ETV Bharat / state

ನಾನು‌ ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದೂ ನಿಜ: ಶಿವಪ್ರಕಾಶ್ ಚಿಪ್ಪಿ - ಶಿವಪ್ರಕಾಶ್ ಚಿಪ್ಪಿ, ನಟಿ ರಾಗಿಣಿ

ಡ್ರಗ್ಸ್​ ನಂಟು ಆರೋಪ ಪ್ರಕರಣದ ‌ಮೊದಲ ಆರೋಪಿ ಶಿವಪ್ರಕಾಶ್ ಅಲಿಯಾಸ್ ಚಿಪ್ಪಿ ವಕೀಲರ ಜೊತೆ ಆಗಮಿಸಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದ, ವಿಚಾರಣೆಯ ಬಳಿಕ ಮಾತನಾಡಿ, ನಾನು ರಾಗಿಣಿಯನ್ನು ಇಷ್ಟ ಪಟ್ಟಿದ್ದು ನಿಜ, ಆದರೆ ನನಗೂ ರಾಗಿಣಿಗೂ 3 ವರ್ಷದಿಂದ ಸಂಪರ್ಕವೇ ಇಲ್ಲ, ನನಗೂ ಡ್ರಗ್ಸ್​ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾನೆ.

Shivaprakash Chippi, Actress Ragini
ಶಿವಪ್ರಕಾಶ್ ಚಿಪ್ಪಿ, ನಟಿ ರಾಗಿಣಿ
author img

By

Published : Jan 7, 2021, 8:47 PM IST

Updated : Jan 7, 2021, 9:11 PM IST

ಬೆಂಗಳೂರು: ಸ್ಯಾಂಡಲ್ ವುಡ್ ಡ್ರಗ್ಸ್ ನಂಟಿನ ಆರೋಪ ಸಂಬಂಧ ಕಳೆದ‌ 3 ತಿಂಗಳಿಂದ ನಾಪತ್ತೆಯಾಗಿ ಇಂದು ಪ್ರತ್ಯಕ್ಷನಾಗಿ ಸಿಸಿಬಿ ತನಿಖಾಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದ ಪ್ರಮುಖ ಆರೋಪಿ ಶಿವಪ್ರಕಾಶ್ ಚಿಪ್ಪಿಯನ್ನು 8 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ್ದಾರೆ.

ಸಿಸಿಬಿ ವಿಚಾರಣೆ ಬಳಿಕ ಹೊರಬಂದು ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಪ್ರಕಾಶ್, ರಾಗಿಣಿ ಹಾಗೂ ನನ್ನ ಸಂಬಂಧ ಮುಗಿದು 3 ವರ್ಷ ಆಗಿದೆ. ನಾನು‌ ರಾಗಿಣಿಯನ್ನು ಇಷ್ಟಪಟ್ಟಿದ್ದು ನಿಜ, ಪ್ರಪೋಸ್ ಮಾಡಿದ್ದು ನಿಜ. ರಾಗಿಣಿಯನ್ನು ಮದುವೆ ಆಗಬೇಕು ಅಂತ ನಿರ್ಧಾರ ಸಹ ಮಾಡಿದ್ದೆ ಎಂದಿದ್ದಾನೆ.

ಸಿಸಿಬಿ ತನಿಖಾಧಿಕಾರಿಗಳ ವಿಚಾರಣೆ ಬಳಿಕ ಶಿವಪ್ರಕಾಶ ಚಿಪ್ಪಿ ಪ್ರತಿಕ್ರಿಯೆ

2017ರಲ್ಲಿ ಮದುವೆಯ ಪ್ರಸ್ತಾಪ ಮಾಡಿದಾಗ ಕೆರಿಯರ್ ಬಗ್ಗೆ ಯೋಚನೆ ಮಾಡ್ತಿದ್ದೀನಿ ಬೇಡ ಅಂದಿದ್ದಳು. ಆಗ ಇಬ್ಬರು ಒಪ್ಪಂದದ ಮೇಲೆಯೇ ದೂರ ಆಗಿದ್ದೆವು. ಆಗಿನಿಂದ ನನ್ನ ಸಂಪರ್ಕದಲ್ಲಿ ಆಕೆ‌ ಇಲ್ಲ. ಅದಾದ ಬಳಿಕ ಖಾಸಗಿ ಹೋಟೆಲ್​​ನಲ್ಲಿ ನಡೆದ ಗಲಾಟೆಯಲ್ಲಿಯೂ ನಮ್ಮ‌ ಮೇಲೆ ಪ್ರಕರಣ ಆರೋಪಿಯಾಗಿರುವ ರವಿಶಂಕರ್ ಸುಳ್ಳು ಕೇಸ್ ನೀಡಿದ್ದ. ಪೊಲೀಸರ ವಿಚಾರಣೆಯಲ್ಲಿ ನಮ್ಮ ಮೇಲಿನ‌ ಆರೋಪ ಸುಳ್ಳು ಅಂತ ತೀರ್ಮಾನ ಆಗಿತ್ತು. ಈಗ ಮತ್ತೆ ರವಿಶಂಕರ್ ಬೇಕಂತಲೇ ನನ್ನನ್ನು ಸಿಲುಕಿಸಿದ್ದಾನೆ ಎಂದಿದ್ದಾನೆ.

ನನಗೂ ಡ್ರಗ್ಸ್​ಗೂ ದೂರದ ಮಾತು, ನಾನು‌ ಡ್ರಗ್ಸ್ ಸೇವಿಸಿಲ್ಲ. ತನಿಖಾಧಿಕಾರಿಗಳ ಮುಂದೆ ಎಲ್ಲಾ ಮಾಹಿತಿಗೂ ನಾನು ಉತ್ತರ ನೀಡಿದ್ದೇನೆ. ಇಷ್ಟು ದಿನ ನಾನು ಎಲ್ಲಿಯೂ ನಾಪತ್ತೆಯಾಗಿಲ್ಲ, ನಿರೀಕ್ಷಣಾ ಜಾಮೀನಿಗಾಗಿ ಕಾಯುತ್ತಿದ್ದೆ. ಪ್ರಕರಣ ಕೋರ್ಟ್​​​ನಲ್ಲಿ ಇರುವುದರಿಂದ ಹೆಚ್ಚಿಗೆ ನಾನು ಮಾತನಾಡಲ್ಲ. ನಾಳೆಯೂ ತನಿಖಾಧಿಕಾರಿಗಳು ವಿಚಾರಣೆಗೆ ಬರಲು ಹೇಳಿದ್ದಾರೆ ಅದರಂತೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಶಿವಪ್ರಕಾಶ್ ಹೇಳಿದ್ದಾರೆ.

ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಕೇಸ್: ತುಪ್ಪದ ಬೆಡಗಿಗೆ ಹೊಸ ತಲೆನೋವು

Last Updated : Jan 7, 2021, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.