ಬೆಂಗಳೂರು: ಹೊಸಕೋಟೆಯ ನೂತನ ಶಾಸಕರಾಗಿ ಶರತ್ ಬಚ್ಚೇಗೌಡ ಇಂದು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಈಟಿವಿ ಭಾರತ ಪ್ರತಿನಿಧಿ ನಡೆಸಿದ ಚಿಟ್ಚಾಟ್ನಲ್ಲಿ ಮಾತನಾಡಿದ ಅವರು, ನನ್ನ ಮೇಲೆ ಜವಾಬ್ದಾರಿ ಹೆಚ್ಚಾಗಿದೆ. ಸದ್ಯ ಯಾವುದೇ ಪಕ್ಷಕ್ಕೆ ಸೇರುವ ಚಿಂತನೆ ಇಲ್ಲ. ಆದರೆ, ಅಂತಹ ಸಂದರ್ಭ ಬಂದಲ್ಲಿ ಕ್ಷೇತ್ರದ ಜನರ ಜೊತೆ ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಹೇಳಿದ್ದಾರೆ.