸಂಸ್ಥೆಗಳು ಈ ದೇಶದ ಕಾನೂನು, ನಿಯಮಾವಳಿಗಳ ಪ್ರಕಾರ ಕಾರ್ಯನಿರ್ವಹಿಸುತ್ತೇವೆ. ಈ ಸಂಸ್ಥೆಗಳು ಧೃಢೀಕರಣವಿಲ್ಲದ ಸಾಮಾಜಿಕ ಜಾಲ ತಾಣಗಳ ಮಾಹಿತಿಯನ್ನಾಧರಿಸಿ ಕಾರ್ಯನಿರ್ವಹಿಸಿಸಲು ಅಪೇಕ್ಷಿಸಲಾಗದು. ಮತ್ತೊಂದು ವಾಸ್ತವ ಸಂಗತಿಯೆಂದರೆ ಆರೋಪಿಯ ಬಂಧನ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದಿದ್ದರೂ, ಇದುವರೆಗೆ ಯಾವುದೇ ವಿದೇಶಿ ಕಾನೂನು ಜಾರಿ ಸಂಸ್ಥೆಗಳು ಅಥವಾ ಕಂಪನಿಗಳು ಬೆಂಗಳೂರು ಪೊಲೀಸ್ರನ್ನು ಈ ಹ್ಯಾಕಿಂಗ್ ಬಗ್ಗೆ ಸಂಪರ್ಕಿಸಿಲ್ಲ. ಬಿಟ್ ಫಿನೆಕ್ಸ್ ಕಂಪನಿ ಸಹ ಈ ಕುರಿತು ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಮಾಹಿತಿ ಕೋರಲ್ಲೂ ಇಲ್ಲ.
ಆದ್ದರಿಂದ, “ವೇಲ್ ಅಲರ್ಟ್” ತಿಳಿಸಿತ್ತು ಎನ್ನಲಾದ ಬಿಟ್ ಫಿನೆಕ್ಸ್‌ನ 14,682 ಬಿಟ್ ಕಾಯಿನ್‌ಗಳ ವರ್ಗಾವಣೆ ಮಾಹಿತಿ ಸಂಪೂರ್ಣ ನಿರಾಧಾರಾವಾಗಿದ್ದು. ಹಾಗೊಂದು ವೇಳೆ ಅಂತಹ ವ್ಯವಹಾರ ನಡೆದಿದ್ದರೂ ಅದು ಬೆಂಗಳೂರು ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಈ ಪ್ರಕರಣದ ಮೊದಲ ವ್ಯವಹಾರ (Transaction) ನಡೆದು ಸುಮಾರು ಒಂದು ವರ್ಷ ಕಳೆದಿದ್ದರೂ ಬಿಟ್ ಫಿನೆಕ್ಸ್/ಕಾನೂನು ಜಾರಿ ಸಂಸ್ಥೆಗಳ ಯಾವುದೇ ಪ್ರತಿನಿಧಿಗಳು ಬೆಂಗಳೂರು ಪೊಲೀಸ್ರನ್ನು ಅಥವಾ ಇನ್ನಾವುದೇ ಸಂಸ್ಥೆಯನ್ನು ಸಂಪರ್ಕಿಸಿಲ್ಲ.
4. ರಾಜ್ಯ ಸರ್ಕಾರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಅಂದಿನ ಗೃಹ ಸಚಿವರು) ಮತ್ತು ಇತರರ ಪಾತ್ರ ಮತ್ತು ಹೊಣೆಗಾರಿಕೆ ಏನು?
