ETV Bharat / state

ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಪ್ರಾಯೋಗಿಕ ಸಾಫ್ಟ್‌ವೇರ್ ಅಳವಡಿಕೆ.. ಇದು ದೇಶದಲ್ಲೇ ಮೊದಲು!! - Social Distance Software

ಸಾಮಾಜಿಕ ಅಂತರವಲ್ಲದೆ ಸಂಚಾರಿ ನಿಯಮ ಉಲ್ಲಂಘನೆಯಾಗದಂತೆ ಹಾಗೂ ಅಪರಾಧದ ಕುರಿತ ಜಾಗೃತಿ ಸಂದೇಶಗಳನ್ನು ಏಕಕಾಲದಲ್ಲಿ ಲಕ್ಷಾಂತರ ಜನರಿಗೆ ಅರಿವು ಮೂಡಿಸಬಹುದಾಗಿದೆ. ಮೂರನೇ ಹಂತದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಸುವ ಕೆಲಸ ಮಾಡುತ್ತಿದೆ‌‌.

Social Distance Maintenance Software
ಸೋಷಿಯಲ್ ಡಿಸ್ಟೆನ್ಸ್ ಮೈಂಟೈನ್ ಸಾಫ್ಟ್ ವೇರ್
author img

By

Published : May 10, 2020, 7:33 PM IST

ಬೆಂಗಳೂರು : ತಂತ್ರಜ್ಞಾನದ ನೆರವಿನಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹೇಗೆ ಎಂಬುದರ ಬಗ್ಗೆ ದೀವಿಯಾ ಸಾಫ್ಟ್‌ವೇರ್ ಕಂಪನಿಯ ಸೋಷಿಯಲ್ ಡಿಸ್ಟೈನ್ಸ್ ತಂತ್ರಾಂಶ ಅಭಿವೃದ್ಧಿ ಪಡಿಸುವುದರ ಬಗ್ಗೆ ಕಳೆದ ಏ.21ರಂದು ಈಟಿವಿ ಭಾರತ್‌ನಲ್ಲಿಯೇ ವಿಸ್ತೃತವಾಗಿ ತಿಳಿಸಿ ನೂತನ ಸಾಫ್ಟ್‌ವೇರ್ ಅಳವಡಿಸಬೇಕೆಂದು ವಿಶೇಷ ವರದಿ ಪ್ರಕಟಿಸಲಾಗಿತ್ತು.

ಇದಕ್ಕೆ ಸ್ಪಂದಿಸಿರುವ ನಗರ ಪೊಲೀಸರು ದೇಶದಲ್ಲೇ ಮೊದಲ ಬಾರಿಗೆ ನಗರದಲ್ಲಿ ಸೋಷಿಯಲ್ ಡಿಸ್ಟೆನ್ಸ್ ತಂತ್ರಾಂಶವನ್ನು ಅಳವಡಿಸಿದ್ದಾರೆ. ನಗರ ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣೆಯ ಹೆಚ್‌ಎಂಟಿ ಮೈದಾನದ ಬಳಿ ಸಿಸಿಟಿವಿ ಕ್ಯಾಮೆರಾವೊಂದಕ್ಕೆ ಪ್ರಾಯೋಗಿಕವಾಗಿ ತಂತ್ರಾಂಶ ಅಳವಡಿಕೆ ಮಾಡಲಾಗಿದೆ‌.

ಸೋಷಿಯಲ್ ಡಿಸ್ಟೆನ್ಸ್‌ ಮೆಂಟೈನ್​ ಪ್ರಾಯೋಗಿಕವಾಗಿ ಸಾಫ್ಟ್‌ವೇರ್ ಅಳವಡಿಕೆ..

ನೂತನ ತಂತ್ರಾಂಶ ಹೇಗೆ ಕೆಲಸ ಮಾಡುತ್ತೆ ?

ನಗರದಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾ ನಿಗಾವಹಿಸುವ ಸರ್ವರ್​ಗಳಲ್ಲಿ ನೂತನ ತಂತ್ರಾಂಶ ಅಳವಡಿಸಿಕೊಳ್ಳಬೇಕು. ಕ್ಯಾಮೆರಾದಲ್ಲಿ ಸೆರೆಯಾಗುವ ದೃಶ್ಯ ಆಧರಿಸಿ ಆಡಿಯೋ ಮೂಲಕ ಜನರನ್ನು ಸಾಮಾಜಿಕ ಅಂತರದಿಂದ ಇರಿ ಎಂದು ಎಚ್ಚರಿಸುತ್ತದೆ. ಇದೇ ಮಾದರಿ ವಿದ್ಯಾರಣ್ಯಪುರದಲ್ಲಿ ಈ ತಂತ್ರಾಂಶ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸುತ್ತಿದೆ‌‌. ಇದರಂತೆ ಸೆರೆಯಾದ ದೃಶ್ಯದಲ್ಲಿ ಇಬ್ಬರು ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕೂಡಲೇ ಕೆಂಪು ಬಣ್ಣದಿಂದ ಒಂದು ಕ್ಷರ್ಣಾರ್ಧದಲ್ಲೇ ದಯವಿಟ್ಟು ಸಾಮಾಜಿಕ ಅಂತರದಿಂದ‌‌ ಇರಿ ಎಂದು ಅಳವಡಿಸಲಾದ ಸ್ಪೀಕರ್ ಮೂಲಕ ಎಚ್ಚರಿಸುತ್ತದೆ.

