ETV Bharat / state

ವೀರಶೈವ ಲಿಂಗಾಯತರು ಸಿಡಿದೇಳದಂತೆ ಡ್ಯಾಮೇಜ್‌ ಕಂಟ್ರೋಲ್‌ಗೆ ಮುಂದಾದ ಯಡಿಯೂರಪ್ಪ - ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ

ರಾಜೀನಾಮೆ ನೀಡಿರುವ 'ಶೆಟ್ಟರ್ ಫ್ಯಾಕ್ಟರ್' ಬಿಜೆಪಿ ಮೇಲೆ ಕೆಟ್ಟ ಪರಿಣಾಮ ಬೀರದಂತೆ ನೋಡಿಕೊಳ್ಳಲು ಹೈಕಮಾಂಡ್‌ನಿಂದ ಯಡಿಯೂರಪ್ಪನವರಿಗೆ ಸೂಚನೆ ಬಂದಿದೆ.

Former CM BS Yeddyurappa
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
author img

By

Published : Apr 16, 2023, 4:52 PM IST

ಬೆಂಗಳೂರು : ಹುಬ್ಬಳ್ಳಿ-ಧಾರವಾಡ ಭಾಗದ ಪ್ರಭಾವಿ ನಾಯಕ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಟಿಕೆಟ್​ ಕೈ ತಪ್ಪಿದ ಕಾರಣಕ್ಕೆ ಬಿಜೆಪಿ ತೊರೆದಿದ್ದು, ಅದರ ಪರಿಣಾಮ ಬಿಜೆಪಿ ಮೇಲಾಗದಂತೆ ಮುನ್ನೆಚ್ಚರಿಕೆ ವಹಿಸಲು ಹೈಕಮಾಂಡ್ ಪಕ್ಷದ ಹಿರಿಯ ನಾಯಕ ಹಾಗು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರಿಗೆ ಸೂಚಿಸಿದೆ. ಶೆಟ್ಟರ್ ಪ್ರಭಾವವಿರುವ ಕಡೆ ಈಗ ಯಡಿಯೂರಪ್ಪ ಹೆಚ್ಚಿನ ಪ್ರಚಾರ ನಡೆಸಿ 'ಶೆಟ್ಟರ್ ಫ್ಯಾಕ್ಟರ್' ಬಿಜೆಪಿ ಮೇಲಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ಜೊತೆಗೆ, ವೀರಶೈವ ಲಿಂಗಾಯತ ಸಮುದಾಯದ ಮತಗಳು ಚದುರದಂತೆ ಯಡಿಯೂರಪ್ಪ ಮೂಲಕವೇ ಹಿಡಿದಿಟ್ಟುಕೊಳ್ಳಲು ವರಿಷ್ಠರು ಚಿಂತನೆ ನಡೆಸಿದ್ದಾರೆ.

