ETV Bharat / state

ಶೀಘ್ರದಲ್ಲೇ ಶಿವಮೊಗ್ಗ ಏರ್​ಪೋರ್ಟ್ ನಿರ್ಮಾಣ ಕಾರ್ಯ: ಸಿಎಂ - ಶಿವಮೊಗ್ಗ ಏರ್​ಪೋರ್ಟ್

ಪ್ರವಾಹ ಹಿನ್ನೆಲೆಯಲ್ಲಿ ಶಿಕಾರಿಪುರದ ಕೆಲವು ಕಡೆ ಹೋಗಿ ಬಂದಿದ್ದೇನೆ. ಸೊರಬ, ಸಾಗರ ಮುಗಿಸಿ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ಕರೆದಿದ್ದೇನೆ ಎಂದು ಸಿಎಂ ತಿಳಿಸಿದರು.

ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ
author img

By

Published : Aug 13, 2019, 5:51 PM IST

ಶಿವಮೊಗ್ಗ: ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ಅಗತ್ಯವಿದ್ದು, ಕೈಗಾರಿಕೋದ್ಯಮಿಗಳು ಬರಲಿಕ್ಕೆ ತುಂಬಾ ಅನುಕೂಲವಾಗಲಿದೆ. ವಿಮಾನ ನಿಲ್ದಾಣ ಕೆಲಸ ಪ್ರಾರಂಭಿಸಲು ಸರ್ಕಾರದಿಂದ 40 ಕೋಟಿ ರೂ. ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಹೇಳಿದರು.

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಕೈಗಾರಿಕೋದ್ಯಮಿಗಳಿಗೆ ಸಮಯ ಬಹಳ ಮುಖ್ಯವಾಗಿರುತ್ತದೆ ಈ ನಿಟ್ಟಿನಲ್ಲಿ ವಿಮಾನ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಪ್ರವಾಹ ಹಿನ್ನೆಲೆಯಲ್ಲಿ ಶಿಕಾರಿಪುರದ ಕೆಲವು ಕಡೆ ಹೋಗಿ ಬಂದಿದ್ದೇನೆ. ಸೊರಬ, ಸಾಗರ ಮುಗಿಸಿ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ಕರೆದಿದ್ದೇನೆ.

ಮಾಧ್ಯಮದವರೊಂದಿಗೆ ಮುಖ್ಯಮಂತ್ರಿ ಪ್ರತಿಕ್ರಿಯೆ
ಅಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ನೆರೆಗೆ ಯಾವ ರೀತಿಯ ಪರಿಹಾರ ಹುಡುಕಬಹುದು ಎಂದು ತಿರ್ಮಾನ ಮಾಡುತ್ತೇನೆ ಎಂದರು.

ಇನ್ನು ಶಾಸಕರ ಮೇಲಿನ ಫೋನ್ ಕದ್ದಾಲಿಕೆ ಆರೋಪದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅದರಲ್ಲಿ ಸತ್ಯಾಂಶ ಇಲ್ಲ. ಯಾರ ಬಗ್ಗೆಯೂ ಆಧಾರರಹಿತ ಆರೋಪ ಮಾಡಲು ನನಗೆ ಇಷ್ಟ ಇಲ್ಲ ಎಂದು ಸಿಎಂ ಹೇಳಿದರು. ಹಾಗೆಯೇ 16ರಂದು ದೆಹಲಿಗೆ ಹೋಗಿ ಬಂದ ನಂತರ ಸಚಿವ ಸಂಪುಟ ರಚನೆ ಮಾಡಲಾಗವುದು ಎಂದು ತಿಳಿಸಿದರು.

Intro:ಶಿವಮೊಗ್ಗ,

ಶಿಕಾರಿಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನವರು ಶಿಕಾರಿಪುರದ ಕೆಲವು ಕಡೆ ಹೋಗಿ ಬಂದಿದ್ದೇನೆ. ಸೊರಬ, ಸಾಗರ ಮುಗಿಸಿ ಸಂಜೆ ಜಿಲ್ಲಾ ಪಂಚಾಯತ್ ಕಾರ್ಯಾಲಯದಲ್ಲಿ ಸಭೆ ಕರೆದಿದ್ದೇನೆ.
ಅಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಯಾವ ರೀತಿಯ ಪರಿಹಾರ ಹುಡುಕಬಹುದು ಎಂದು ತಿರ್ಮಾನ ಮಾಡುತ್ತೇನೆ ಎಂದರು.
ಶಿವಮೊಗ್ಗಕ್ಕೆ ವಿಮಾನ ನಿಲ್ದಾಣದ ಅಗತ್ಯ ಇದೆ ಕೈಗಾರಿಕೋದ್ಯಮಿಗಳು ಬರಲಿಕ್ಕೆ ತುಂಬಾ ಅನುಕೂಲವಾಗಲಿದ್ದು, ಕೈಗಾರಿಕೋದ್ಯಮಿಗಳಿಗೆ ಸಮಯ ತುಂಬಾ ಮುಖ್ಯವಾಗಿದೆ ಹಾಗಾಗಿ ಸರ್ಕಾರದಿಂದ 40 ಕೋಟಿ ಬಿಡುಗಡೆ ಮಾಡಲು ತೀರ್ಮಾನಿಸಿ ಸರ್ಕಾರದಿಂದ ಕೆಲಸ ಪ್ರಾರಂಭಿಸುತ್ತಿದ್ದೇವೆ ಎಂದರು.
ನಂತರದಲ್ಲಿ ಮಾಧ್ಯಮದವರು ಕೇಳಿದ ಬಿಜೆಪಿ-ಜೆಡಿಎಸ್ ಶಾಸಕರು ಮೇಲಿನ ಫೋನ್ ಕದ್ದಾಲಿಕೆ ವಿಚಾರದಲ್ಲಿ ಕುಮಾರಸ್ವಾಮಿಯವರ ಮೇಲೇ ಆರೋಪ ಇದೆ ಎಂದು ಕೇಳಿಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು.
ಅದರಲ್ಲಿ ಸತ್ಯಾಂಶ ಇಲ್ಲ .
ಯಾರ ಬಗ್ಗೆನೂ ಆಧಾರರಹಿತ ಆರೋಪ ಮಾಡಲು ನನಗೆ ಇಷ್ಟ ಇಲ್ಲ ಎಂದರು.
16ನೇ ತಾರೀಕು ದೆಹಲಿಗೆ ಹೋಗಿ ಬಂದ ನಂತರ ಸಚಿವ ಸಂಪುಟ ರಚನೆ ಮಾಡುತ್ತೇವೆ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ

Body:ಭೀಮಾನಾಯ್ಕ ಎಸ್ ಶಿವಮೊಗ್ಗ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.