ETV Bharat / state

ಬೆಂಗಳೂರಿನ ಬಾಲಕಿ ಮೇಲೆ ಎಂಟು ಜನರಿಂದ ಗ್ಯಾಂಗ್​ ರೇಪ್​.. ವಿಡಿಯೋ ರೆಕಾರ್ಡ್ - ಬೆಂಗಳೂರು ಅಪರಾಧ ಸುದ್ದಿ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಲಕಿ ಮೇಲೆ ನಿರಂತರ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ.

Girl raped by many person in Bengaluru, Bengaluru crime news, Bengaluru news, ಬೆಂಗಳೂರಿನಲ್ಲಿ ಬಾಲಕಿ ಮೇಲೆ ಅತ್ಯಾಚಾರ, ಬೆಂಗಳೂರಿನಲ್ಲಿ ಹಲವರಿಂದ ಬಾಲಕಿ ಮೇಲೆ ಅತ್ಯಾಚಾರ, ಬೆಂಗಳೂರು ಅಪರಾಧ ಸುದ್ದಿ, ಬೆಂಗಳೂರು ಸುದ್ದಿ,
ಬೆಂಗಳೂರಿನ ಬಾಲಕಿ ಮೇಲೆ ಎಂಟು ಜನರಿಂದ ನಿರಂತರ ಅತ್ಯಾಚಾರ
author img

By

Published : Apr 9, 2022, 12:27 PM IST

Updated : Apr 9, 2022, 3:57 PM IST

ಬೆಂಗಳೂರು : ನಗರದ ಜನತೆ ಬೆಚ್ಚಿ ಬೀಳುವಂತ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತೆಯ ಮೇಲೆ 8 ಜನ ನಿರಂತರ ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.

ಏನಿದು ಘಟನೆ: ಮೊದಲು ಇಬ್ಬರು ಆರೋಪಿಗಳು 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ಬಳಿಕ ವಿಚಾರ ತಿಳಿಸಿದರೆ ಕೊಲೆ ಮಾಡೋದಾಗಿ ಬೆದರಿಸಿ ಕಳಿಸಿದ್ದಾರೆ. ನಂತರ ವಿಡಿಯೋ ತೋರಿಸಿ ಬೆದರಿಸಿ ಎಂಟು ಜನ ಲೈಂಗಿಕ‌ ದೌರ್ಜನ್ಯ ಎಸಗಿದ್ದಾರೆ.

ಓದಿ: ಮೊದಲ ರಾತ್ರಿಯೇ ಅತ್ಯಾಚಾರ ನಡೆದ ಮಾಹಿತಿ ಬಿಚ್ಚಿಟ್ಟ ವಧು: ವರ ಮಾಡಿದ್ದೇನು?

ಕಬಾಬ್ ಖಾರ ಇತ್ತು: ಮನೆಗೆ ಬಂದಾಗ ಅಳುತ್ತಿದ್ದ ಬಾಲಕಿಯನ್ನ ಪೋಷಕರು ಪ್ರಶ್ನಿಸಿದ್ದು, ಆರಂಭದಲ್ಲಿ ಹೆದರಿದ್ದ ಬಾಲಕಿ ಕಬಾಬ್ ಖಾರ ಇತ್ತು, ಅದಕ್ಕೆ ಅಳುತ್ತಿದ್ದೆ ಎಂದಿದ್ದಾಳೆ. ನಂತರ ನಿಧಾನವಾಗಿ ವಿಚಾರಿಸಿದಾಗ ವಿಚಾರ ಬಯಲಾಗಿದೆ. ತಕ್ಷಣ ಬಾಲಕಿಯ ತಾಯಿ ಏಪ್ರಿಲ್ 5ರಂದು ಯಲಹಂಕ ಠಾಣೆಗೆ ದೂರು ನೀಡಿದ್ದಾರೆ.

ಬಂಧಿತರಲ್ಲಿ ಇಬ್ಬರು ಅಪ್ರಾಪ್ತರು: ಕೂಡಲೇ ಪೋಕ್ಸೋ, ಅತ್ಯಾಚಾರ, ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಒಟ್ಟು 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರದಲ್ಲಿ ಇಬ್ಬರು ಅಪ್ರಾಪ್ತರೂ ಇದ್ದಾರೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

ಪ್ರಕರಣ ದಾಖಲು: ಈ ಘಟನೆ ಕುರಿತು ಯಲಹಂಕ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಉಳಿದ ಇಬ್ಬರು ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದಾರೆ.

Last Updated : Apr 9, 2022, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.