ವರಿಷ್ಠರ ಸಂದೇಶ ಬರುತ್ತಿದ್ದಂತೆ ಇಂದು ತುರ್ತು ಸುದ್ದಿಗೋಷ್ಟಿ ನಡೆಸಿದ ಯಡಿಯೂರಪ್ಪ, ಶೆಟ್ಟರ್ ಮನವೊಲಿಕೆ ಕಾರ್ಯದಲ್ಲಿ ನಡೆದ ಆಂತರಿಕ ವಿಷಯಗಳನ್ನು ಬಹಿರಂಗಪಡಿಸಿ ಮೊದಲ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಈಗಾಗಲೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದ ಶೆಟ್ಟರ್ ಅವರನ್ನು ಕೇಂದ್ರಕ್ಕೆ ಬರುವಂತೆ ಸೂಚಿಸಲಾಗಿತ್ತು. ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರಕ್ಕೆ ಅವರ ಕುಟುಂಬದ ಯಾರಿಗಾದರೂ ಅಥವಾ ಅವರು ಹೇಳುವ ಯಾರಿಗಾದರೂ ಟಿಕೆಟ್ ನೀಡುವ ಭರವಸೆ ನೀಡಲಾಗಿತ್ತು. ಹೊಸ ಮುಖಕ್ಕೆ ಅವಕಾಶ ನೀಡಿ ಯುವಪೀಳಿಗೆಯನ್ನು ಬೆಳೆಸಲು ಕೈಗೊಂಡ ನಿರ್ಣಯ ಇದಾಗಿತ್ತು. ಆದರೂ ಇದನ್ನು ಒಪ್ಪದೆ ಶೆಟ್ಟರ್ ಪಕ್ಷ ತೊರೆದಿದ್ದಾರೆ ಎಂದು ಜಗದೀಶ್ ಶೆಟ್ಟರ್‌ಗೆ ಟಾಂಗ್ ನೀಡಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಇಬ್ಬರಿಗೂ ಪಕ್ಷ ಭವಿಷ್ಯದ ಆಫರ್ ನೀಡಿದ್ದರೂ ತಿರಸ್ಕರಿಸಿ ಹೊರ ನಡೆದಿದ್ದಾರೆ. ಹಾಗಾಗಿ ಇಲ್ಲಿ ವೀರಶೈವ ಲಿಂಗಾಯತ ಸಮುದಾಯವನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿಕೆ ನೀಡಿರುವ ಯಡಿಯೂರಪ್ಪ ಪಕ್ಷದಲ್ಲಿ ವೀರಶೈವ ಲಿಂಗಾಯರಿಗೆ ಎಲ್ಲ ರೀತಿಯ ಅವಕಾಶಗಳೂ ಸಿಕ್ಕಿವೆ. ಈ ಸಮುದಾಯವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ, ಹಿಂದೆಯೂ ಕಡೆಗಣಿಸಿರಲಿಲ್ಲ. ಮುಂದೆಯೂ ಕಡೆಗಣಿಸಲ್ಲ, ಕಾಂಗ್ರೆಸ್ ಮಾಡುತ್ತಿರುವ ಆರೋಪ ನಿರಾಧಾರ ಎಂದು ವೀರಶೈವ ಲಿಂಗಾಯತ ಸಮುದಾಯ ಬಿಜೆಪಿಯಿಂದ ಚದುರುವುದನ್ನು ತಡೆಯುವ ಪ್ರಯತ್ನ ನಡೆಸಿದ್ದಾರೆ.

ಜಗದೀಶ್ ಶೆಟ್ಟರ್ ಸ್ಪರ್ಧೆ ಮಾಡಲಿರುವ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಹಾಗು ಸವದಿ ಸ್ಪರ್ಧೆ ಮಾಡಲಿರುವ ಅಥಣಿ ಕ್ಷೇತ್ರ ಹಾಗು ಅದರ ಸುತ್ತಮುತ್ತಲ ಕ್ಷೇತ್ರಗಳಲ್ಲಿ ಯಡಿಯೂರಪ್ಪ ಹೆಚ್ಚಿನ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಈ ನಾಯಕರು ಪಕ್ಷ ಬಿಟ್ಟಿದ್ದು ಯಾಕೆ, ಪಕ್ಷ ಇವರಿಗೆ ಏನೆಲ್ಲಾ ಅವಕಾಶ, ಅಧಿಕಾರ ನೀಡಿತ್ತು ಎನ್ನುವುದನ್ನು ಜನತೆಯ ಮುಂದಿಟ್ಟು, ಇವರ ರಾಜೀನಾಮೆ ಎಫೆಕ್ಟ್ ಪಕ್ಷಕ್ಕೆ ತಟ್ಟದಂತೆ ನೋಡಿಕೊಳ್ಳುವ ನಿರ್ಧಾರವನ್ನು ಯಡಿಯೂರಪ್ಪ ಮಾಡಿದ್ದಾರೆ. ಹಾಗಾಗಿ ಪಕ್ಷ ಬಿಟ್ಟವರು ಮತ್ತು ಲಿಂಗಾಯತ ಸಮುದಾಯದ ಮತಗಳು ಹೆಚ್ಚಿರುವ ಕಡೆ ಪ್ರಚಾರ ಕಾರ್ಯಕ್ಕೆ ಯಡಿಯೂರಪ್ಪ ಹೆಚ್ಚಿನ ಸಮಯ ಮೀಸಲಿಡಲಿದ್ದಾರೆ.

