ETV Bharat / state

ಕೊಳಚೆ ನೀರು ಕೆರೆಗೆ ಹರಿಯುವ ಬಗ್ಗೆ ಆಕ್ಷೇಪ: ಸಚಿವ ಮಾಧುಸ್ವಾಮಿ ವಿರುದ್ಧ ಲಿಂಬಾವಳಿ ಗರಂ - ಬೆಂಗಳೂರಲ್ಲಿ ಕೊಳಚೆ ನೀರು ಕೆರೆಗಳಿಗೆ ಹೋಗುತ್ತಿದೆ

ಕೊಳಚೆ ನೀರು ಕೆರೆಗೆ ಹರಿಯಲ್ಲ ಎಂಬ ಹೇಳಿಕೆ ನೀಡಬೇಡಿ. ಬನ್ನಿ ನಮ್ಮ ಕ್ಷೇತ್ರಕ್ಕೆ ತೋರಿಸುತ್ತೇನೆ. ಕೊಳಚೆ ನೀರು ಕೆರೆಗೇ ಹೋಗುತ್ತದೆ ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಲಿಂಬಾವಳಿ ಗರಂ ಆದರು.

sewage-water-flow-into-lake-minister-madhuswamy-versus-aravind-limbavali
ಕೊಳಚೆ ನೀರು ಕೆರೆಗೆ ಹರಿಯುವ ಬಗ್ಗೆ ಆಕ್ಷೇಪ: ಸಚಿವ ಮಾಧುಸ್ವಾಮಿ ವಿರುದ್ಧ ಲಿಂಬಾವಳಿ ಗರಂ
author img

By

Published : Sep 14, 2022, 10:38 PM IST

ಬೆಂಗಳೂರು: ಕೊಳಚೆ ನೀರು ಕೆರೆಗಳಿಗೆ ಹರಿಯುವ ವಿಚಾರವಾಗಿ ಸಚಿವ ಮಾಧುಸ್ವಾಮಿ ವಿರುದ್ಧವೇ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಗರಂ ಆದ ಘಟನೆ ನಡೆಯಿತು.

ವಿಧಾನಸಭೆಯಲ್ಲಿ ಅತಿವೃಷ್ಟಿ ಮೇಲಿನ ಚರ್ಚೆ ವೇಳೆ ಮಾಜಿ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರಲ್ಲಿ ಕೊಳಚೆ ನೀರು ಕೆರೆಗಳಿಗೆ ಹೋಗುತ್ತಿದೆ. ನನ್ನ ಕ್ಷೇತ್ರದಲ್ಲಿ, ಲಿಂಬಾವಳಿ ಕ್ಷೇತ್ರದಲ್ಲಿ ಕೊಳಚೆ ನೀರು ಕೆರೆಗೆ ಹರಿಯುತ್ತಿದೆ ಎಂದು ಆರೋಪಿಸಿದರು.

ಆಗ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ ಕೊಳಚೆ ನೀರು ಕೆರೆಗೆ ಹೋಗುತ್ತದೆ ಎನ್ನಬೇಡಿ. ಎನ್​ಜಿಟಿಗೆ ನಾವು ಉತ್ತರಿಸಬೇಕಾಗುತ್ತದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ, ಮಾಧುಸ್ವಾಮಿ ವಿರುದ್ಧ ಲಿಂಬಾವಳಿ ಗರಂ ಆದರು. ಅಲ್ಲದೇ, ನೀವು ಟ್ಯಾಂಕ್​ಗೆ ಕೊಳಚೆ ನೀರು ಹೋಗಲ್ಲ ಅನ್ನಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಸಚಿವ ಮಾಧುಸ್ವಾಮಿ ಕುಳಿತುಕೊಳ್ಳಿ ಅಂದರು. ಇದಕ್ಕೆ ಸಿಟ್ಟಾದ ಲಿಂಬಾವಳಿ ನನ್ನನ್ನು ಕುಳಿತು ಕೊಳ್ಳಲು ನೀವು ಹೇಳಬೇಡಿ. ಕೊಳಚೆ ನೀರು ಕೆರೆಗೆ ಹರಿಯಲ್ಲ ಎಂಬ ಹೇಳಿಕೆ ನೀಡಬೇಡಿ. ಆ ತರ ಹೇಳಿಕೆ ಕೊಡಬೇಡಿ. ಬನ್ನಿ ನಮ್ಮ ಕ್ಷೇತ್ರಕ್ಕೆ ತೋರಿಸುತ್ತೇನೆ. ಕೊಳಚೆ ನೀರು ಕೆರೆಗೇ ಹೋಗುತ್ತದೆ. ಮೊದಲು ಅದನ್ನು ಸರಿಪಡಿಸಿ. ಆ ತರದ ಹೇಳಿಕೆ‌ ಕೊಡಬೇಡಿ ಎಂದು ಸಚಿವ ಮಾಧುಸ್ವಾಮಿ ವಿರುದ್ಧ ಲಿಂಬಾವಳಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಲೋಕಾಯುಕ್ತ ಬಲವೃದ್ಧಿಸುವ ತಿದ್ದುಪಡಿ ಬಿಲ್: ಸಭಾಪತಿ ಚುನಾವಣೆಗೆ ಸಚಿವ ಸಂಪುಟ ಅಸ್ತು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.