ETV Bharat / state

ಎಸ್ಐಟಿ ವಿಚಾರಣೆ ಮುಕ್ತಾಯ.. ನಾಳೆ ವಿಚಾರಣೆಗೆ ಹಾಜರಾಗುವಂತೆ ಯುವತಿಗೆ ನೋಟಿಸ್​

ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಆದರೆ, ಅದರ ಬದಲಾಗಿ ನೀನು ನನ್ನ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಹೇಳಿದರು. ರಮೇಶ್ ಜಾರಕಿಹೊಳಿಯನ್ನು ಟಿವಿಗಳಲ್ಲಿ ನೋಡಿದ್ದೆ. ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದೆ..

sit-ends-its-enquiry-in-link-with-cd-case-notice-given-to-women
ಎಸ್ಐಟಿ ವಿಚಾರಣೆ ಮುಕ್ತಾಯ.
author img

By

Published : Mar 30, 2021, 8:24 PM IST

Updated : Mar 30, 2021, 8:57 PM IST

ಬೆಂಗಳೂರು : ಸಿಡಿ ಪ್ರಕರಣ ಸಂಬಂಧ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿರುವ ಯುವತಿಯನ್ನು ಎಸ್ಐಟಿ ಅಧಿಕಾರಿಗಳು ಆಡುಗೋಡಿಯ ಟೆಕ್ನಿಕಲ್ ಸೆಂಟರ್​​​​ಗೆ ಕರೆ ತಂದಿದ್ದಾರೆ‌.
ಸಿಆರ್‌ಪಿಸಿ 161 ಅಡಿ ತನಿಖಾಧಿಕಾರಿ ಎಸಿಪಿ ಕವಿತಾ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ವಿಚಾರಣೆ ಮುಗಿಸಿರುವ ತನಿಖಾಧಿಕಾರಿಗಳು ನಾಳೆ ತಮ್ಮ‌ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ‌. ಆಡುಗೋಡಿ ಟೆಕ್ನಿಕಲ್ ಸೆಲ್ ಬಳಿ ಯುವತಿ ಪರ ವಕೀಲ ಜಗದೀಶ್ ಮಾತನಾಡಿ, ನ್ಯಾಯಾಲಯದಲ್ಲಿ 164ರಡಿ ಯುವತಿ ಹೇಳಿಕೆ ನೀಡಿದ್ದಾಳೆ. ಸದ್ಯ ಅಧಿಕಾರಿಗಳು ಯುವತಿಯ ವಾಯ್ಸ್ ಸ್ಯಾಂಪಲ್ ಪಡೆಯುತ್ತಾರೆ. ಯುವತಿಯನ್ನ ಅರೆಸ್ಟ್ ಮಾಡುವ ಬಗ್ಗೆ ಮಾಹಿತಿಯಿಲ್ಲ ಎಂದರು.

ಸಿಡಿ ಪ್ರಕರಣ ಕುರಿತು ಯುವತಿ ಪರ ವಕೀಲರ ಪ್ರತಿಕ್ರಿಯೆ

ನಾವು ಯುವತಿಯನ್ನು ಎಸ್ಐಟಿಗೆ ಹ್ಯಾಂಡ್ ಓವರ್ ಮಾಡಿಲ್ಲ. ತನಿಖಾಧಿಕಾರಿಗಳ ಮುಂದೆ 161 ಹೇಳಿಕೆ ಮಾಡಬೇಕೆಂದು ಮನವಿ ಮಾಡಿದ್ದೆವು. ಅದರಂತೆ ತನಿಖಾಧಿಕಾರಿಗಳು ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ.

ಯುವತಿಯನ್ನು ಪೊಲೀಸರು ವಶಕ್ಕೆ ಪಡೆಯುವುದಕ್ಕೆ ಆಗುವುದಿಲ್ಲ. ಕೇವಲ ಕಬ್ಬನ್ ಪಾರ್ಕ್ ದೂರಿನನ್ವಯ ಮಾತ್ರ 161 ಸ್ಟೇಟ್‌ಮೆಂಟ್ ಎಸ್ಐಟಿ ಮಾಡಲಿದೆ. ನಾವು ನ್ಯಾಯಾಲಯದ ಮುಂದೆ ಯುವತಿಯನ್ನ ಹಾಜರು ಮಾಡಿದ್ದೇವೆ ಎಂದರು.

