ETV Bharat / state

ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಬೇಡಿಕೆ ಈಡೇರಿಕೆ ಭರವಸೆ; ಪ್ರತಿಭಟನೆ ವಾಪಸ್

ಅಂಗ‌ನವಾಡಿ ಕಾರ್ಯಕರ್ತೆಯರ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೈಗೊಂಡಿದ್ದ ಪ್ರತಿಭಟನೆಗೆ ಆಯಾ ಇಲಾಖೆಗಳ‌ ಸಚಿವರು ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿದ್ದರಿಂದ ಹೋರಾಟ ಕೈಬಿಡಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.

shivaram-hebbar-promises-to-fullfill-the-various-demands-of-the-workers
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್
author img

By

Published : Mar 4, 2021, 10:17 PM IST

ಬೆಂಗಳೂರು: ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರ ಜೊತೆಗೆ ಕಾರ್ಮಿಕ ಸಂಘಟನೆಗಳು ವಿವಿಧ ಬೇಡಿಕೆ ಈಡೇರಿಕೆಗಾಗಿ ಒತ್ತಾಯಿಸಿ ನಡೆಸುತ್ತಿರುವ ಬೃಹತ್ ಪ್ರತಿಭಟನಾ ಸ್ಥಳಕ್ಕೆ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿದ್ದು, ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಹಮಾಲಿ ಕಾರ್ಮಿಕರ‌‌ ಕಟ್ಟಡ ಹಾಗೂ ನಿರ್ಮಾಣ ಸಂಘ, ಬೀಡಿ ಕಾರ್ಮಿಕರ ಸಂಘಟನೆ, ಮುನಿಸಿಪಲ್ ಕಾರ್ಮಿಕ ಸಂಘಟನೆ ಹಾಗೂ ಅಕ್ಷರ ದಾಸೋಹ ಹಾಗೂ ಆಟೋರಿಕ್ಷಾ ಚಾಲಕ ಸಂಘಗಳ ವತಿಯಿಂದ ರೈತ ವಿರೋಧಿ ಕಾಯ್ದೆ, ಕಾರ್ಮಿಕ ವಿರೋಧಿ ನೀತಿ, ಅಂಗನವಾಡಿ ಕಾರ್ಯಕರ್ತೆಯರ ಖಾಯಂ ಸೇರಿ 32 ಅಂಶವಿರುವ ಬೇಡಿಕೆ ಪತ್ರವನ್ನು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸುಂದರಂ ಅವರು ಸಚಿವರಿಗೆ ನೀಡಿದರು‌.

ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾತನಾಡಿದ್ದಾರೆ

ಕಾನೂನುಗಳಿಂದ ಕಾರ್ಮಿಕರಿಗೆ ನೋವಾಗಿದೆ: ಈ ವೇಳೆ ಮಾತನಾಡಿದ ಸಚಿವರು,‌ ಕಾರ್ಮಿಕರ ಬೇಡಿಕೆಗಳ ಕುರಿತಂತೆ ಕಳೆದ ಒಂದು ವಾರದ ಹಿಂದೆ 32 ಬೇಡಿಕೆಗಳ ಪಟ್ಟಿಯನ್ನು ಸಂಘಟನೆ ಮುಖ್ಯಸ್ಥರು ನನ್ನ ಬಳಿ‌ ಕೊಟ್ಟು ಹೋಗಿದ್ದರು. ಈ ಕೆಲವೇ ಕೆಲವು ಕಾನೂನುಗಳಿಂದ ಕಾರ್ಮಿಕರಿಗೆ ನೋವಾಗಿದೆ. ಕೊರೊನಾದಿಂದ ಈ ನಾಡಿನ ಕಾರ್ಮಿಕರು ಬಹಳಷ್ಟು ಕಷ್ಟ ಪಟ್ಟಿದ್ದಾರೆ. ಈ ಕಾರಣಕ್ಕಾಗಿ 3 ಸಾವಿರ ಕೋಟಿ ರೂಪಾಯಿ ಹಣ ಕೊಟ್ಟಿದ್ದೇವೆ. ಹೊರರಾಜ್ಯದಿಂದ ಬಂದ ಕಾರ್ಮಿಕರಿಗೆ ಫುಡ್ ಕಿಟ್ ನೀಡಿದ್ದೇವೆ‌ ಎಂದರು.

