ಬೆಂಗಳೂರು: ಸಿಲಿಕಾನ್ ಸಿಟಿಯ ಮುಸ್ಲಿಂ ಬಾಂಧವರು ರಂಜಾನ್ ಆಚರಣೆ ಮಾಡಲು ಖರ್ಜೂರಕ್ಕೆ ಮುಗಿಬೀಳ್ತಾರೆ. ಅದರಲ್ಲೂ ಶಿವಾಜಿನಗರದ ರಸಲ್ ಮಾರ್ಕೆಟ್ಗೆ ಹೋಗುವವರ ಸಂಖ್ಯೆಯೇ ಹೆಚ್ಚು. ಆದ್ರೆ ಸದ್ಯ ಕೊರೊನಾ ಭೀತಿ ಹಿನ್ನೆಲೆ ಶಿವಾಜಿನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದೆ.
ರಸಲ್ ಮಾರ್ಕೆಟ್ ಬಳಿ ಯಾವುದೇ ರೀತಿಯಾದ ವ್ಯಾಪಾರ ವಹಿವಾಟಿಗೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಸದ್ಯ ಲಾಕ್ ಡೌನ್ ಸಡಿಲಿಕೆ ಇರುವ ಕಾರಣ ವ್ಯಾಪಾರ ಮಾಡಬಹುದು ಎಂದು ಬಂದಿದ್ದ ವ್ಯಾಪಾರಿಗಳನ್ನ ಪೊಲೀಸರು ವಾಪಸ್ ಕಳುಹಿಸಿ ರಸೆಲ್ ಮಾರ್ಕೆಟ್ ಪ್ರವೇಶಿಸುವ ಎರಡು ಬದಿಗಳಲ್ಲಿ ಬ್ಯಾರಿಕೇಡ್ ಹಾಕಿದ್ದಾರೆ. ಹಾಗೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿದೆ.
ಶಿವಾಜಿನಗರದ ರಸೆಲ್ ಮಾರ್ಕೆಟ್ ಬಳಿ ಜನ ಮುಗಿಬೀಳುವ ಸಾಧ್ಯತೆ ಇದೆ. ಯಾಕಂದ್ರೆ ರಸೆಲ್ ಮಾರುಕಟ್ಟೆಯಲ್ಲಿ ಖರ್ಜೂರ ಹಾಗೂ ಒಣ ಹಣ್ಣುಗಳ ಮೇಳ ನಡೆಯುತ್ತಿತ್ತು. ವಿದೇಶಗಳಿಂದ ಬರುವ ಅಜುವಾ ಖರ್ಜೂರ, ಸಕ್ಕರೆ ರಹಿತ ಮೆಡ್ಜಾಲ್ ಕಿಂಗ್ ಖರ್ಜೂರ, ಸಫಾವಿ, ಸುಖ್ರಿ ಅರ್ಧ ಬಿಳಿ ಬಣ್ಣದ ಸುಗಾಯಿ ಖರ್ಜೂರ ಕೂಡ ಇಲ್ಲಿಗೆ ಖರ್ಜೂರಗಳು ಬರುತ್ತಿದ್ದವು. ಆದರೆ ಸದ್ಯ ರಸೆಲ್ ಮಾರ್ಕೆಟ್ ಕ್ಲೋಸ್ ಆಗಿದೆ.