ETV Bharat / state

ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣ ಹೆಚ್ಚಲು ಕೊಳೆಗೇರಿಗಳು ಕಾರಣ: ಖರ್ಗೆ - Kharge reaction about COVID-19

ಮಹಾರಾಷ್ಟ್ರದಲ್ಲಿ ಮಿತಿಮೀರಿದ ಕೊರೊನಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್​ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕೊಳೆಗೇರಿ ಹೆಚ್ಚಿರುವುದು ಕೋವಿಡ್ ಹೆಚ್ಚಳಕ್ಕೆ ಕಾರಣ ಎಂದಿದ್ದಾರೆ.

Senior Congress leader Mallikarjun Kharge reaction
ಕಾಂಗ್ರೆಸ್ ಮುಖಂಡರಾದ ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ವಿಎಸ್​ ಉಗ್ರಪ್ಪ
author img

By

Published : Jun 1, 2020, 4:41 PM IST

Updated : Jun 1, 2020, 5:50 PM IST

ಬೆಂಗಳೂರು: ಮಹಾರಾಷ್ಟ್ರ ಅದರಲ್ಲೂ ಮುಂಬೈ ಪರಿಸ್ಥಿತಿ ಬೇರೆ, ದೇಶದ ಯಾವುದೇ ನಗರಕ್ಕೆ ಇದನ್ನು ಹೋಲಿಸಲು ಆಗದು ಎಂದು ಮಾಜಿ ಸಂಸದ ಹಾಗೂ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಮಹಾರಾಷ್ಟ್ರದ ಮುಂಬೈ ನಗರ ದೇಶದ ವಾಣಿಜ್ಯ ರಾಜಧಾನಿ. ದೇಶದ ಮೂಲೆ ಮೂಲೆಗಳಿಂದ ಜನ ಬರುತ್ತಾರೆ. ಕರ್ನಾಟಕದವರು ಕೂಡ ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ನೆಲೆಸಿದ್ದರು. ಹಲವು ವರ್ಷಗಳಿಂದಲೂ ಇದು ಪ್ರಮುಖ ನಗರವಾಗಿ ಬೆಳೆದುಬಂದಿದ್ದು, ಇಲ್ಲಿ ಕೊಳೆಗೇರಿಗಳ ಸಂಖ್ಯೆ ಹೆಚ್ಚಾಗಿದೆ. ಒಂದೊಂದು ಕೊಳಗೇರಿಗಳಲ್ಲಿ 30-40 ಲಕ್ಷ ಮಂದಿ ವಾಸವಾಗಿದ್ದಾರೆ. ಇದರಿಂದಾಗಿ ಇಂತಹ ಭಾಗಗಳಲ್ಲಿ ಕೊರೊನಾ ದಾಳಿಯಿಟ್ಟು ಪ್ರಕರಣಗಳು ಹೆಚ್ಚಾಗುವಂತೆ ಮಾಡಿದೆ. ಕೊಳೆಗೇರಿ ಹೆಚ್ಚಿರುವುದು ಕೋವಿಡ್ ಹೆಚ್ಚಳಕ್ಕೆ ಕಾರಣ ಎಂದರು.

ಒಂದೊಂದು ಮನೆಗಳಲ್ಲಿ 5 - 6 ಮಂದಿ ವಾಸವಾಗುವ ವ್ಯವಸ್ಥೆ ಮುಂಬೈನಲ್ಲಿ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಹಾಗೂ ವೃತ್ತಿಗಳಲ್ಲಿ ಕಾರ್ಯನಿರ್ವಹಿಸುವರು ಎಲ್ಲಿ ಒಟ್ಟಾಗಿ ಇರುತ್ತಾರೆ. ಸಣ್ಣ ಸಣ್ಣ ಮನೆಗಳು ಹೆಚ್ಚಿರುವುದರಿಂದ ರೋಗ ದೊಡ್ಡ ಮಟ್ಟದಲ್ಲಿ ವ್ಯಾಪಿಸಿದೆ. ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಸಾಕಷ್ಟು ಕ್ರಮ ಕೈಗೊಂಡಿದೆ. ಕೇಂದ್ರ ಸರ್ಕಾರದ ಅಸಹಕಾರ ಕೂಡ ಇಲ್ಲಿನ ಸಮಸ್ಯೆ ಹೆಚ್ಚಳಕ್ಕೆ ಕಾರಣ.

