ETV Bharat / state

ಸಿಲಿಕಾನ್ ಸಿಟಿಯಲ್ಲಿ ಮಳೆ ಅವಾಂತರ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಆಕ್ರೋಶ

ಬೆಂಗಳೂರಿನ ಕೆ.ಆರ್.ಪುರಂ ಸೇರಿದಂತೆ ನಗದ ವಿವಿಧೆಡೆ ಭಾರಿ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿದೆ. ನೀರಿನ ಹರಿವಿಗೆ ವ್ಯವಸ್ಥಿತ ಮಾರ್ಗವಿಲ್ಲದೆ ಈ ಅವಾಂತರ ಉಂಟಾಗುತ್ತಿದೆ ಎಂದು ಸ್ಥಳೀಯರು ಬಿಬಿಎಂಪಿ, ಹಾಗೂ ಜನಪ್ರತಿನಿಧಗಳ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರಿ ಮಳೆಗೆ ಮನೆಗೆ ನುಗ್ಗಿದ ನೀರು
author img

By

Published : Oct 5, 2019, 7:47 AM IST

Updated : Oct 5, 2019, 9:17 AM IST

ಬೆಂಗಳೂರು: ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಕೆ.ಆರ್.ಪುರಂನ ವಿಜನಾಪುರ ವಾರ್ಡಿನ ಅಂಬೇಡ್ಕರ್ ನಗರ ಸೇರಿದಂತೆ ಹಲವು ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರು ಹರಿದು ಹೋಗಲು ವ್ಯವಸ್ಥಿತ ಚರಂಡಿಗಳಿಲ್ಲದೆ ಈ ಅವಾಂತರ ಸೃಷ್ಟಿಯಾಗಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.

ಸಿಲಿಕಾನ್​ ಸಿಟಿಯಲ್ಲಿ ಸುರಿದ ಭಾರಿ ಮಳೆಗೆ ಮನೆಗೆ ನುಗ್ಗಿದ ನೀರು

ಪ್ರತಿ ಭಾರಿ ಮಳೆ ಬಂದಾಗಲೂ ಇದೆ ಅವ್ಯವಸ್ಥೆ ಉಂಟಾಗುತ್ತದೆ. ಜನರೆಲ್ಲ ರಾತ್ರಿಯಿಡಿ ಜಾಗರಣೆ ಮಾಡಬೇಕಾಗುತ್ತದೆ. ಹಲವು ಭಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ಆರೋಪಿಸಿದರು.

ಇನ್ನೂ ದೇವಸಂದ್ರ, ಬಸವನಪುರ, ವಿಜ್ಞಾನ ನಗರ, ರಾಮಮೂರ್ತಿ ನಗರ, ಹೂಡಿ, ಗರುಡಾಚಾರಪಾಳ್ಯ ಸೇರಿದಂತೆ ಇತರ ವಾರ್ಡ್​ಗಳಲ್ಲಿ ಒಳ ಚರಂಡಿ ಮತ್ತು ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಸ್ಥಳೀಯ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದರು.

Intro:ಸಿಲಿಕಾನ್ ಸಿಟಿಯಲ್ಲಿ ಮಳೆ ತಂದ ಅವಾಂತರ

ಕೆ.ಆರ್.ಪುರ:

ವಿಜನಾಪುರ ವಾರ್ಡಿನ ಅಂಬೇಡ್ಕರ್ ನಗರ, ಸೇರಿದಂತೆ ಹಲವು ಭಾಗಗಳಲ್ಲಿ ಬಾರಿ ಮಳೆ‌ಯಿಂದ ಮನೆಗಳಿಗೆ ನೀರು ನುಗ್ಗಿ ತೀವ್ರ ತೊಂದರೆ ಅನುಭವಿಸುವಂತಾಗಿದ್ದು, ಪ್ರತಿ ಮಳೆಗೂ‌ ಈ ರೀತಿ ಸಮಸ್ಯೆಗಳನ್ನು ಎದುರಿಸು ವಂತಾಗಿದೆ ಎಂದು ಅಂಬೇಡ್ಕರ್ ನಗರ ನಿವಾಸಿ ವಿಜಯ್ ದೂರಿದರು.
ಸರಿಯಾದ ಚರಂಡಿ ವ್ಯವಸ್ಥೆ ಮಾಡದ ಕಾರಣ ನೀರು ‌ಮನೆಗಳಿಗೆ ನೀರು ನುಗ್ಗುತ್ತಿವೆ.

ಮಳೆ ಬಂದ ಪ್ರತಿ ಸಲ ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ಉಂಟಾಗುತ್ತದೆ ಈ ಬಗ್ಗೆ ಹಲವಾರು ಬಾರಿ ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಮಾಡಿದರೂ‌ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

Body:ಇನ್ನೂ ದೇವಸಂದ್ರ, ಬಸವನಪುರ, ವಿಜ್ಞಾನ ನಗರ, ರಾಮಮೂರ್ತಿ ನಗರ, ಹೂಡಿ, ಗರುಡಾಚಾರಪಾಳ್ಯ ಸೇರಿದಂತೆ ಇತರೆ ವಾರ್ಡ್ ಗಳಲ್ಲಿ ಒಳ ಚರಂಡಿ ಮತ್ತು ಮೋರಿ ನೀರು ಉಕ್ಕಿ ರಸ್ತೆಗೆ ಬಂದ ಪರಿಣಾಮ ಕೆರೆಗಳನ್ನು ಮೀರಿಸುವಂತಾಗಿದೆ.
Conclusion:ಸ್ಥಳಿಯ ಬಿಬಿಎಂಪಿ, ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಮನ್ಯ ಜನರು ಮಳೆ ಬಂದ ದಿನ ಮನೆಗಳಿಗೆ ಮಳೆ ನೀರುನುಗ್ಗಿ ಊಟ ತಿಂಡಿ ಇಲ್ಲದೆ ಉಪವಾಸ ದಿಂದ ರಾತ್ರಿ ಇಡೀ ಜಾಗರಣೆ ಮಾಡ ಬೇಕಾಗುತ್ತದೆ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
Last Updated : Oct 5, 2019, 9:17 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.