ಅಳವಡಿಕೆ ಮಾಡಿರುವ ತಂತ್ರಾಂಶವನ್ನು ಪ್ರಾಯೋಗಿಕವಾಗಿ ದೇಶದಲ್ಲೇ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ. ಸಾಮಾಜಿಕ ಅಂತರವಲ್ಲದೆ ಸಂಚಾರಿ ನಿಯಮ ಉಲ್ಲಂಘನೆಯಾಗದಂತೆ ಹಾಗೂ ಅಪರಾಧದ ಕುರಿತ ಜಾಗೃತಿ ಸಂದೇಶಗಳನ್ನು ಏಕಕಾಲದಲ್ಲಿ ಲಕ್ಷಾಂತರ ಜನರಿಗೆ ಅರಿವು ಮೂಡಿಸಬಹುದಾಗಿದೆ. ಮೂರನೇ ಹಂತದ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳುವಂತೆ ಎಚ್ಚರಿಸುವ ಕೆಲಸ ಮಾಡುತ್ತಿದೆ‌‌. ರಾತ್ರಿ 7ರಿಂದ ಬೆಳಗ್ಗೆ 7ರವರೆಗೆ ನಗರದಲ್ಲಿ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ತುರ್ತು ಸಂದರ್ಭ ಹೊರತುಪಡಿಸಿ ನಾಲ್ಕು ಜನಕ್ಕಿಂತ ಹೆಚ್ಚಿನವರು ಒಂದೇ ಕಡೆ ಜಮಾವಣೆಯಾದರೆ ಕೂಡಲೇ ಕರ್ಫ್ಯೂ ಕುರಿತಂತೆ ಘೋಷಣೆ ಕೂಗುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ದೀವಿಯಾ ಸಾಫ್ಟ್‌ವೇರ್ ಕಂಪನಿ ಸಹ ಸಂಸ್ಥಾಪಕ ಅಪೂರ್ವ್ ಅಂಕದ್ ಈಟಿವಿ ಭಾರತ್‌ಗೆ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಿದ್ದಾರೆ.

ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಸೋಷಿಯಲ್ ಡಿಸ್ಟೆನ್ಸ್ ತಂತ್ರಾಂಶ ಅಳವಡಿಸಲಾಗಿದೆ. ಇದಕ್ಕೀಗ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಈಶಾನ್ಯ ವಲಯದ ಎಲ್ಲಾ ಠಾಣಾ ವ್ಯಾಪ್ತಿಯಲ್ಲಿ ಅಳವಡಿಸುವ ಚಿಂತನೆಯಿದೆ ಎಂದು‌ ನಗರ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಈಟಿವಿ ಭಾರತ್‌ಗೆ ತಿಳಿಸಿದ್ದಾರೆ.

ಸಾಫ್ಟ್‌ವೇರ್​ ಅಳವಡಿಕೆಯಿಂದ ಆಗುವ ಅನುಕೂಲಗಳೇನು?

  1. ಸ್ಥಳದಲ್ಲಿ ಪೊಲೀಸರು ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿ ಸಾಮಾಜಿಕ ಅಂತರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಿದೆ.
  2. ಸಾಫ್ಟ್‌ವೇರ್ ಅಳವಡಿಕೆಗೆ ದೊಡ್ಡಮಟ್ಟದಲ್ಲಿ ಹಣ ವಿನಿಯೋಗಿಸಬೇಕಾಗಿಲ್ಲ.
  3. ತಂತ್ರಜ್ಞಾನದ ಮೂಲ ಅಪರಾಧ ಪತ್ತೆ, ಟ್ರಾಫಿಕ್ ವೈಲೇಷನ್ಸ್ ತ್ವರಿತಗತಿಯಲ್ಲಿ‌ ಕಂಡು ಹಿಡಿಯಬಹುದಾಗಿದೆ.
  4. ಪೊಲೀಸ್ ಫ್ರೆಂಡ್ಲಿಯಾಗಿ ಈ ತಂತ್ರಾಂಶ ಕಾರ್ಯನಿರ್ವಹಿಸಲಿದೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.