ಇಲ್ಲಿನ ನಾಗರಿಕರನ್ನು ಅವರ ರಾಜ್ಯಗಳಿಗೆ ಕಳುಹಿಸಿಕೊಡಲು ಸರ್ಕಾರ ಆರಂಭದಲ್ಲಿಯೇ 150 ರೈಲುಗಳನ್ನು ನೀಡುವಂತೆ ಕೇಳಿಕೊಂಡಿತ್ತು. ಆದರೆ, ಸರ್ಕಾರ ಇಂಥ ಸ್ಥಳಕ್ಕೂ ಕೂಡ ಕೇವಲ 50 ರೈಲನ್ನು ನೀಡಲಾಗಿತ್ತು. ಕೊರೊನಾ ವ್ಯಾಪಕವಾಗಿ ಹಬ್ಬುವ ಮುನ್ನವೇ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಂಡು ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆಗಿದ್ದರೆ ಈ ಮಟ್ಟಕ್ಕೆ ಮಹಾರಾಷ್ಟ್ರದಲ್ಲಿ ಪ್ರಕರಣಗಳು ಹೆಚ್ಚುತ್ತಿರಲಿಲ್ಲ. ಪ್ರತಿಯೊಬ್ಬರೂ ತಮ್ಮ ತವರನ್ನು ತಲುಪಿಕೊಳ್ಳುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ಕಾಂಗ್ರೆಸ್ ಮುಖಂಡರಾದ ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ವಿಎಸ್​ ಉಗ್ರಪ್ಪ

ಮೇ 31 ರಂದು ಮುಂಬೈ ಮಹಾನಗರವೊಂದರಲ್ಲೇ 39,000ಕ್ಕೂ ಹೆಚ್ಚು ಪ್ರಕರಣ ಇದ್ದವು. ಒಟ್ಟು ಮಹಾರಾಷ್ಟ್ರದ ಪ್ರಕರಣಗಳಲ್ಲಿ ಹೆಚ್ಚು ಪ್ರಕರಣಗಳು ಎದ್ದು ಇದು ಕೊಳಗೇರಿಗಳಲ್ಲೇ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇನ್ನು ಪುಣೆಯಲ್ಲೂ ಸಾಕಷ್ಟು ಹೆಚ್ಚು ಪ್ರಕರಣಗಳಿದ್ದು, ಇಲ್ಲಿ ಕೂಡ ಕರ್ನಾಟಕದಿಂದ ತೆರಳಿರುವವರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ.

ಇಲ್ಲಿಯೂ ಕೊಳಗೇರಿಗಳು ಆಗಿದ್ದು 10 ಲಕ್ಷಕ್ಕೂ ಹೆಚ್ಚು ಮಂದಿ ಒಂದೊಂದು ಕಡೆ ವಾಸವಾಗಿದ್ದಾರೆ. ಇಲ್ಲಿ ಕೂಡ ಕೊಳಗೇರಿಗಳಲ್ಲಿ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇಲ್ಲಿನ ಸರ್ಕಾರಗಳ ಜೊತೆ ಸ್ವಯಂ ಸೇವಾ ಸಂಸ್ಥೆಗಳು, ಶಿವಸೇನೆ, ಕಾಂಗ್ರೆಸ್ ಮತ್ತು ಎನ್​​ಸಿಪಿ ಪಕ್ಷಗಳು ಕೂಡ ಸಹಾಯ ನೀಡುವ ಕಾರ್ಯದಲ್ಲಿ ಕೈ ಜೋಡಿಸಿದೆ. ಎಲ್ಲಾ ಪಕ್ಷಗಳು ಇಲ್ಲಿ ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದು ಜನಸೇವೆಯಲ್ಲಿ ತೊಡಗಿವೆ. ಹೀಗಾಗಿ ಯಾರ ಬಗ್ಗೆ ನಾನು ಇಲ್ಲಿ ಆರೋಪ ಮಾಡಲು ಇಚ್ಚಿಸುವುದಿಲ್ಲ. ಇಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಪರಿಹಾರ ಕ್ರಮ ಕೈಗೊಳ್ಳುವ ಕಾರ್ಯ ಆಗಬೇಕಿದ್ದು ಆ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದರು.

Last Updated : Jun 1, 2020, 5:50 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.