ETV Bharat / state

ಚಿನ್ನಾಭರಣಕ್ಕಾಗಿ ಮನೆ ಬೀಗ ಮುರಿದ ಕಳ್ಳರಿಗೇ ಶಾಖ್.. ಅಸಲಿಗೆ ಅಲ್ಲಿ ಏನಾಯ್ತು?

ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ, ಚಿನ್ನಾಭರಣಕ್ಕಾಗಿ ಶೋಧ ನಡೆಸಿ ಏನು ಸಿಗದೆ ಎಟಿಎಂ ಕಾರ್ಡ್ ಕದ್ದೊಯ್ದ ಕಳ್ಳರು.

ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ
author img

By

Published : Apr 28, 2019, 9:39 PM IST

ದೊಡ್ಡಬಳ್ಳಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣಕ್ಕಾಗಿ ಮನೆಯನ್ನೆಲ್ಲ ಹುಡುಕಾಡಿದ್ದು ಕೊನೆಗೆ ಏನೂ ಸಿಗದಿದ್ದಕ್ಕೆ ಎಟಿಎಂ ಕಾರ್ಡ್ ಕದ್ದೊಯ್ದ ಘಟನೆ ನಗರದಲ್ಲಿ ನಡೆದಿದೆ.

ಮನೆಯಲ್ಲಿ ಯಾರೂ ಇರದ ವೇಳೆ ಮನೆ ಬೀಗ ಮುರಿದು ಕಳ್ಳತನ

ನಗರದ ನಿವಾಸಿ ಸುರೇಶ್ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಮನೆಗೆ ಬೀಗ ಹಾಕಿಕೊಂಡು ಮದುವೆಗೆಂದು ಕುಟುಂಬ ಸಮೇತ ಹೋಗಿದ್ದ ಹಿನ್ನೆಲೆ ಯಾರೂ ಇಲ್ಲದ್ದನ್ನು ಗಮನಿಸಿದ ಕಳ್ಳರು ಕೈಚಳಕ ತೋರಿಸಲು ಮುಂದಾಗಿದ್ದಾರೆ. ಚಿನ್ನಾಭರಣಕ್ಕಾಗಿ ಮನೆಯನ್ನೆಲ್ಲಾ ಜಾಲಾಡಿದ್ದು ಏನೂ ಸಿಗದಿದ್ದಾಗ ಕೊನೆಗೆ ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದಾರೆ.

ಎಟಿಎಂನಿಂದ 30 ಸಾವಿರ ಡ್ರಾ ಮಾಡಿದ್ದು, ಮದುವೆಗೆ ಒಡವೆಗಳನ್ನೆಲ್ಲ ತೆಗೆದುಕೊಂಡು ಹೋಗಿದ್ದರಿಂದ ಯಾವುದೇ ಒಡವೆ ಕಳ್ಳರ ಕೈಗೆ ಸಿಕ್ಕಿಲ್ಲ. ಪ್ರಕರಣ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಬೀಗ ಮುರಿದು ಕಳ್ಳತನ

ಚಿನ್ನಾಭರಣಕ್ಕಾಗಿ ಶೋಧ ಏನು ಸಿಗದೆ ಎಟಿಎಂ ಕಾರ್ಡ್ ಕದ್ಯೊಯ್ದ ಕಳ್ಳರು
Body:ದೊಡ್ಡಬಳ್ಳಾಪುರ : ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣಕ್ಕಾಗಿ ಮನೆಯನ್ನೇಲ್ಲ ಹುಡುಕಾಡಿದ್ದಾರೆ. ಕೊನೆಗೆ ಏನು ಸಿಗದೆ ಎಟಿಎಂ ಕಾರ್ಡ್ ಕದ್ಯೊಯ್ದಿದ್ದಾರೆ.

ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರ ನಗರದ ಕೆ.ಎನ್.ಆರ್ ಲೋಕದ ಬಳಿ ಘಟನೆ ನಡೆದಿದ್ದು. ಸುರೇಶ್ ಎಂಬುವವರ ಮನೆಯಲ್ಲಿ ಕಳ್ಳತನ ಕೃತ್ಯ ನಡೆದಿದೆ. ಮೈಸೂರಿನಲ್ಲಿ ಸಂಬಂಧಿಕರ ಮದುವೆಗೆಂದು ಸುರೇಶ್ ಕುಟುಂಬ ಮನೆಗೆ ಬೀಗ ಹಾಕಿ ಹೋಗಿದ್ದರು. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿದ ಕಳ್ಳರು ಮನೆಯ ಬೀಗ ಮುರಿದು ಒಳ ನುಗ್ಗಿದ್ದಾರೆ.

ಹಣ ಒಡವೆಗಳಿಗಾಗಿ ಮನೆಯಲ್ಲ ಹುಡುಕಾಡಿದ್ದಾರೆ. ಮನೆಯಲ್ಲಿದ್ದ ವಸ್ತುಗಳೆಲ್ಲ ಚಲ್ಲಾಪಿಲ್ಲಿ ಬಿಸಾಡಿ ಚಿನ್ನಾಭರಣಕ್ಕಾಗಿ ಶೋಧಿಸಿದ್ದಾರೆ ಆದರೆ ಹಣ ಆಗಲಿ ಒಡವೆಯಾಗಲಿ ಕಳ್ಳರಿಗೆ ಸಿಕ್ಕಿಲ್ಲ ಕೊನೆಗೆ
ಎಟಿಎಂ ಕದ್ದು ಪರಾರಿಯಾಗಿದ್ದಾರೆ.
ಎಟಿಎಂ ನಿಂದ 30 ಸಾವಿರ ಡ್ರಾ ಮಾಡಿದ್ದಾರೆ.

ಸಂಬಂಧಿಗಳ ಮದುವೆಯ ಹಿನ್ನಲೆ ಮೈಸೂರಿಗೆ ಹೋಗಿದ್ದ ಮನೆಯವರು ಮನೆಯಲ್ಲಿದ್ದ ಒಡವೆಗಳನ್ನೆಲ್ಲ ತಗೆದುಕೊಂಡು ಹೋಗಿದ್ದರು ಇದರಿಂದ ಯಾವುದೇ ಒಡವೆ ಕಳ್ಳರ ಕೈಗೆ ಸಿಕ್ಕಿಲ್ಲ.ದೊಡ್ಡಬಳ್ಳಾಪುರ ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.