ಬೆಂಗಳೂರು : ಬಿಎಂಟಿಸಿಯು ತನ್ನ ಮಾಸಿಕ ಪಾಸ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಈ ಹಿಂದೆ ಮಾಸಿಕ ಪಾಸ್ ಕ್ಯಾಲೆಂಡರ್ ಆಧಾರದಲ್ಲಿ ವಿತರಣೆ ಮಾಡಲಾಗ್ತಿತ್ತು. ಇದೀಗ ದಿನಾಂಕವಾರು ಮಾಸಿಕ ಪಾಸ್ ವಿತರಿಸಲು ಬಿಎಂಟಿಸಿ ಮುಂದಾಗಿದೆ.
ಈ ಹಿಂದಿನ ನಿಯಮದ ಪ್ರಕಾರ ತಿಂಗಳ ಯಾವುದೇ ದಿನಾಂಕದಲ್ಲಿ ಪಾಸ್ ಕೊಂಡಿದ್ದರೂ ಪಾಸ್ ಅವಧಿ 30ಕ್ಕೆ ಮುಕ್ತಾಯವಾಗುತ್ತಿತ್ತು. ಇದೀಗ ಹೊಸ ನಿಯಮದ ಪ್ರಕಾರ ಯಾವ ದಿನಾಂಕದಂದು ಪಾಸ್ ಕೊಂಡರೂ ಮುಂದಿನ ತಿಂಗಳು ಅದೇ ದಿನಾಂಕದವರೆಗೂ ಪಾಸ್ ಚಾಲ್ತಿಯಲ್ಲಿ ಇರಲಿದೆ.
ಬಿಎಂಟಿಸಿಯ ಸಾಮಾನ್ಯ ಸಾರಿಗೆ, ವಜ್ರ ಮತ್ತು ವಾಯುವಜ್ರ ಬಸ್ ಮಾಸಿಕ ಪಾಸ್‌ಗೆ ಹೊಸ ನಿಯಮ ಅನ್ವಯವಾಗಲಿದೆ. ಜುಲೈ 1ರಿಂದ ಬಿಎಂಟಿಸಿಯ ಹೊಸ ನಿಯಮ ಜಾರಿ ಆಗಲಿದೆ.
ಹೊಸ ಪಾಸ್ ನಿಯಮದಂತೆ ಬಿಎಂಟಿಸಿ ವಿತರಿಸೋ ಗುರುತಿನ ಚೀಟಿ ಅಗತ್ಯವಿಲ್ಲ, ಬದಲಾಗಿ ಮಾಸಿಕ ಪಾಸ್‌ನೊಂದಿಗೆ ವೈಯಕ್ತಿಕ ಗುರುತಿನ ಚೀಟಿ ಬಳಸಿ ಪಾಸ್ ತೋರಿಸಿ ಪ್ರಯಾಣಕ್ಕೆ ಅವಕಾಶ ಇದೆ. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪ್ಯಾನ್ ಕಾರ್ಡ್, ಮತದಾರರ ಗುರುತಿನ ಚೀಟಿ ಇತರೆ ಐಡಿ ಕಾರ್ಡ್ ಇದ್ದರೆ ಪ್ರಯಾಣಿಸಲು ಅವಕಾಶ ಇರಲಿದೆ.
ಇದನ್ನೂ ಓದಿ: IPLನಲ್ಲಿಂದು GT vs RR ಮೊದಲ ಕ್ವಾಲಿಫೈಯರ್: ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಗುಜರಾತ್