ಬೆಂಗಳೂರು: ಸಚಿವ ಸ್ಥಾನ ಕೊಡುತ್ತೇವೆ ಎಂದು ಸಿಎಂ ಹೇಳಿದ್ದಾರೆ. ಯಾವ ಸ್ಥಾನ ಕೊಡುತ್ತಾರೆ ಅನ್ನೋದು ಗೊತ್ತಿಲ್ಲ. ನಾನು ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ ಎಂದು ಶಾಸಕ ಶಿವರಾಂ ಹೆಬ್ಬಾರ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿ ಮೇಲಿದ್ದ ಜನರ ನಂಬಿಕೆ, ನಾನು ಮಾಡಿದ್ದ ಅಭಿವೃದ್ಧಿ ಕೆಲಸ ನನ್ನ ಕೈ ಹಿಡಿದಿದೆ. ನಾವು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇವೆ. ಉತ್ತಮ ಮತಗಳ ಅಂತರದಿಂದ ಗೆದ್ದಿದ್ದೇವೆ. ಬೇರೆ ಯಾವುದರ ಬಗ್ಗೆಯೂ ನಾನು ಮಾತನಾಡಲ್ಲ ಎಂದರು.
ದೇಶಪಾಂಡೆಯವರು ಸೋಲಿಸೋ ಪ್ರಯತ್ನ ಮಾಡಿದ್ದು ಗೊತ್ತಿಲ್ಲ. ಪಾರ್ಟಿ ಬಿಟ್ಟ ಮೇಲೆ ಎಲ್ಲವೂ ಮುಗಿದ ಕಥೆ ಎಂದರು.