ಏಪ್ರಿಲ್ 21 ರಿಂದ ರಾಜ್ಯ ಪ್ರವಾಸ ಆರಂಭಿಸುವ ಘೋಷಣೆ ಮಾಡಿರುವ ಯಡಿಯೂರಪ್ಪ ಮೇ.8ರವರೆಗೂ ವಿರಮಿಸುವುದಿಲ್ಲ. ನಿರಂತರವಾಗಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತೇನೆ ಎಂದು ಘೋಷಿಸಿದ್ದು, ಶೆಟ್ಟರ್, ಸವದಿ, ಗೂಳಿಹಟ್ಟಿ, ಎಂ.ಪಿ.ಕುಮಾರಸ್ವಾಮಿ ಸೇರಿದಂತೆ ಹಲವರ ಕ್ಷೇತ್ರಗಳನ್ನು ಟಾರ್ಗೆಟ್ ಮಾಡಿಕೊಂಡು ಪ್ರಚಾರ ನಡೆಸಿ ಅಲ್ಲೆಲ್ಲಾ ಪಕ್ಷಕ್ಕೆ ಆಗಿರುವ ಡ್ಯಾಮೇಜ್ ಕಂಟ್ರೋಲ್ ಮಾಡಲು ಯಡಿಯೂರಪ್ಪ ಪ್ರಯತ್ನ ನಡೆಸಲಿದ್ದಾರೆ.

ಈಗಾಗಲೇ ವೀರಶೈವ ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಪ್ರವರ್ಗ ರಚಿಸಿ ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡಿದ್ದು, ಈ ವಿಚಾರವನ್ನು ಮುಂದಿಟ್ಟು ಬಿಜೆಪಿ ವೀರಶೈವ ಲಿಂಗಾಯತ ಸಮುದಾಯದ ವಿರುದ್ಧ ಇಲ್ಲ. ಸಮುದಾಯದ ನಾಯಕರನ್ನು ಪಕ್ಷ ಕಡೆಗಣಿಸುತ್ತಿಲ್ಲ ಎನ್ನುವ ಸಂದೇಶವನ್ನು ಪ್ರಚಾರದ ಉದ್ದಕ್ಕೂ ಯಡಿಯೂರಪ್ಪ ನೀಡಿ ಅಭ್ಯರ್ಥಿಗಳ ಪರ ಮತ ಯಾಚನೆ ಮಾಡಲಿದ್ದಾರೆ. ಆ ಮೂಲಕ ಶೆಟ್ಟರ್, ಸವದಿ ಫ್ಯಾಕ್ಟರ್ ಈ ಚುನಾವಣೆಯಲ್ಲಿ ಬಿಜೆಪಿಗೆ ತಟ್ಟದಂತೆ ನೋಡಿಕೊಳ್ಳಲಿದ್ದಾರೆ.

ಇದನ್ನೂ ಓದಿ : ಹುಬ್ಬಳ್ಳಿ - ಧಾರವಾಡ ಸೆಂಟ್ರಲ್​ ಕ್ಷೇತ್ರದ ಬಿಜೆಪಿ ಟಿಕೆಟ್​ಗಾಗಿ ಫೈಟ್: ಟೆಂಗಿನಕಾಯಿ ಸೇರಿ ಆಕಾಂಕ್ಷಿಗಳ ಹಾದಿ ಸುಗಮ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.