ಆನೇಕಲ್: ರಾಗಿಯ ಕಣಜ ಎಂದೇ ಬಿಂಬಿತವಾದ ಗಡಿನಾಡು ಆನೇಕಲ್ ಮತ್ತೊಂದು ಪ್ರತೀತಿಯನ್ನು ಹೊಂದಿದೆ. ಐತಿಹಾಸಿಕ ದೇವಾಲಯಗಳ ನಾಡಾಗಿ ಆನೇಕಲ್ ಕಂಗೊಳಿಸಿದ್ದು, ಹತ್ತು ಹಲವು ಧಾರ್ಮಿಕ ನಂಬಿಕೆಗಳಿಗೂ ಹೆಸರು ಪಡೆದಿದೆ. ಇಲ್ಲಿ ವೈಕುಂಠ ಏಕಾದಶಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ವೈಷ್ಣವ ಪಂಥವಷ್ಟೇ ಅಲ್ಲ ಶೈವ ಪರಂಪರೆಗೂ ಒತ್ತು ನೀಡಿ ಶರಣ ಸಾಹಿತ್ಯ ರಚನೆಗೂ ಆನೇಕಲ್ ಹೆಸರು ಪಡೆದಿದೆ. ವೈಕುಂಠ ಏಕಾದಶಿ ನಿಮಿತ್ತ ವೆಂಕಟರಮಣಸ್ವಾಮಿಯನ್ನಷ್ಟೇ ಆರಾಧಿಸದೇ ಸಕಲ ಶಿವದೇವಾಲಯಗಳಿಗೂ ಭಕ್ತಾಧಿಗಳು ಭೇಟಿ ನೀಡುತ್ತಿದ್ದಾರೆ. ಮುಖ್ಯವಾಗಿ ಇಲ್ಲಿನ ತಿಮ್ಮರಾಯಸ್ವಾಮಿ, ಕಾಶಿ ವಿಶ್ವನಾಥ ಸ್ವಾಮಿ, ಶಂಕರಮಠ, ಜೊತೆಗೆ ಐತಿಹಾಸಿಕ ಪ್ರಸಿದ್ಧ ಚೆನ್ನಕೇಶವ ಸ್ವಾಮಿ, ರಾಮಕೃಷ್ಣಾಪುರದ ವೆಂಕಟರಮಣ, ಬನ್ನೇರುಘಟ್ಟದ ಚಂಪಕಧಾಮ ಸ್ವಾಮಿ ಸೇರಿದಂತೆ ಎಲ್ಲ ದೇವರುಗಳಿಗೂ ವಿಶೇಷ ಅಲಂಕಾರ ಮಾಡಲಾಗಿತ್ತು.