ಜಡ್ಜ್ ಮುಂದೆ‌ ಯುವತಿ ಹೇಳಿದ್ದೇನು? : ನ್ಯಾಯಾಧೀಶರ ಮುಂದೆ ಸಿಆರ್​ಪಿಸಿ 164 ಅಡಿ ಯುವತಿ ದೂರು ಕೊಟ್ಟಂತೆ ಅದೇ ರೀತಿ ಹೇಳಿಕೆ ನೀಡಿರುವ ಸಾಧ್ಯತೆಯೇ ಹೆಚ್ಚಿದೆ. ಬಹುತೇಕ ಪ್ರಕರಣಗಳಲ್ಲಿ ಸಂತ್ರಸ್ತರು ತಾವು ನೀಡಿದ ದೂರಿನಲ್ಲಿ ಉಲ್ಲೇಖಿತ ಅಂಶಗಳನ್ನೇ ನ್ಯಾಯಾಲಯದ ಮುಂದೆ ಹೇಳಿಕ ನೀಡಿರುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೇಲೆ ನೇರ ಆರೋಪಿಸಲಾಗಿದೆ. ಕೆಲಸ ಕೊಡಿಸುವುದಾಗಿ ನಂಬಿಸಿ ನನಗೆ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ನಾನು ಬೆಂಗಳೂರು ನಗರದಲ್ಲಿ ಉದ್ಯೋಗ ಹುಡುಕಿಕೊಂಡು ಬಂದು ನೆಲೆಸಿದೆ.

ಕಿರುಚಿತ್ರ ಮಾಡುವ ಸಲುವಾಗಿ ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಭೇಟಿ ಮಾಡಿ ಅವರು ನನ್ನ ಮೊಬೈಲ್ ನಂಬರ್ ಪಡೆದು ಕರೆ ಮಾಡುವುದಾಗಿ ತಿಳಿಸಿದರು. ನಂತರ ಅವರು ಕರೆ ಮಾಡಿ ನನ್ನ ಬಗ್ಗೆ ಕುಟುಂಬದ ಬಗ್ಗೆ ವಿಚಾರಿಸಿದ್ದರು ಎಂಬ ಮಾಹಿತಿ ನ್ಯಾಯಾಧೀಶರ ಮುಂದೆ ಹೇಳಿದ್ದಾಳೆ ಎನ್ನಲಾಗಿದೆ.

ಅಷ್ಟೇ ಅಲ್ಲ, ಸಲುಗೆಯಿಂದ ಮಾತನಾಡಲು ರಮೇಶ್ ಜಾರಕಿಹೊಳಿ ಆರಂಭಿಸಿದರು. ಸಚಿವರು ನನ್ನನ್ನು ಅಷ್ಟು ಕಾಳಜಿಯಿಂದ ಮಾತನಾಡಿಸಿದ್ದು, ನನಗೆ ತುಂಬಾ ಖುಷಿ ಆಗಿ ಅವರನ್ನು ಗೌರವದಿಂದ ಮಾತನಾಡಿಸಿದೆ. ಆಗಾಗ ನನಗೆ ಕರೆ ಮಾಡಿ ಮಾತನಾಡಲು ಆರಂಭಿಸಿದರು.

ನನಗೆ ತಮ್ಮ ಪ್ರಭಾವ ಬಳಸಿ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿದರು. ಆದರೆ, ಅದರ ಬದಲಾಗಿ ನೀನು ನನ್ನ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಬೇಕು ಎಂದು ಹೇಳಿದರು. ರಮೇಶ್ ಜಾರಕಿಹೊಳಿಯನ್ನು ಟಿವಿಗಳಲ್ಲಿ ನೋಡಿದ್ದೆ. ಮಂತ್ರಿ ಈ ರೀತಿ ಹೇಳಿದ ಮೇಲೆ ಕೆಲಸ ಕೊಟ್ಟೇ ಕೊಡಿಸುತ್ತಾರೆ ಎಂದು ನಂಬಿದೆ.

ನನ್ನ ಬಳಿ ಕೊಡಲು ಲಕ್ಷಾಂತರ ಹಣವಿದೆ ಎಂದಿದ್ದರು. ಜೊತೆಗೆ ಸಹಕರಿಸಿ ಖುಷಿ ನೀಡಬೇಕು ಎಂದು ಕೇಳಿದ್ದರಿಂದ, ಅವರ ಮಾತು ನಂಬಿ ಹೇಳಿದಂತೆ ನಡೆದುಕೊಂಡು ಬಂದೆ ಎಂಬ ಮಾಹಿತಿ ಜಡ್ಜ್​ ಮುಂದೆ ತಿಳಿಸಿದ್ದಾಳೆ ಎನ್ನಲಾಗಿದೆ.

ಇದನ್ನೂ ಓದಿ: ಗುರುನಾನಕ್​​ ಭವನದ ವಿಶೇಷ ಕೋರ್ಟ್ ಹಾಲ್‌​ಗೆ 'ಸಿಡಿ'ದ ಯುವತಿ ಹಾಜರು

Last Updated : Mar 30, 2021, 8:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.