ಉತ್ತರ: ತನಿಖೆಯನ್ನು ಡಿಐಜಿ ದರ್ಜೆಯ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರ ಮೇಲ್ವಿಚಾರಣೆಯಲ್ಲಿ ದಕ್ಷ ಅಧಿಕಾರಿಗಳ ತಂಡದಿಂದ ಅತ್ಯಂತ ಪಾರದರ್ಶಕವಾಗಿ ಕೈಗೊಳ್ಳಲಾಗಿದೆ. ಸಂಪೂರ್ಣ ತನಿಖೆಯ ಪ್ರಕ್ರಿಯೆಯಲ್ಲಿ ಸ್ವತಂತ್ರ ಸರ್ಕಾರಿ ಪಂಚರು, ಐಐಎಸ್ಸಿಯ ನೆರವು, ಇ-ಆಡಳಿತ, ಗ್ರೂಪ್ ಸೈಬರ್ ಐಡಿಯ ಸೈಬರ್ ತಜ್ಞರು ಭಾಗವಹಿಸಿದ್ದರು. ಯಾವುದೇ ಹಂತದಲ್ಲಿ ಗೃಹ ಸಚಿವರು ಅಥವಾ ಯಾವುದೇ ರಾಜಕಾರಣಿ ಈ ತನಿಖೆಯೊಂದಿಗೆ ಸಂಬಂಧ ಹೊಂದಿರಲಿಲ್ಲ. ತನಿಖೆಯ ಮಾಹಿತಿಯನ್ನು ಸವಿವರವಾಗಿ ದಾಖಲಿಸಿ ಕಾಲ ಕಾಲಕ್ಕೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ಮೂಲಕ ನಿಷ್ಪಕ್ಷಪಾತವಾಗಿ ತನಿಖೆಯನ್ನು ನಿರ್ವಹಿಸಲಾಗಿದೆ.
5.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮ ಬೀರುವ ಗಂಭೀರ ಅಪರಾಧವಾಗಿದ್ದರೂ, ಇಂಟರ್ಪೋಲ್ಗೆ ಯಾಕೆ ಮಾಹಿತಿ ನೀಡಿಲ್ಲ? ಬಿಜೆಪಿ ಸರ್ಕಾರ 2021ರ ಏಪ್ರಿಲ್ 24 ರವರೆಗೆ ಅಂದರೆ ಐದು ತಿಂಗಳ ಕಾಲ ಯಾಕೆ ವಿಳಂಬ ಮಾಡಿದೆ?.
ಉತ್ತರ: ಆರೋಪಿಯು ಭಾರಿ ಪ್ರಮಾಣದಲ್ಲಿ ವೆಬ್ ಸೈಟುಗಳನ್ನು ಹ್ಯಾಕಿಂಗ್ ಮಾಡಿರುವ ಕುರಿತು ತನ್ನ ಸ್ವಯಂ ಪ್ರೇರಿತ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಆದರೆ ಈ ಕುರಿತು ನಿಖರ ವಿವರಗಳನ್ನು ನೀಡಿರಲಿಲ್ಲ. ಆದ್ದರಿಂದ ಆತನ ಹೇಳಿಕೆಗಳ ಸತ್ಯಾಸತ್ಯತೆ ಕುರಿತು ಪ್ರಾಥಮಿಕ ತನಿಖೆ ನಡೆಸಿ ಖಚಿತಪಡಿಸಿಕೊಳ್ಳಲಾಯಿತು. ಸೈಬರ್ ತಜ್ಞರು ಡಿಜಿಟಲ್ ಸಾಕ್ಷ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಆತನ ಹೇಳಿಕೆಗಳಲ್ಲಿ ಬಹುಪಾಲು ಆಧಾರರಹಿತ ಎಂದು ತಿಳಿಸಿದರು. ಈ ಪ್ರಕ್ರಿಯೆಗೆ ಸಮಯ ಹಿಡಿಯಿತು. ನಂತರ ವರದಿಯನ್ನು ಸೂಕ್ತ ಕ್ರಮಕ್ಕಾಗಿ ಇಂಟರ್ ಪೋಲ್ಗೆ ಕಳುಹಿಸಲಾಯಿತು.
6. ಕರ್ನಾಟಕ ಸರ್ಕಾರ ಎನ್್ಐಎ/ ಎಸ್ಎಫ್ಐಓ/ ಇಡಿಗೆ ಏಕೆ ಮಾಹಿತಿ ನೀಡಿಲ್ಲ?