ನಮ್ಮ ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರದೊಂದಿಗೆ ಚರ್ಚೆ ಮಾಡ್ತೀನಿ. ಈಗಾಗಲೇ ನಮ್ಮ‌ ಇಲಾಖೆಯಿಂದ ಸಿಎಂ ಗಮನ ಸೆಳೆಯುವ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅಧಿಕಾರಿಗಳ ಜೊತೆ, ಸರ್ಕಾರದ ಜೊತೆ ಚರ್ಚೆ ಮಾಡಲು ನಿಮ್ಮನ್ನ ಸಹ ಕರೆಯುತ್ತೇನೆ. ಬಜೆಟ್​ನಲ್ಲಿ‌ ಕಾರ್ಮಿಕ ಪರ ಯೋಜನೆಗಳನ್ನು ಸೇರಿಸುವ ಕೆಲಸ ಮಾಡಲಾಗುತ್ತಿದೆ‌‌. ನಿಮ್ಮ ಎಲ್ಲಾ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಕೆಲಸ ಮಾಡುತ್ತೇವೆ ಎಂದು ಆಶ್ವಾಸನೆ ನೀಡಿದರು.

ಆಶ್ವಾಸನೆ ನೀಡಿದ್ದರಿಂದ ಹೋರಾಟ ಕೈಬಿಡಲಾಗಿದೆ : ಅಂಗ‌ನವಾಡಿ ಕಾರ್ಯಕರ್ತೆಯರ ಹಾಗೂ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೈಗೊಂಡಿದ್ದ ಪ್ರತಿಭಟನೆಗೆ ಆಯಾ ಇಲಾಖೆಗಳ‌ ಸಚಿವರು ಸಮಸ್ಯೆ ಪರಿಹರಿಸುವ ಆಶ್ವಾಸನೆ ನೀಡಿದ್ದರಿಂದ ಹೋರಾಟ ಕೈಬಿಡಲಾಗಿದೆ ಎಂದು ಸಿಐಟಿಯು ರಾಜ್ಯಾಧ್ಯಕ್ಷೆ ವರಲಕ್ಷ್ಮೀ ತಿಳಿಸಿದ್ದಾರೆ.

ಪ್ರತಿಭಟನೆ ಬಳಿಕ ಮಾಧ್ಯಮಾಗಳೊಂದಿಗೆ ಮಾತನಾಡಿದ ಅವರು, ಬೇಡಿಕೆ ಕುರಿತಂತೆ ಸಂಬಂಧಿಸಿದ ಸಚಿವರು ಹಾಗೂ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಪತ್ರ ಸ್ವೀಕರಿಸಿದ್ದಾರೆ. ಈ ವೇಳೆ ಹಲವು ಬೇಡಿಕೆ ಈಡೇರಿಸಲು ಒಪ್ಪಿದ್ದಾರೆ ಎಂದರು.

ಓದಿ: ವಿಧಾನಸೌಧ, ವಿಕಾಸಸೌಧ, ಎಂಎಸ್ ಬಿಲ್ಡಿಂಗ್ ನಲ್ಲಿ ಹಣ ಕೊಡದೆ ಕಡತ ವಿಲೇವಾರಿ ಆಗಲ್ಲ: ವೈ.ಎ. ನಾರಾಯಣಸ್ವಾಮಿ

ಸಂಬಳ, ಖಾಯಂ ಕೆಲಸ ಹೊರತುಪಡಿಸಿ ಪಂಚಾಯಿತಿ ನೌಕರರ ಬಾಕಿ ಹಣ ಕೂಡ ಬಿಡುಗಡೆ ಮಾಡೋದಾಗಿ ಹೇಳಿದ್ದಾರೆ.‌ ಇವತ್ತು ಬೇಡಿಕೆ ಈಡೇರಿಸುವ ಭರವಸೆ ಸಿಕ್ಕಿದೆ. ಹಾಗಾಗಿ, ನಾವು ಕಾದು ನೋಡುತ್ತೇವೆ. ಕೆಲವು ಬೇಡಿಕೆಗಳನ್ನು ಪೂರೈಸುವ ಅಧಿಕಾರ ಇಲಾಖಾ ಅಧಿಕಾರಿಗಳ ವ್ಯಾಪ್ತಿಯಲ್ಲಿ ಬರುತ್ತವೆ. ಇನ್ನೂ ಕೆಲವು ಬೇಡಿಕೆಗಳು ಬಜೆಟ್ ಅಡಿಯಲ್ಲಿ ಬರಲಿವೆ. ಬೇಡಿಕೆ ಈಡೇರದಿದ್ದಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.