ಉತ್ತರ: ಆರೋಪಿಯು ಹೇಳಿಕೆಯಲ್ಲಿ ತಿಳಿಸಿದ ಮಾಹಿತಿಯಂತೆ ಯಾವುದೇ ದೇಶದಿಂದ ಕಾನೂನು ರೀತ್ಯ ಪ್ರಕರಣದ ಮಾಹಿತಿ ಕೋರಿ ಯಾವುದೇ ಮನವಿ ಬಂದಿರುವುದಿಲ್ಲ. ಅಥವಾ ಬೆಂಗಳೂರಿನಿಂದ ಯಾವುದೇ ಹ್ಯಾಕಿಂಗ್ ಆಗಿರುವ ಕುರಿತು ಮಾಹಿತಿ ಬಂದಿರುವುದಿಲ್ಲ. ಅದಾಗ್ಯೂ ಆರೋಪಿ ಶ್ರೀಕೃಷ್ಣನ ಹೇಳಿಕೆಯಲ್ಲಿ ಹಲವು ಕ್ರಿಪ್ಟೊ ಕರೆನ್ಸಿ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿರುವುದಾಗಿ ತಿಳಿಸಿದ ಕಾರಣ ಈ ವಿಷಯವನ್ನು ದಿನಾಂಕ 28-4-2021 ರಂದು ಸಂಬಂಧಿಸಿದ ದೇಶಗಳಿಗೆ ಮಾಹಿತಿ ನೀಡುವ ಉದ್ದೇಶದಿಂದ ಸಿಬಿಐ ಇಂಟರ್ ಪೋಲ್ ವಿಭಾಗಕ್ಕೆ ಸಕ್ಷಮ ಪ್ರಾಧಿಕಾರದ ಮೂಲಕ ಮಾಹಿತಿ ನೀಡಲಾಗಿತ್ತು. ಇದೇ ಮಾಹಿತಿಯನ್ನು ಇ.ಡಿ.ಗೆ ದಿನಾಂಕ 3-3-2021 ರಂದು ಪ್ರಕರಣದ ದಾಖಲೆಗಳೊಂದಿಗೆ ಒದಗಿಸಲಾಗಿತ್ತು. ಆದರೆ ತನಿಖಾಧಿಕಾರಿಗಳು ಪ್ರಕರಣದ ಕುರಿತಂತೆ ಇ.ಡಿ.ಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು. ಈ ವಿಷಯಕ್ಕೆ ಸಂಬಂಧಿಸಿದ ತನಿಖಾ ಸಂಸ್ಥೆಗೆ ಮಾಹಿತಿ ನೀಡಲಾಗಿತ್ತು.
Bitcoin Case: ಕಾಂಗ್ರೆಸ್ ಕೇಳಿದ್ದ 6 ಪ್ರಶ್ನೆಗೆ ಪ್ರತ್ಯುತ್ತರ ನೀಡಿದ ರಾಜ್ಯ ಬಿಜೆಪಿ - BJP answers congress questions
ಕೀಳು, ಪುಕ್ಕಟೆ ಪ್ರಚಾರಕ್ಕಾಗಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳಲು ಈ ಜನ ಸತತವಾಗಿ ತಿರುಚಿದ ಪಕ್ಷಪಾತಿ ಮಾಹಿತಿಗಳನ್ನು ಬಿಡುಗಡೆ ಮಾಡಿ ತೇಜೋವಧೆ ಅಭಿಯಾನದಲ್ಲಿ ತೊಡಗಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಎತ್ತಿದ ಆರು ಪ್ರಶ್ನೆಗಳಿಗೆ ರಾಜ್ಯ ಬಿಜೆಪಿ ಪಾಯಿಂಟ್ ಟು ಪಾಯಿಂಟ್ ಪ್ರತ್ಯುತ್ತರ ನೀಡಿದೆ.